ಆರ್​ಸಿಬಿಯಲ್ಲಿ ಬೆಂಚ್ ಕಾದ ಆಟಗಾರನ ಅಬ್ಬರ; 51 ಬಾಲ್​ಗೆ 150 ರನ್, ಗೇಲ್ ದಾಖಲೆ ಉಡೀಸ್

ಆರ್​ಸಿಬಿಯಲ್ಲಿ ಬೆಂಚ್‌ ಕಾದಿದ್ದ ನ್ಯೂಜಿಲೆಂಡ್ ಆಟಗಾರ ಫಿನ್ ಆಲೆನ್ ಅವರು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 51 ಬಾಲಿಗೆ 151 ರನ್ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಇದರಲ್ಲಿ 19 ಸಿಕ್ಸ್‌ಗಳು ಸೇರಿವೆ. ಕ್ರಿಸ್ ಗೇಲ್ ಅವರ ಹಿಂದಿನ ದಾಖಲೆಯನ್ನು ಮುರಿದ ಫಿನ್, ಸಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಆರ್​ಸಿಬಿಯಲ್ಲಿ ಬೆಂಚ್ ಕಾದ ಆಟಗಾರನ ಅಬ್ಬರ; 51 ಬಾಲ್​ಗೆ 150 ರನ್, ಗೇಲ್ ದಾಖಲೆ ಉಡೀಸ್
ಫಿನ್ ಆಲೆನ್

Updated on: Jun 13, 2025 | 12:16 PM

2021ರಲ್ಲಿ ಆರ್​ಸಿಬಿ ತಂಡ ಸೇರಿಕೊಂಡು ಬೆಂಚ್ ಕಾದಿದ್ದ ನ್ಯೂಜಿಲೆಂಡ್ ಆಟಗಾರ ಫಿನ್ ಆಲೆನ್ (Finn Allen) ಅವರು ವಿಶ್ವ ದಾಖಲೆ ಬರೆದಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್​ನಲ್ಲಿ (ಎಂಎಲ್​ಸಿ) 51 ಬಾಲಿಗೆ 151 ರನ್ ಚಚ್ಚಿದ್ದಾರೆ. ಅವರ ಸ್ಟ್ರೈಕ್ ರೇಟ್ 296.07 ಇತ್ತು ಅನ್ನೋದು ವಿಶೇಷ. ಜೂನ್ 13ರಂದು ನಡೆದ ಪಂದ್ಯದಲ್ಲಿ ಅವರು ಈ ದಾಖಲೆ ಬರೆದಿದ್ದಾರೆ. ಎಂಎಲ್​ಸಿ ಲೀಗ್​ನಲ್ಲಿ ಸಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ಪರವಾಗಿ ಫಿನ್ ಅವರು ಆಡುತ್ತಿದ್ದಾರೆ.

ಜೂನ್ 13ರಂದು ಸಾನ್ ಫ್ರಾನ್ಸಿಸ್ಕೋ vs ವಾಷಿಂಗ್ಟನ್ ಫ್ರೀಡಂ ತಂಡದ ಮಧ್ಯೆ ಪಂದ್ಯ ನಡೆದಿದೆ. ಫಿನ್ ಆಲೆನ್ ಬಾರಿಸಿದ 151 ರನ್​ಗಳಲ್ಲಿ 5 ಫೋರ್ ಹಾಗೂ 19 ಸಿಕ್ಸ್​ಗಳನ್ನು ಒಳಗೊಂಡಿದೆ. ಟಿ20 ಇನ್ನಿಂಗ್ಸ್​​ ಒಂದರಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ಸಾಹಿಲ್ ಚೌಹಾಣ್ ಅವರು ಒಂದೇ ಇನ್ನಿಂಗ್ಸ್​ನಲ್ಲಿ 18 ಸಿಕ್ಸ್ ಬಾರಿಸಿದ್ದರು.  ಫಿನ್ ಆಲೆನ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಕೂಡ ಉಡೀಸ್ ಆಗಿದೆ. ಆರ್​ಸಿಬಿ ಪರ 175 ರನ್ ಬಾರಿಸಿದಾಗ ಅವರು ಬರೋಬ್ಬರಿ 17 ಸಿಕ್ಸ್ ಹೊಡೆದಿದ್ದರು.

ಅಲೆನ್ ಅವರು ಆಡಿದ ಅದ್ಭುತ ಇನ್ನಿಂಗ್ಸ್​ನಿಂದ 20 ಓವರ್​ಗಳಲ್ಲಿ ತಂಡ 269 ರನ್ ಕಲೆ ಹಾಕಲು ಶಕ್ಯವಾಯಿತು. ಈ ಬೃಹತ್ ಮೊತ್ತ ಬೆನ್ನತ್ತಿದ ವಾಷಿಂಗ್ಟನ್ ಫ್ರೀಡಂ ತಂಡ 146 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಸಾನ್ ಫ್ರಾನ್ಸಿಸ್ಕೋ ತಂಡ 123 ರನ್​ಗಳ ಭರ್ಜರಿ ಗೆಲುವು ಕಂಡರು.

ಇದನ್ನೂ ಓದಿ: ಮೃತರ ಮನೆಗೆ ಆರ್​ಸಿಬಿ ಆಟಗಾರರು ಭೇಟಿ ನೀಡಬೇಕು: ಕಾರುಣ್ಯ ರಾಮ್

2021ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಆಟಗಾರ ಜೋಶ್ ಫಿಲಿಪ್ಪೆ ಅವರು ಅಲಭ್ಯರಾದರು. ಈ ಕಾರಣಕ್ಕೆ ಅವರ ರಿಪ್ಲೇಸ್​ಮೆಂಟ್ ಆಗಿ ಫಿನ್ ಆಲೆನ್ ಅವರನ್ನು ಆರ್​ಸಿಬಿ ಪಡೆದುಕೊಂಡಿತು. ಆದರೆ, ಯಾವುದೇ ಪಂದ್ಯವನ್ನು ಆಡಿಸದೇ ಬೆಂಚ್ ಕಾಯಿಸಲಾಯಿತು. ಮೊದಲ ಇಂಟರ್​ನ್ಯಾಷನಲ್ ಪಂದ್ಯದಲ್ಲಿ ಅವರು 4 ಮ್ಯಾಚ್​ಗಳಲ್ಲಿ 103 ರನ್ ಬಾರಿಸಿದ್ದರು.  2025ರಲ್ಲಿ ಅವರು ಐಪಿಎಲ್​ ಆಕ್ಷನ್​ಗೆ ನೋಂದಣಿ ಮಾಡಿಕೊಂಡಿದ್ದರು. ಆದರೆ, ಅವರನ್ನು ಯಾರೂ ಖರೀದಿಸಿರಲಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.