Rishabh Pant Accident saviour: ಕ್ರಿಕೆಟಿಗ ರಿಷಭ್ ಪಂತ್ರನ್ನು ಅಪಘಾತದಿಂದ ರಕ್ಷಿಸಿದ್ದ ವ್ಯಕ್ತಿ ಸ್ಥಿತಿ ಗಂಭೀರ
ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಜೀವ ಉಳಿಸಿದ್ದ ಯುವಕ ಇದೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. 25 ವರ್ಷ ವಯಸ್ಸಿನ ರಜತ್ ಕುಮಾರ್ ಮನ್ನು ಕಷ್ಯಪ್ ಎಂಬುವವಳನ್ನು ಪ್ರೇಮಿಸುತ್ತಿದ್ದ, ಇದೀಗ ತನ್ನ ಪ್ರೇಯಸಿಯೊಂದಿಗೆ ವಿಷ ಸೇವಿಸಿದ್ದು, ಆಕೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ರಜತ್ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಜತ್ ಮತ್ತು ಮನ್ನು ಬೇರೆ ಬೇರೆ ಸಮುದಾಯಗಳಿಗೆ ಸೇರಿದವರಾಗಿದ್ದರಿಂದ ಅವರ ಕುಟುಂಬಗಳು ಅವರ ಸಂಬಂಧವನ್ನು ಒಪ್ಪಲಿಲ್ಲ ಎಂದು ಹೇಳಲಾಗುತ್ತಿದೆ

ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಜೀವ ಉಳಿಸಿದ್ದ ಯುವಕ ಇದೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. 25 ವರ್ಷ ವಯಸ್ಸಿನ ರಜತ್ ಕುಮಾರ್ ಮನ್ನು ಕಷ್ಯಪ್ ಎಂಬುವವಳನ್ನು ಪ್ರೇಮಿಸುತ್ತಿದ್ದ, ಇದೀಗ ತನ್ನ ಪ್ರೇಯಸಿಯೊಂದಿಗೆ ವಿಷ ಸೇವಿಸಿದ್ದು, ಆಕೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ರಜತ್ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಜತ್ ಮತ್ತು ಮನ್ನು ಬೇರೆ ಬೇರೆ ಸಮುದಾಯಗಳಿಗೆ ಸೇರಿದವರಾಗಿದ್ದರಿಂದ ಅವರ ಕುಟುಂಬಗಳು ಅವರ ಸಂಬಂಧವನ್ನು ಒಪ್ಪಲಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ, ಹುಡುಗಿಯ ಮನೆಯವರು ಬೇರೆ ವರನ ಜತೆ ಮದುವೆ ನಿಶ್ಚಯಿಸಿದ್ದರು. ಇದರಿಂದಾಗಿ ಈ ಪ್ರೇಮ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಡಿಸೆಂಬರ್ 2022 ರಲ್ಲಿ, ಹರಿದ್ವಾರದ ಗುರುಕುಲ ನರಸನ್‌ನಲ್ಲಿ ರಸ್ತೆ ಅಪಘಾತದಲ್ಲಿ ಅಪಾಯದಲ್ಲಿದ್ದ ರಿಷಭ್ ಪಂತ್ರನ್ನು ರಜತ್ ಹಾಗೂ ಆ ಗ್ರಾಮದ ಯುವಕ ನಿಶು ರಕ್ಷಿಸಿದ್ದರು. ಕಾರ್ಖಾನೆಯಿಂದ ತಮ್ಮ ಹಳ್ಳಿಗೆ ಹಿಂತಿರುಗುವಾಗ, ಈ ಇಬ್ಬರು ಯುವಕರು ಅಪಘಾತಕ್ಕೀಡಾದ ಬೆಂಕಿಯ ಕಾರಿನಿಂದ ರಿಷಭ್ ಪಂತ್ ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು, ಇದರಿಂದಾಗಿ ರಿಷಭ್ ಪಂತ್ ರಜತ್ ಮತ್ತು ನಿಶು ಅವರಿಗೆ ತಲಾ ಒಂದು ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ನಂತರ ಪಂತ್ ಒಂದು ಪೋಸ್ಟ್ ಪೋಸ್ಟ್ ಮಾಡಿ ರಜತ್ ಮತ್ತು ನಿಶು ಅವರಿಗೆ ಧನ್ಯವಾದ ಅರ್ಪಿಸಿದರು.
ಪಂತ್ ಬರೆದಿದ್ದರು- ನಾನು ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಿಲ್ಲ, ಆದರೆ ನನ್ನ ಅಪಘಾತದ ಸಮಯದಲ್ಲಿ ನನಗೆ ಸಹಾಯ ಮಾಡಿದ ಮತ್ತು ನಾನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪುವಂತೆ ಮಾಡಿದ ಈ ಇಬ್ಬರು ವೀರರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ರಜತ್ ಕುಮಾರ್ ಮತ್ತು ನಿಶು ಕುಮಾರ್, ಧನ್ಯವಾದಗಳು. ನಾನು ನಿಮಗೆ ಸದಾ ಕೃತಜ್ಞನಾಗಿರುತ್ತೇನೆ ಮತ್ತು ಋಣಿಯಾಗಿರುತ್ತೇನೆ ಎಂದು ಬರೆದಿದ್ದರು.
ಮತ್ತಷ್ಟು ಓದಿ: Rishabh Pant: ರಿಷಭ್ ಪಂತ್ ತೂಫಾನ್ ಬ್ಯಾಟಿಂಗ್: ಟೆಸ್ಟ್ನಲ್ಲಿ ಅತೀ ವೇಗದ ಅರ್ಧಶತಕ
ಭಾನುವಾರ ಸಂಜೆ, ರಜತ್ ಮತ್ತು ಅವನ ಮನು ಕಶ್ಯಪ್ ತಮ್ಮ ಗ್ರಾಮದ ಬುಚ್ಚಾ ಬಸ್ತಿಯ ಹೊರವಲಯದಲ್ಲಿರುವ ಕಬ್ಬಿನ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದರು. ಅವರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ. ವಾಸ್ತವವಾಗಿ, ವಿಭಿನ್ನ ಜಾತಿಗಳು ಮತ್ತು ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ, ಇಬ್ಬರೂ ಒಂದಾಗಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ