Viral Video: ಅಭಿಮಾನಿಯ ಅಭಿಮಾನದ ವಿಡಿಯೋ ಹಂಚಿಕೊಂಡ ಸುರೇಶ್ ರೈನಾ

Suresh Raina: ಸುರೇಶ್ ರೈನಾ ಟೀಮ್ ಇಂಡಿಯಾ ಪರ 226 ಏಕದಿನ ಪಂದ್ಯಗಳಲ್ಲಿ 5615 ರನ್ ಗಳಿಸಿದ್ದಾರೆ. ಈ ವೇಳೆ 5 ಶತಕ ಮತ್ತು 36 ಅರ್ಧಶತಕಗಳನ್ನು ಬಾರಿಸಿದ್ದರು.

Viral Video: ಅಭಿಮಾನಿಯ ಅಭಿಮಾನದ ವಿಡಿಯೋ ಹಂಚಿಕೊಂಡ ಸುರೇಶ್ ರೈನಾ
Suresh Raina
Edited By:

Updated on: Aug 01, 2022 | 1:53 PM

ಭಾರತ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಇನ್ನೂ ಕೂಡ ಅವರ ಫ್ಯಾನ್ ಫಾಲೋಯಿಂಗ್ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ಇತ್ತೀಚೆಗೆ ರೈನಾಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರಲ್ಲಿ ಅಭಿಮಾನಿಯೊಬ್ಬರು ರೈನಾ ಫೋಟೋಗೆ ಆರತಿ ಎತ್ತುತ್ತಿರುವುದು ಕಾಣಬಹುದು. ವಿಶೇಷ ಎಂದರೆ ಅಭಿಮಾನಿಯ ಈ ವಿಡಿಯೋವನ್ನು ಖುದ್ದು ಸುರೇಶ್ ರೈನಾ ಟ್ವಿಟರ್‌ನಲ್ಲಿ ರಿಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ರೈನಾ ಅಭಿಮಾನಿಯ ವಿಡಿಯೋ ಇತರೆ ಅಭಿಮಾನಿಗಳ ಗಮನ ಸೆಳೆದಿದೆ.

ಅಭಿಮಾನಿಯು ಮೊದಲು ರೈನಾ ಅವರ ಚಿತ್ರಕ್ಕೆ ಆರತಿ ಬೆಳಗಿ ಆನಂತರ ಅದರ ಮೇಲೆ ಹಾಲಿನ ಅಭಿಷೇಕ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ರೈನಾ ಅವರ ಫ್ಯಾನ್ ಪೇಜ್ ಹಂಚಿಕೊಂಡಿದ್ದು, ಇದನ್ನು ಗಮನಿಸಿದ ಎಡಗೈ ದಾಂಡಿಗ ರಿಟ್ವೀಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ 800ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸುಮಾರು 100 ಮಂದಿ ರಿಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಸುರೇಶ್ ರೈನಾ ಟೀಮ್ ಇಂಡಿಯಾ ಪರ 226 ಏಕದಿನ ಪಂದ್ಯಗಳಲ್ಲಿ 5615 ರನ್ ಗಳಿಸಿದ್ದಾರೆ. ಈ ವೇಳೆ 5 ಶತಕ ಮತ್ತು 36 ಅರ್ಧಶತಕಗಳನ್ನು ಬಾರಿಸಿದ್ದರು. ಹಾಗೆಯೇ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1604 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದಿರುವ ರೈನಾ ಲೀಗ್​ ಕ್ರಿಕೆಟ್​ನಲ್ಲಿ ಮುಂದುವರೆಯಲು ಬಯಸಿದ್ದಾರೆ. ಇದಾಗ್ಯೂ ಕಳೆದ ಐಪಿಎಲ್​ನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ರೈನಾ ಅವರ ನಡೆಯೇನು ಎಂಬುದನ್ನು ಕಾದು ನೋಡಬೇಕಿದೆ.

 

Published On - 1:53 pm, Mon, 1 August 22