ಭಾರತದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಮತ್ತು ನಟಿ ಹಜೆಲ್ ಕೀಚ್ (Yuvraj Singh and Hazel Keech) ದಂಪತಿಗೆ ಮೊದಲ ಮಗು ಹುಟ್ಟಿದೆ. ತಮಗೆ ಗಂಡು ಮಗು ಹುಟ್ಟಿದ್ದನ್ನು ಯುವರಾಜ್ ಸಿಂಗ್ ಸೋಷಿಯಲ್ ಮೀಡಿಯಾ ಮೂಲಕ ಮಂಗಳವಾರ ತಿಳಿಸಿದ್ದಾರೆ. ಯುವರಾಜ್ ಸಿಂಗ್ ಕ್ರಿಕೆಟ್ನಲ್ಲಿ ತಮ್ಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂಲಕ ಹೆಸರು ಮಾಡಿದ್ದರು. ಆಲ್ ರೌಂಡರ್ ಎಂದೇ ಖ್ಯಾತರಾಗಿದ್ದರು. ಅದ್ಭುತ ಕ್ರಿಕೆಟ್ ಆಟಗಾರರಲ್ಲೊಬ್ಬರಾಗಿದ್ದರು. ಆದರೆ ನಂತರ ಕ್ಯಾನ್ಸರ್ ರೋಗಕ್ಕೆ ಒಳಗಾಗಿ, ಗುಣಮುಖರಾದರೂ, ತಂಡದಲ್ಲಿ ಸೂಕ್ತ ಅವಕಾಶ ಸಿಗಲಿಲ್ಲ. ಹೀಗೆ ಹಲವು ಕಾರಣಗಳಿಂದ ಕ್ರಿಕೆಟ್ ತೊರೆದಿದ್ದಾರೆ.
ತಮಗೆ ಗಂಡು ಮಗು ಹುಟ್ಟಿದ್ದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ ಯುವರಾಜ್ ಸಿಂಗ್, ಇಂದು ನಮಗೆ ಗಂಡು ಮಗು ಹುಟ್ಟಿದೆ ಎಂಬ ವಿಷಯವನ್ನು ನಮ್ಮ ಫ್ಯಾನ್ಸ್, ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಹಂಚಿಕೊಳ್ಳಲು ತುಂಬ ಉತ್ಸುಕರಾಗಿದ್ದೇವೆ. ಇಂಥ ಸುಂದರವಾದ ಆಶೀರ್ವಾದ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನೀವು ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ. ಯುವರಾಜ್ ಸಿಂಗ್ ಮತ್ತು ಹಜೆಲ್ ಕೀಚ್ ಇಬ್ಬರೂ ಕೂಡ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅಪ್ಪ-ಅಮ್ಮನಾದ ಯುವರಾಜ್ ಸಿಂಗ್ ಮತ್ತು ಹಜೆಲ್ ಕೀಚ್ಗೆ ಸೌರವ್ ಗಂಗೂಲಿ, ಸಾನಿಯಾ ಮಿರ್ಜಾ, ಇರ್ಫಾನ್ ಪಠಾಣ್ ಸೇರಿ ಅನೇಕರು ಶುಭ ಹಾರೈಸಿದ್ದಾರೆ. ಅಂದಹಾಗೆ, ಯುವರಾಜ್ ಸಿಂಗ್ ಮತ್ತು ಹಜೆಲ್ ವಿವಾಹ 2016ರಲ್ಲಿ ನಡೆದಿತ್ತು.
❤️ @hazelkeech pic.twitter.com/IK6BnOgfBe
— Yuvraj Singh (@YUVSTRONG12) January 25, 2022
ಯುವರಾಜ್ ಸಿಂಗ್ ಮೊದಲ 2000ನೇ ಇಸ್ವಿಯಲ್ಲಿ ಕೀನ್ಯಾ ವಿರುದ್ಧ ಏಕದಿನ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಯುವಿ ಎಂಬ ನಿಕ್ ನೇಮ್ನಿಂದಲೇ ಖ್ಯಾತರಾಗಿದ್ದ ಅವರು, ಸುಮಾರು 40 ಟೆಸ್ಟ್ಗಳು, 304 ಏಕದಿನ ಪಂದ್ಯಗಳು, 58 ಟಿ20 ಪಂದ್ಯಗಳನ್ನು ಆಡಿ, 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಐಪಿಎಲ್ನಲ್ಲಂತೂ ಭರ್ಜರಿ ಮಿಂಚಿದ್ದ ಯುವರಾಜ್ ಸಿಂಗ್, ಪಂಜಾಬ್ ಕಿಂಗ್ಸ್, ಪುಣೆ ವಾರಿಯರ್ಸ್, ಬೆಂಗಳೂರು ರಾಯಲ್ ಚಾಲೆಂಜರ್ಸ್, ಸನ್ರೈಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ತಂಡಗಳಲ್ಲಿ ಆಡಿದ್ದಾರೆ. ಇನ್ನು ಕ್ರಿಕೆಟ್ ಜೀವನಕ್ಕೆ ಮರಳುವ ಬಗ್ಗೆ 2021ರಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ