ಚಾಂಪಿಯನ್ಸ್ ಟ್ರೋಫಿಯಲ್ಲಿ ಪತ್ನಿಗೆ ಬರೋಕೆ ಅವಕಾಶ ಕೊಡಿ ಎಂದ ಸ್ಟಾರ್ ಕ್ರಿಕೆಟಿಗನಿಗೆ ಬಿಸಿಸಿಐ ಖಡಕ್ ಎಚ್ಚರಿಕೆ
ಭಾರತೀಯ ಕ್ರಿಕೆಟ್ ತಂಡದ ಮೇಲೆ ಬಿಸಿಸಿಐ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆಟಗಾರರು ತಮ್ಮ ಪತ್ನಿಯರನ್ನು ಟೂರ್ನಿಗೆ ಕರೆತರಲು ಅವಕಾಶವಿಲ್ಲ ಎಂಬುದು ಒಂದು ಪ್ರಮುಖ ನಿಯಮ. ಒಬ್ಬ ಸ್ಟಾರ್ ಆಟಗಾರ ಪತ್ನಿಯನ್ನು ಕರೆತರಲು ಅನುಮತಿ ಕೋರಿದ್ದರು, ಆದರೆ ಬಿಸಿಸಿಐ ಅದನ್ನು ತಿರಸ್ಕರಿಸಿದೆ. ಇದು ತಂಡದ ಏಕಾಗ್ರತೆ ಮತ್ತು ಶಿಸ್ತಿಗೆ ಅಗತ್ಯ ಎಂದು ಬಿಸಿಸಿಐ ಹೇಳಿದೆ.

ವಾರದೊಳಗೆ ‘ಚಾಂಪಿಯನ್ಸ್ ಟ್ರೋಫಿ 2025’ ಆರಂಭ ಆಗಲಿದೆ. ಮೊದಲ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿ ಇದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ಒಬ್ಬರು ತಮ್ಮ ಜೊತೆ ಪತ್ನಿಗೂ ಬರಲು ಅವಕಾಶ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಬಿಸಿಸಿಐ ನೇರವಾಗಿ ತಿರಸ್ಕರಿಸಿದೆ.
ಟೀಂ ಇಂಡಿಯಾದ ಕಳಪೆ ಪ್ರದರ್ಶನದಿಂದ ಬೇಸತ್ತ ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು. ಟೀಂ ಇಂಡಿಯಾ ಆಟಗಾರರು ತಮ್ಮ ಪತ್ನಿಯನ್ನು ಕರೆತರುವಂತಿಲ್ಲ ಎಂಬುದು ನಿಯಮಗಳಲ್ಲಿ ಒಂದಾಗಿತ್ತು. ಎಲ್ಲಾ ನಿಯಮಗಳಂತೆ ಇದನ್ನು ಕಠಿಣವಾಗಿ ಪಾಲಿಸಲೇಬೇಕು ಎಂದು ಬಿಸಿಸಿಐ ಆಟಗಾರರಿಗೆ ಹೇಳಿದೆ.
ಸ್ಟಾರ್ ಆಟಗಾರನೋರ್ವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪತ್ನಿಯನ್ನು ಕರೆತರಲು ಅವಕಾಶ ಕೋರಿದ್ದರು ಎನ್ನಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಬಿಸಿಸಿಐ ಅಧಿಕಾರಿಗಳು ಆಟಗಾರರಿಗೆ ಸ್ಟ್ರಿಕ್ಟ್ ಆಗಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
‘ನಿಯಮಗಳ ವಿಚಾರದಲ್ಲಿ ಬಿಸಿಸಿಐ ಕೂಡ ತುಂಬಾನೇ ಗಂಭೀರವಾಗಿದೆ. ಇದರಿಂದ ಹಿಂದೆ ಹೋಗುವ ಮಾತಿಲ್ಲ ಎಂಬುದು ತಿಳಿದಿರಲಿ’ ಎಂದು ಆಟಗಾರರಿಗೆ ಸೂಚನೆ ನೀಡಲಾಗಿದೆ. ಪ್ರ್ಯಾಕ್ಟಿಸ್ ಸೆಷನ್ನಲ್ಲಿ ಒಟ್ಟಿಗೆ ಇರಬೇಕು, ಒಟ್ಟಾಗಿ ಬಸ್ನಲ್ಲೇ ಸಾಗಬೇಕಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು; ಬಿಸಿಸಿಐ ಮಹತ್ವದ ನಿರ್ಧಾರ
‘ಆಟಗಾರನೋರ್ವ ಕುಟುಂಬವನ್ನು ಕರೆತರೋದಾಗಿ ಕೇಳಿದ್ದ. ಆದರೆ, ಬಿಸಿಸಿಐ ಈ ವಿಚಾರದಲ್ಲಿ ಸ್ಟ್ರಿಕ್ಟ್ ಆಗಿದೆ ಎಂದು ಅವರಿಗೆ ತಿಳಿಸಲಾಗಿದೆ’ ಎಂದು ಬಿಸಿಸಿಐ ಮೂಲಗಳು ಹೇಳಿರುವುದಾಗಿ ವರದಿ ಆಗಿದೆ. ಒಬ್ಬರಿಗೆ ಈ ರೀತಿಯ ಅವಕಾಶ ಕೊಟ್ಟರೆ ಎಲ್ಲರೂ ಅದನ್ನೇ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲಾ ಆಟಗಾರರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ಬಿಸಿಸಿಐ ತೂಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.