“ವಿರಾಟ್ ಕೊಹ್ಲಿ ಎಲ್ಲಿ?”: ಸೂರ್ಯ, ರೋಹಿತ್, ರಾಹುಲ್​ಗೆ ಅವಕಾಶ; ಐಸಿಸಿ ಹೊಸ ವಿಡಿಯೋಗೆ ಫ್ಯಾನ್ಸ್ ಗರಂ

| Updated By: ಪೃಥ್ವಿಶಂಕರ

Updated on: Oct 19, 2022 | 1:52 PM

ವಾಸ್ತವವಾಗಿ, ಐಸಿಸಿ ಹೊಸ ವಿಡಿಯೋವೊಂದನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ನಾಯಕ ರೋಹಿತ್, ಉಪನಾಯಕ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಚಹಾಲ್ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಎಲ್ಲಿ?: ಸೂರ್ಯ, ರೋಹಿತ್, ರಾಹುಲ್​ಗೆ ಅವಕಾಶ; ಐಸಿಸಿ ಹೊಸ ವಿಡಿಯೋಗೆ ಫ್ಯಾನ್ಸ್ ಗರಂ
Team India
Follow us on

ವಿರಾಟ್ ಕೊಹ್ಲಿ (Virat Kohli).. ವಿಶ್ವ ಕ್ರಿಕೆಟ್​ನ ಅನಭಿಶಕ್ತ ದೊರೆ. ತನ್ನ ಅದ್ಭುತ ಬ್ಯಾಟಿಂಗ್​ನಿಂದ ಇಡೀ ಕ್ರಿಕೆಟ್​ ದುನಿಯಾದ ಮನೆಮಾತಾಗಿರುವ ಕೊಹ್ಲಿ ಸಾಕಷ್ಟು ದಾಖಲೆಗಳ ಸರದಾರರಾಗಿದ್ದಾರೆ. ಜೊತೆಗೆ ಭಾರತ ಕ್ರಿಕೆಟ್​ಗೆ ಆಕ್ರಮಣಕಾರಿ ಆಟವನ್ನು ಪರಿಚಿಯಿಸಿದ ಕೀರ್ತಿಯೂ ಕೊಹ್ಲಿಗೆ ಸಲ್ಲಬೇಕಾಗುತ್ತದೆ. ತಂಡದ ಸ್ಟಾರ್ ಬ್ಯಾಟರ್ ಆಗಿ ಹಾಗೂ ನಾಯಕನಾಗಿ ವಿಶ್ವಕ್ರಿಕೆಟ್​ನಲ್ಲಿ ಟೀಂ ಇಂಡಿಯಾವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೊಹ್ಲಿ ಈಗ ಟಿ20 ವಿಶ್ವಕಪ್​ನಲ್ಲಿ (T20 World Cup 2022 ) ಟೀಂ ಇಂಡಿಯಾದ ಪ್ರಮುಖ ಟ್ರಂಪ್ ಕಾರ್ಡ್​ ಆಗಿದ್ದಾರೆ. ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲೇ ಅದ್ಭುತ ಫೀಲ್ಡಿಂಗ್ ಮೂಲಕ ತಂಡದ ಗೆಲುವಿಗೆ ಕಾರಣರಾದ ಕೊಹ್ಲಿಗೆ ಐಸಿಸಿ (ICC) ಅವಮಾನ ಮಾಡಿದೆ ಎಂದು ಕೊಹ್ಲಿ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ವಾಸ್ತವವಾಗಿ, ಐಸಿಸಿ ಹೊಸ ವಿಡಿಯೋವೊಂದನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ನಾಯಕ ರೋಹಿತ್, ಉಪನಾಯಕ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಚಹಾಲ್ ಕಾಣಿಸಿಕೊಂಡಿದ್ದಾರೆ. ಆದರೆ ಕೊಹ್ಲಿ ಈ ವಿಡಿಯೋದಲ್ಲಿರದಿರುವುದನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಹ್ಲಿಯನ್ನು ಕಡೆಗಣಿಸಿದ ಐಸಿಸಿ ಮೇಲೆ ಅಭಿಮಾನಿಗಳು ತಮ್ಮ ಆಕ್ರೋಶನ್ನು ಹೊರಹಾಕುತ್ತಿದ್ದಾರೆ.

ಇನ್ನು ಈ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೇಲುಬಾಗಿರುವ ಕಿಂಗ್ ಕೊಹ್ಲಿ, ಈ ಮುಂಚೆ ಟೀಂ ಇಂಡಿಯಾ ಆಡಿದ್ದ ಎರಡು ಅನಧಿಕೃತ ಅಭ್ಯಾಸಗಳಿಂದ ಹೊರಗಿದ್ದರು. ಆದರೆ ಆಸೀಸ್ ವಿರುದ್ಧ ಆಡಿದ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಿರಾಟ್, ಬ್ಯಾಟ್ ಮೂಲಕ ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ 13 ಎಸೆತಗಳನ್ನು ಎದುರಿಸಿದ ಕೊಹ್ಲಿ 19 ರನ್​ಗಳಿಸಿ ಔಟಾಗಿದ್ದರು.

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಐವರು ಬೌಲರ್​ಗಳಿವರು..!

ಆಸೀಸ್ ವಿರುದ್ಧ ಅದ್ಭುತ ಫೀಲ್ಡಿಂಗ್

ಆದರೆ ಫೀಲ್ಡಿಂಗ್​ನಲ್ಲಿ ತಮ್ಮ ಕ್ಷಮತೆ ತೋರಿದ ವಿರಾಟ್, ಆಸೀಸ್ ತಂಡದ ಪ್ರಮುಖ ಎರಡು ವಿಕೆಟ್ ಉರುಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಸೀಸ್ ವಿರುದ್ಧ ಆಡಿದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಬೇಕೆಂದರೆ ಕೊನೆಯ 6 ಎಸೆತಗಳಲ್ಲಿ 11 ರನ್​ಗಳನ್ನು ಬಚಾವ್ ಮಾಡಬೇಕಿತ್ತು. ಈ ವೇಳೆ ದಾಳಿಗಿಳಿದ ಶಮಿ ಮೊದಲೆರಡು ಎಸೆತಗಳಲ್ಲಿ 2 ರನ್ ಬಿಟ್ಟುಕೊಟ್ಟರು. ಆ ಬಳಿಕ ಉಳಿದ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ್ದರು. ಆದರೆ ಈ 4 ವಿಕೆಟ್​ಗಳಲ್ಲಿ 2 ವಿಕೆಟ್​ಗಳು ಕೊಹ್ಲಿಯ ಅದ್ಭುತ ಫೀಲ್ಡಿಂಗ್​ನಿಂದ ಬಂದವು. ಹೀಗಾಗಿ ಈ ಎರಡು ವಿಕೆಟ್​ಗಳ ಪೂರ್ಣ ಕ್ರೆಡಿಟ್​ ಅನ್ನು ಕೊಹ್ಲಿಗೆ ನೀಡಬೇಕಾಗುತ್ತದೆ.

ಈಗ ವಿಶ್ವದ ಕಣ್ಣು ಅ. 23 ರಂದು ನಡೆಯುವ ಭಾರತ- ಪಾಕ್ ನಡುವಿನ ಪಂದ್ಯದ ಮೇಲಿದ್ದು, ಈ ಪಂದ್ಯದಲ್ಲಿ ಕೊಹ್ಲಿಯ ಮೇಲೆ ಹೆಚ್ಚಿನ ಜವಬ್ದಾರಿ ಇರಲಿದೆ. ಏಕೆಂದರೆ ಈ ಹಿಂದೆ ಪಾಕ್ ವಿರುದ್ಧ ನಡೆದಿರುವ ಪಂಧ್ಯಗಳಲ್ಲಿ ಕೊಹ್ಲಿಯೇ ಎದುರಾಳಿ ತಂಡಕ್ಕೆ ದುಸ್ವಪ್ನವಾಗಿ ಕಾಡಿದ್ದಾರೆ.

ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ