ಭಾರತೀಯ ಮಹಿಳಾ ಕ್ರಿಕೆಟ್‌ನ ಅತಿದೊಡ್ಡ ಗುರುತಾಗಿರುವ ಮಿಥಾಲಿ ರಾಜ್ ( Mithali Raj), ಕಳೆದ ತಿಂಗಳು ತಮ್ಮ ಸುದೀರ್ಘ ಮತ್ತು ಯಶಸ್ವಿ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಸುಮಾರು 23 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ ಮಿಥಾಲಿ ಜೂನ್‌ನಲ್ಲಿ ನಿವೃತ್ತಿ ಘೋಷಿಸಿದರು. ನಿವೃತ್ತಿ ಘೋಷಣೆಯಾದ ಒಂದೂವರೆ ತಿಂಗಳಲ್ಲೇ ಮಿಥಾಲಿ ಮತ್ತೆ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿದ್ದಾರೆ. ಮಿಥಾಲಿ ನಿವೃತ್ತಿಯಿಂದ ಹಿಂದಿರುಗುವ ಬಗ್ಗೆ ತನ್ನ ಆಯ್ಕೆಗಳನ್ನು ಮುಕ್ತವಾಗಿರಿಸುತ್ತೇನೆ ಎಂದು ಹೇಳಿದ್ದಾರೆ. ಈಗ ಪ್ರಶ್ನೆ ಏನೆಂದರೆ, ಮಿಥಾಲಿ ಇದನ್ನು ಯಾವಾಗ ಮತ್ತು ಏಕೆ ಮಾಡಲು ಯೋಜಿಸುತ್ತಿದ್ದಾರೆ? ಎಂಬುದಾಗಿದೆ.
ಮಹಿಳೆಯರ ಐಪಿಎಲ್‌ನಲ್ಲಿ ಕಾಣಿಸಿಕೊಳ್ತಾರಾ?
ಭಾರತದ ಮಾಜಿ ನಾಯಕಿ ಹಾಗೂ ವಿಶ್ವದ ಅತ್ಯಂತ ಯಶಸ್ವಿ ಮಹಿಳಾ ಬ್ಯಾಟರ್ ಮಿಥಾಲಿ ರಾಜ್ ಸಂದರ್ಶನವೊಂದರಲ್ಲಿ ಕ್ರಿಕೆಟ್ಗೆ ಮರಳುವುದಾಗಿ ಹೇಳಿದ್ದಾರೆ. ಮಿಥಾಲಿ ಹಾವಭಾವ ಮತ್ತು ಆಕಾಂಕ್ಷೆಗೆ ಕಾರಣ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್. ಮುಂದಿನ ವರ್ಷ ಅಂದರೆ 2023 ರಿಂದ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೆಲವು ತಿಂಗಳ ಹಿಂದೆ ಹೇಳಿತ್ತು. ಕಳೆದ 2-3 ವರ್ಷಗಳಲ್ಲಿ ಮಹಿಳಾ ಐಪಿಎಲ್ ಬೇಡಿಕೆಯು ಸಾಕಷ್ಟು ಬೆಳೆದಿದೆ. ಹೀಗಾಗಿ ಇಂತಹ ಅವಕಾಶವನ್ನು ಕಳೆದುಕೊಳ್ಳಲು ಮಿಥಾಲಿ ಸಿದ್ದರಿಲ್ಲ.
ಮಿಥಾಲಿ ಹೇಳಿದ್ದಿದು
ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್‌ನ 100 ಪರ್ಸೆಂಟ್ ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಮಾಜಿ ಇಂಗ್ಲಿಷ್ ಕ್ರಿಕೆಟರ್ ಇಶಾ ಗುಹಾ ಮತ್ತು ನ್ಯೂಜಿಲೆಂಡ್‌ನ ಫ್ರಾಂಕಿ ಮೆಕೆ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದ ಮಿಥಾಲಿ ಮೊದಲ ಮಹಿಳಾ ಐಪಿಎಲ್‌ನ ಭಾಗವಾಗಲು ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಆ ಆಯ್ಕೆಯನ್ನು (ನಿವೃತ್ತಿಯಿಂದ ಹಿಂತಿರುಗುವುದು) ಮುಕ್ತವಾಗಿರಿಸುತ್ತಿದ್ದೇನೆ. ನಾನು ಇನ್ನೂ ನಿರ್ಧರಿಸಿಲ್ಲ. ಮಹಿಳಾ ಐಪಿಎಲ್ ನಡೆಯಲು ಇನ್ನೂ ಹಲವು ತಿಂಗಳುಗಳಿವೆ. ಮಹಿಳಾ ಐಪಿಎಲ್‌ನ ಮೊದಲ ಆವೃತ್ತಿಯ ಭಾಗವಾಗುವುದು ನನ್ನ ಬಯಕೆಯಾಗಿದೆ ಎಂದು ಮಿಥಾಲಿ ಹೇಳಿದ್ದಾರೆ.
In an entertaining first episode of the 100% Cricket podcast, Mithali Raj reveals what could draw her out of retirement ?@M_Raj03 | @isaguha | Find out ?
— ICC (@ICC) July 25, 2022
ನಿವೃತ್ತಿಯ ನಂತರವೂ ಸಮಯವಿಲ್ಲ
ಈಗ ಮಹಿಳಾ ಐಪಿಎಲ್ ಯಾವಾಗ ನಡೆಯಲಿದೆ, ಅದರ ದಿನಾಂಕವನ್ನು ಸದ್ಯಕ್ಕೆ ನಿಗದಿಪಡಿಸಲಾಗಿಲ್ಲ. ಮುಂದಿನ ವರ್ಷದವರೆಗೆ ಕಾಯಬೇಕು. ಮಿಥಾಲಿ ನಿವೃತ್ತಿಯಿಂದ ಮರಳುತ್ತಾರೋ ಇಲ್ಲವೋ ಎಂಬುದು ಕೂಡ ಆಗ ಮಾತ್ರ ತಿಳಿಯಲಿದೆ. ಆದಾಗ್ಯೂ, ನಿವೃತ್ತಿಯ ನಂತರವೂ ಅವರು ತುಂಬಾ ಕಾರ್ಯನಿರತರಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು, ಮುಂದಿನ ದಿನ, ವಾರ ಅಥವಾ ಸರಣಿಗೆ ತಯಾರಿ ನಡೆಸಬೇಕಾಗದ ಕಾರಣ (ನಿವೃತ್ತಿಯಿಂದ) ನನ್ನ ಜೀವನವನ್ನು ನಿಧಾನಗೊಳಿಸುತ್ತದೆ ಎಂದು ನಾನು ಭಾವಿಸಿದೆ. ಇಲ್ಲಿಯವರೆಗೆ ಇದು ತುಂಬಾ ಕಾರ್ಯನಿರತವಾಗಿದೆ ಮತ್ತು ಸದ್ಯಕ್ಕೆ ನನ್ನ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದಿದ್ದಾರೆ.
ಸಿನಿಮಾ ಪ್ರಚಾರಕ್ಕೆ ಸಂಪೂರ್ಣ ಒತ್ತು
ಮಿಥಾಲಿ ನಿವೃತ್ತಿಯ ನಂತರ, ಅವರ ಮೇಲೆ ನಿರ್ಮಿಸಲಾದ ಚಿತ್ರ ಇತ್ತೀಚೆಗೆ ಬಿಡುಗಡೆಯಾಯಿತು. ‘ಶಭಾಷ್ ಮಿಥು’ ಎಂಬ ಹೆಸರಿನ ಈ ಚಿತ್ರವು ಮಿಥಾಲಿ ಅವರ ಸಂಪೂರ್ಣ ವೃತ್ತಿಜೀವನದ ಮೇಲೆ ತಯಾರಾಗಿದೆ. ಈ ಚಿತ್ರದಲ್ಲಿ ಅವರು ಭಾರತೀಯ ತಂಡಕ್ಕೆ ಹೇಗೆ ಬಂದರು ಮತ್ತು ಎಲ್ಲಾ ಸಾಮಾಜಿಕ ಮತ್ತು ಆಡಳಿತಾತ್ಮಕ ಅಡೆತಡೆಗಳ ನಡುವೆಯೂ ಅವರು ತಮ್ಮ ಮತ್ತು ಟೀಮ್ ಇಂಡಿಯಾ ಹೆಸರನ್ನು ಹೇಗೆ ಬೆಳೆಸಿದರು ಎಂಬುದನ್ನು ತೋರಿಸಲಾಗಿದೆ. ತಾಪ್ಸಿ ಪನ್ನು ಅದರಲ್ಲಿ ಮಿಥಾಲಿ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಮಿಥಾಲಿ ಸ್ವತಃ ಚಿತ್ರದ ಪ್ರಚಾರದಲ್ಲಿ ನಿರಂತರವಾಗಿ ನಿರತರಾಗಿದ್ದರು.