
2025ನೇ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯ ಇಂದು (ಫೆಬ್ರವರಿ 14) ನಡೆಯಲಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜಿಯಂಟ್ಸ್ ವುಮನ್ ಮುಖಾಮುಖಿ ಆಗುತ್ತಿವೆ. ಇದು ಈ ಸೀಸನ್ನ ಮೊದಲ ಪಂದ್ಯ ಆಗಿರುವುದರಿಂದ ಸಾಕಷ್ಟು ಕುತೂಹಲ ಮೂಡಿದೆ. ಈ ಪಂದ್ಯ ಎಲ್ಲಿ ನಡೆಯಲಿದೆ? ಎಷ್ಟು ಗಂಟೆಗೆ ನಡೆಯಲಿದೆ ಮತ್ತು ಇದನ್ನು ಎಲ್ಲಿ ವೀಕ್ಷಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
ಇಂದಿನ ವುಮನ್ ಪ್ರೀಮಿಯರ್ ಲೀಗ್ ಸಖತ್ ಥ್ರಿಲ್ಲಿಂಗ್ ಮ್ಯಾಚ್ ಆಗುವ ಎಲ್ಲಾ ಸಾಧ್ಯತೆ ಇದೆ. ಇಂದಿನ ಪಂದ್ಯ ರಾತ್ರಿ 7.30ಕ್ಕೆ ಆರಂಭ ಆಗಲಿದೆ. ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ವಡೋದರದ ಈ ಸ್ಟೇಡಿಯಂ ಹೈ ಸ್ಕೋರ್ ಮ್ಯಾಚ್ಗಳಿಗೆ ಖ್ಯಾತಿ ಪಡೆದಿದೆ. ಇದು ಬ್ಯಾಟರ್ಗಳ ಪಿಚ್ ಆಗಿರುವುದರಿಂದ ಹೆಚ್ಚಿನ ರನ್ಗಳನ್ನು ನಿರೀಕ್ಷಿಸಬಹುದು.
Mr. Nags is back. Or is he? Why was he not planning to do content with RCB this season? Why does he meet the RCB players ahead of the #WPL?
Find out right here on the season premiere of @bigbasket_com presents RCB Insider and start your day with a dose of laughter. 😆… pic.twitter.com/VzuZp2nhHa
— Royal Challengers Bengaluru (@RCBTweets) February 14, 2025
ವಡೋದರದಲ್ಲಿ ವಾತಾವರಣ ಕೂಡ ಉತ್ತಮವಾಗಿದೆ. ಇಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ಮಳೆ ಬರುವ ಸಾಧ್ಯತೆ ಜೀರೋ ಆಗಿರುವುದರಿಂದ, ಪಂದ್ಯ ನಿಲ್ಲಬಹುದು ಎಂಬ ಭಯ ಇಲ್ಲ. ಇಲ್ಲಿನ ಹವಾಮಾನ 25 ಡಿಗ್ರೀ ಸೆಲ್ಸಿಯಸ್ ಇದೆ.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ನಿಯಮ ಉಲ್ಲಂಘನೆ: ಇಬ್ಬರು ಸ್ಟಾರ್ ಆಟಗಾರರ ವಿರುದ್ಧ ಕಠಿಣ ಕ್ರಮ
ಗುಜರಾತ್ ಜಿಯಂಟ್ಸ್ ತಂಡವನ್ನು ಆಶ್ಲೀ ಗಾರ್ಡ್ನರ್ ಅವರು ಮುನ್ನಡೆಸುತ್ತಿದ್ದಾರೆ. ಆರ್ಸಿಬಿಗೆ ಸ್ಮೃತಿ ಮಂಧಾನ ನಾಯಕಿ. ಕಳೆದ ವರ್ಷ ಕಪ್ ಗೆದ್ದಿರುವುದರಿಂದ ಈ ಬಾರಿ ಶುಭಾರಂಭದೊಂದಿಗೆ ಪಂದ್ಯ ಆರಂಭಿಸುವ ನಿರೀಕ್ಷೆಯಲ್ಲಿ ತಂಡ ಇದೆ.
ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಜಿಯೋ ಸಿನಿಮಾ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಸ್ಪೋರ್ಟ್ಸ್ 18 ಟಿವಿ ಪ್ರಸಾರ ಹಕ್ಕನ್ನು ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.