IPL 2022 Auction: ಇತ್ತ ಆರ್​ಸಿಬಿ ಹರಾಜಿನಲ್ಲಿ ಖರೀದಿಸಿದ ಬೆನ್ನಲ್ಲೇ ಅತ್ತ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ ಸ್ಟಾರ್ ಬ್ಯಾಟರ್

| Updated By: Vinay Bhat

Updated on: Feb 13, 2022 | 8:57 AM

Faf du Plessis: ಇತ್ತ ಆರ್​​ಸಿಬಿ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಖರೀದಿಸಿದ ಬೆನ್ನಲ್ಲೇ ಅತ್ತ ಫಾಫ್ ಡುಪ್ಲೆಸಿಸ್​ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಸದ್ಯ ಇವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಕೊಮಿಲ್ಲ ವಿಕ್ಟೋರಿಯನ್ಸ್ ತಂಡದ ಪರವಾಗಿ ಆಡುತ್ತಿದ್ದು ನಾಯಕನಾಗಿದ್ದಾರೆ.

IPL 2022 Auction: ಇತ್ತ ಆರ್​ಸಿಬಿ ಹರಾಜಿನಲ್ಲಿ ಖರೀದಿಸಿದ ಬೆನ್ನಲ್ಲೇ ಅತ್ತ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ ಸ್ಟಾರ್ ಬ್ಯಾಟರ್
Faf du Plessis RCB
Follow us on

ಐಪಿಎಲ್ 2022 ಮೆಗಾ ಆಕ್ಷನ್​ನ (IPL 2022 Auction) ಮೊದಲ ದಿನದಲ್ಲಿ ಬಹುತೇಕ ಎಲ್ಲ ಫ್ರಾಂಚೈಸಿ ಹಣದ ಮಳೆಯನ್ನೇ ಸುರಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮೊದಲ ದಿನ ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ವಾನಿಂದು ಹಸರಂಗ, ಫಾಫ್ ಡುಪ್ಲೆಸಿಸ್, ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮದ್ ಹಾಗೂ ಅಕಾಶ್ ದೀಪ್ ಅವರನ್ನು ಖರೀದಿ ಮಾಡಿದೆ. ಹರಾಜು ಆರಂಭವಾಗಿ ಸಮಯ ಕಳೆದರೂ ಆರ್​​ಸಿಬಿ ಯಾವೊಬ್ಬ ಆಟಗಾರನನ್ನು ಖರೀದಿಸಲು ಮುಂದೆ ಬರಲಿಲ್ಲ. ಆದರೆ, ಯಾವಾಗ ಆಫ್ರಿಕಾ ಸ್ಟಾರ್ ಬ್ಯಾಟರ್ ಫಾಫ್ ಡುಪ್ಲಿಸಿಸ್ (Faf du Plessis) ಹೆಸರು ಬಂತೋ ಆಗ ಬಿಡ್ಡಿಂಗ್‌ಗೆ ಇಳಿಯಿತು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌  ಡುಪ್ಲೆಸಿಸ್‌ ಖರೀದಿಸಲು ಪಟ್ಟು ಬಿಡದೆ ಪೈಪೋಟಿ ನಡೆಸಿತು. ವಿರಾಟ್‌ ಕೊಹ್ಲಿ ನಾಯಕತ್ವ ಬಿಟ್ಟಿರುವ ಕಾರಣ ಅನುಭವಿ ನಾಯಕನನ್ನು ತಂಡಕ್ಕೆ ಕರೆ ತರುವ ಉದ್ದೇಶದಿಂದ ಫಾಫ್​ರನ್ನು ಬರೋಬ್ಬರಿ 7 ಕೋಟಿ ರೂ. ಬೆಲೆ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಇತ್ತ ಆರ್​​ಸಿಬಿ ಖರೀದಿಸಿದ ಬೆನ್ನಲ್ಲೇ ಅತ್ತ ಡುಪ್ಲೆಸಿಸ್​ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಸದ್ಯ ಇವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಕೊಮಿಲ್ಲ ವಿಕ್ಟೋರಿಯನ್ಸ್ ತಂಡದ ಪರವಾಗಿ ಆಡುತ್ತಿದ್ದು ನಾಯಕನಾಗಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಇವರು ಕೇವಲ 54 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 101 ರನ್ ಚಚ್ಚಿದ್ದಾರೆ. ಇವರ ಶತಕದ ನೆರವಿನಿಂದ ವಿಕ್ಟೋರಿಯನ್ಸ್ ತಂಡ 20 ಓವರ್​ಗಳಲ್ಲಿ 182 ರನ್ ಬಾರಿಸಿತು. ಆದರೆ, ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಖುಲ್ನಾ ಟೈಗರ್ಸ್ ತಂಡ 18.4 ಓವರ್​ನಲ್ಲಿ ಗುರಿ ಮುಟ್ಟಿ ಜಯ ಕಂಡಿತು.

ಫಾಫ್ ಡುಪ್ಲೆಸಿಸ್ ಖರೀದಿಗೆ ಹರಾಜಿನಲ್ಲಿ ಆರ್‌ಸಿಬಿ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸಖತ್ ಬಿಡ್ ನಡೆಸಿದವು. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮಾಜಿ ಆಟಗಾರರನ್ನ ಮತ್ತೆ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ, ಅಂತಿಮವಾಗಿ ಡುಪ್ಲೆಸಿಸ್ ಬೆಲೆಯನ್ನ ಏಳು ಕೋಟಿ ರೂಪಾಯಿಗೆ ಆರ್‌ಸಿಬಿ ಬಿಡ್ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಬಿಡ್‌ ನಿಂದ ಹಿಂದೆ ಸರಿಯಿತು. ಪರಿಣಾಮ ಅಂತಿಮವಾಗಿ ಡುಪ್ಲೆಸಿಸ್‌ 7 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಾದರು. ಈ ಮೂಲಕ ಐಪಿಎಲ್ 15ನೇ ಸೀಸನ್‌ನಲ್ಲಿ ಆರ್‌ಸಿಬಿ ಪರ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ.

ಮೊದಲನೇ ದಿನ ಹಲವಾರು ದಾಖಲೆಯ ಬಿಡ್ಡಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ಆಟಗಾರರನ್ನು ಖರೀದಿಸಿತು. ಈ ಮೂಲಕ ಮೆಗಾ ಹರಾಜು ಪ್ರಕ್ರಿಯೆಯ ಮೊದಲನೇ ದಿನ 11 ಆಟಗಾರರನ್ನು ಹೊಂದಿದೆ. ಸದ್ಯ ಬೆಂಗಳೂರು ಫ್ರಾಂಚೈಸಿ ಬಳಿ 9.25 ಕೋಟಿ ರೂ. ಮೊತ್ತವನ್ನಷ್ಟೆ ಉಳಿಸಿಕೊಂಡಿದೆ. ಆರ್​​ಸಿಬಿ ಇಂದು ಎರಡನೇ ದಿನದ ಹರಾಜಿನಲ್ಲಿ ಮತ್ತೊಬ್ಬ ಓಪನರ್ ಅನ್ನು ಹುಡುಕಬೇಕಿದೆ, ಹೀಗಾಗಿ ಯಾರನ್ನು ಎಷ್ಟು ಮೊತ್ತಕ್ಕೆ ಖರೀದಿ ಮಾಡ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

IPL 2022 Auction: ಇಂದು ಎರಡನೇ ದಿನದ ಐಪಿಎಲ್ 2022 ಮೆಗಾ ಆಕ್ಷನ್: ದೊಡ್ಡ ಮೊತ್ತದ ಲಿಸ್ಟ್​ನಲ್ಲಿ ಯಾರಿದ್ದಾರೆ?