AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯಿಂದ ವಿಶೇಷ ವಸ್ತು ಪಡೆದು ಮಗನಿಗೆ ಗಿಫ್ಟ್ ಕೊಟ್ಟ ಸ್ಟಾರ್ ಆಟಗಾರ

ಸದ್ಯ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 3 ಏಕದಿನ ಸರಣಿಯಲ್ಲಿ ಗೆದ್ದಿದ್ದು, ಸಾಕಷ್ಟು ಹುರುಪು ನೀಡಿದೆ. ಮೂರೂ ಪಂದ್ಯವನ್ನು ಗೆದ್ದು ಇಂಗ್ಲೆಂಡ್​ನ ವೈಟ್ ವಾಶ್ ಮಾಡಿದೆ. ಈಗ ಖ್ಯಾತ ಆಟಗಾರನೋರ್ವ ವಿರಾಟ್ ಕೊಹ್ಲಿ ಅವರಿಂದ ಗಿಫ್ಟ್ ಒಂದನ್ನು ಪಡೆದು ಮಗನಿಗೆ ನೀಡಿದ್ದಾರೆ.

ಕೊಹ್ಲಿಯಿಂದ ವಿಶೇಷ ವಸ್ತು ಪಡೆದು ಮಗನಿಗೆ ಗಿಫ್ಟ್ ಕೊಟ್ಟ ಸ್ಟಾರ್ ಆಟಗಾರ
ವಿರಾಟ್
ರಾಜೇಶ್ ದುಗ್ಗುಮನೆ
|

Updated on: Feb 14, 2025 | 12:02 PM

Share

ವಿರಾಟ್ ಕೊಹ್ಲಿ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರ ಬಗ್ಗೆ ಇರುವ ಕ್ರೇಜ್ ಕಡಿಮೆ ಆಗುವಂಥದ್ದಲ್ಲ. ಅವರಿಂದ ಯಾವುದಾದರೂ ವಸ್ತು ಸಿಕ್ಕರೆ ಅದನ್ನು ಪ್ರೀತಿಯಿಂದ ಆಟಗಾರರು ಇಟ್ಟುಕೊಳ್ಳುತ್ತಾರೆ. ಈಗ ಕೆವಿನ್ ಪೀಟರ್ಸನ್​ ವಿರಾಟ್ ಕೊಹ್ಲಿಯಿಂದ ಜರ್ಸಿಯನ್ನು ಗಿಫ್ಟ್ ಪಡೆದು ಅದನ್ನು ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಜರ್ಸಿಯ ಮೇಲೆ ಕೊಹ್ಲಿಯ ಹಸ್ತಾಕ್ಷರ ಇದೆ ಅನ್ನೋದು ವಿಶೇಷ.

ಕೆವಿನ್ ಪೀಟರ್​ಸನ್ ಅವರು ಭಾರತ vs ಇಂಗ್ಲೆಂಡ್ ಒಡಿಐ ಸೀರಿಸ್​ನಲ್ಲಿ ಕಮೆಂಟೇಟರ್ ಆಗಿದ್ದರು. ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್ ಆಗಿರೋ ಅವರು ಕೊಹ್ಲಿಯಿಂದ ಜೆರ್ಸಿ ಪಡೆದಿದ್ದಾರೆ. ಈ ಶರ್ಟ್​ಗೆ ಕೊಹ್ಲಿ ಅವರು ಹಸ್ತಾಕ್ಷರ ಹಾಕಿ ಕೊಟ್ಟಿದ್ದಾರೆ. ಇದನ್ನು ಕೆವಿನ್ ಅವರು ಮಗ ಡೈಲನ್​ಗೆ ನೀಡಿದ್ದಾರೆ. ಮಗ ಶರ್ಟ್ ಹಾಕಿ ನಿಂತಿರೋ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಕೆವಿನ್ ಹಂಚಿಕೊಂಡಿದ್ದಾರೆ.

ಕೆವಿನ್ ಪೀಟರ್​ಸನ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ 2009-10ರ ಸಂದರ್ಭದಲ್ಲಿ ಆರ್​​ಸಿಬಿಯಲ್ಲಿ ಒಟ್ಟಾಗಿ ಆಡಿದ್ದರು. ಈ ಮೂಲಕ ಡ್ರೆಸ್ಸಿಂಗ್​ ರೂಂನ ಒಟ್ಟಾಗಿ ಹಂಚಿಕೊಂಡಿದ್ದರು. ಈ ಗೆಳೆತನ ಈಗಲೂ ಮುಂದುವರಿದಿದೆ. ಕೊಹ್ಲಿ ಜೆರ್ಸಿ ಪಡೆದ ಕೆವಿನ್ ಮಗ ಮತ್ತಷ್ಟು ಖುಷಿ ಆಗಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಡಬಲ್ ಶಾಕ್

ಸದ್ಯ ಚಾಂಪಿಯನ್ಸ್​ ಟ್ರೋಫಿ ಬರುತ್ತಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 3 ಏಕದಿನ ಸರಣಿಯಲ್ಲಿ ಗೆದ್ದಿದ್ದು, ಸಾಕಷ್ಟು ಹುರುಪು ನೀಡಿದೆ. ಮೂರೂ ಪಂದ್ಯವನ್ನು ಗೆದ್ದು ಇಂಗ್ಲೆಂಡ್​ನ ವೈಟ್ ವಾಶ್ ಮಾಡಿದೆ. ಮೊದಲ ಪಂದ್ಯದಲ್ಲಿ ಕೊಹ್ಲಿ ಹೊರಗುಳಿದರು. ಎರಡನೇ ಪಂದ್ಯದಲ್ಲಿ ಐದು ರನ್​ಗೆ ಔಟ್ ಆದರೆ, ಮೂರನೇ ಪಂದ್ಯದಲ್ಲಿ 52 ರನ್ ಸಿಡಿಸಿದರು. ಈ ಮೂಲಕ ಏಕದಿನ ಪಂದ್ಯದಲ್ಲಿ 73 ಅರ್ಧಶತಕ ಸಿಡಿಸಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರಿಂದ ಸಾಕಷ್ಟು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ