FAKE Scorecard: ವಿರಾಟ್ ಕೊಹ್ಲಿ ಸ್ಪೋಟಕ ಶತಕ: ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Oct 10, 2022 | 12:07 PM

India vs Pakistan: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೇಕ್ ಸ್ಕೋರ್ ಕಾರ್ಡ್​ ಬಗ್ಗೆ ಪರ ವಿರೋಧಿ ಚರ್ಚೆಗಳು ಶುರುವಾಗಿದೆ. ಇದಾಗ್ಯೂ ಇಂತಹದೊಂದು ಭವಿಷ್ಯ ನುಡಿದಿರುವವರು ಯಾರು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

FAKE Scorecard: ವಿರಾಟ್ ಕೊಹ್ಲಿ ಸ್ಪೋಟಕ ಶತಕ: ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ
FAKE Scorecard
Follow us on

T20 World Cup 2022: ಟಿ20 ವಿಶ್ವಕಪ್​ ಇನ್ನೂ ಕೂಡ ಶುರುವಾಗಿಲ್ಲ. ಅದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ (Team India) ಗೆಲುವೇ? ಇಂತಹದೊಂದು ಪ್ರಶ್ನೆ ಮೂಡಲುಲ ಮುಖ್ಯ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್​. ಹೌದು, ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭವಿಷ್ಯವೊಂದು ಹೇಳಲಾಗಿದೆ. ಈ ಭವಿಷ್ಯವಾಣಿಯನ್ನು ಆಧರಿಸಿದ ಫೇಕ್​ ಸ್ಕೋರ್ ಬೋರ್ಡ್​ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ನಕಲಿ ಸ್ಕೋರ್​ ಬೋರ್ಡ್​ನಲ್ಲಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಭಾರತದ ಪರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. 58 ಎಸೆತಗಳನ್ನು ಎದುರಿಸಲಿರುವ ಕೊಹ್ಲಿ 117 ರನ್​ ಬಾರಿಸಲಿದ್ದು, ಕಿಂಗ್ ಕೊಹ್ಲಿಯ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್​ಗಳಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಇನ್ನು 225 ರನ್​ಗಳನ್ನು ಬೆನ್ನತ್ತಲಿರುವ ಪಾಕಿಸ್ತಾನ್ ತಂಡವು ಮೊಹಮ್ಮದ್ ರಿಜ್ವಾನ್ (75) ಅವರ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 171 ರನ್​ಗಳಿಸಲಷ್ಟೇ ಶಕ್ತರಾಗಲಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಟೀಮ್ ಇಂಡಿಯಾ ಅಕ್ಟೋಬರ್ 23 ರಂದು 53 ರನ್​ಗಳ ಭರ್ಜರಿ ಜಯ ಸಾಧಿಸಲಿದೆ.

ಅಚ್ಚರಿ ಎಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ದೀಪಕ್ ಚಹರ್ 4 ಓವರ್​ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಲಿದ್ದಾರಂತೆ. ಆದರೆ ಚಹರ್ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದ ಭಾಗವಲ್ಲ. ಬದಲಾಗಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಇದೀಗ ಜಸ್​ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ ದೀಪಕ್ ಚಹರ್ ಆಯ್ಕೆಯಾಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೇಕ್ ಸ್ಕೋರ್ ಕಾರ್ಡ್​ ಬಗ್ಗೆ ಪರ ವಿರೋಧಿ ಚರ್ಚೆಗಳು ಶುರುವಾಗಿದೆ. ಇದಾಗ್ಯೂ ಇಂತಹದೊಂದು ಭವಿಷ್ಯ ನುಡಿದಿರುವವರು ಯಾರು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಒಟ್ಟಿನಲ್ಲಿ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನಕ್ಕೆ ದಿನಗಳು ಮಾತ್ರ ಉಳಿದಿರುವಾಗ ನಾನಾ ರೀತಿಯ ಸುದ್ದಿಗಳು ಹರಿದಾಡಲಾರಂಭಿಸಿರುವುದೇ ಅಚ್ಚರಿ.

 

Published On - 12:05 pm, Mon, 10 October 22