AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB: ವಿರಾಟ್ ಕೊಹ್ಲಿಗೆ ಏಕೆ ಕೊಡಲಿಲ್ಲ ಕ್ಯಾಪ್ಟನ್ ಪಟ್ಟ? ವಿವರಿಸಿದ ಆರ್​ಸಿಬಿ

ಭಾರತೀಯ ಆಟಗಾರನಿಗೆ ನಾಯಕತ್ವ ಕೊಡಬೇಕು ಎಂಬುದು ಆರ್ಸಿಬಿ ಆಲೋಚನೆ ಆಗಿತ್ತು. ವಿರಾಟ್ ಅವರು ಕೂಡ ಲಿಸ್ಟ್ನಲ್ಲಿ ಇದ್ದರು. ಇತ್ತೀಚೆಗೆ ವಿರಾಟ್, ಆರ್ಸಿಬಿ ವ್ಯವಹಾರಗಳ ನಿರ್ದೇಶಕ ಮೊ ಬೊಬಾಟ್ ಹಾಗೂ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಒಟ್ಟಾಗಿ ಸಭೆ ನಡೆಸಿದ್ದರು. ಈ ವೇಳೆ ರಜತ್ ಅವರ ಹೆಸರು ಫೈನಲ್ ಆಗಿದೆ.

RCB: ವಿರಾಟ್ ಕೊಹ್ಲಿಗೆ ಏಕೆ ಕೊಡಲಿಲ್ಲ ಕ್ಯಾಪ್ಟನ್ ಪಟ್ಟ? ವಿವರಿಸಿದ ಆರ್​ಸಿಬಿ
ಕೊಹ್ಲಿ
ರಾಜೇಶ್ ದುಗ್ಗುಮನೆ
|

Updated on:Feb 14, 2025 | 1:08 PM

Share

2025ರ ಐಪಿಎಲ್​ನಲ್ಲಿ ಆರ್​​ಸಿಬಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಜತ್​ ಪಾಟಿದಾರ್ ಅವರು ಕ್ಯಾಪ್ಟನ್ ಆಗಿದ್ದಾರೆ. ಬಹುತೇಕರು ವಿರಾಟ್ ಕೊಹ್ಲಿ ನಾಯಕನಾಗಬಹುದು ಎಂದು ಊಹಿಸಿದ್ದರು. ಆದರೆ, ಅದು ಸುಳ್ಳಾಗಿದೆ. ವಿರಾಟ್​ಗೆ ನಾಯಕತ್ವ ಏಕೆ ನೀಡಿಲ್ಲ ಎಂಬ ಬಗ್ಗೆ ಆರ್​ಸಿಬಿ ಸ್ಪಷ್ಟನೆ ಕೊಟ್ಟಿದೆ.

ಭಾರತೀಯ ಆಟಗಾರನಿಗೆ ನಾಯಕತ್ವ ಕೊಡಬೇಕು ಎಂಬುದು ಆರ್​ಸಿಬಿ ಆಲೋಚನೆ ಆಗಿತ್ತು. ವಿರಾಟ್ ಅವರು ಕೂಡ ಲಿಸ್ಟ್​​ನಲ್ಲಿ ಇದ್ದರು. ಇತ್ತೀಚೆಗೆ ವಿರಾಟ್, ಆರ್​ಸಿಬಿ ವ್ಯವಹಾರಗಳ ನಿರ್ದೇಶಕ ಮೊ ಬೊಬಾಟ್ ಹಾಗೂ ಮುಖ್ಯ ಕೋಚ್ ಆ್ಯಂಡಿ ಫ್ಲವರ್​ ಒಟ್ಟಾಗಿ ಸಭೆ ನಡೆಸಿದ್ದರು. ಈ ವೇಳೆ ರಜತ್ ಅವರ ಹೆಸರು ಫೈನಲ್ ಆಗಿದೆ.

‘ಭಾರತದ ಆಟಗಾರರನ್ನು ನಾಯಕನನ್ನಾಗಿ ಮಾಡಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಇದು ಭಾರತೀಯ ಲೀಗ್ ಆಗಿರುವುದರಿಂದ, ಸ್ಥಳೀಯ ವಿಚಾರಗಳ ಬಗ್ಗೆ ಹೆಚ್ಚು ಮಾಹಿತಿ ಇರುವ ಭಾರತೀಯ ಆಟಗಾರನಿಗೆ ನಾವು ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಿದ್ದೆವು’ ಎಂದು ಬೊಬಾಟ್ ಹೇಳಿದ್ದಾರೆ.

‘ವಿರಾಟ್ ಅವರ ಹೆಸರೂ ಲಿಸ್ಟ್​ನಲ್ಲಿ ಇತ್ತು. ವಿರಾಟ್ ಅವರಿಗೆ ತಂಡವನ್ನು ಮುನ್ನಡೆಸಲು ನಾಯಕತ್ವವೇ ಬೇಕಾಗಿಲ್ಲ. ಕಳೆದ ಬಾರಿ ಫಾಪ್ ಡುಪ್ಲೆಸಿಸ್ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಕೊಹ್ಲಿ ಹಿಂದಿನಿಂದ ತಂಡವನ್ನು ಮುನ್ನಡೆಸುತ್ತಿದ್ದರು. ರಜತ್ ಅವರ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಅವರು ಹಿಂದಿನ ಸೀಸನ್​ನಲ್ಲಿ ಉತ್ತಮವಾಗಿ ಆಡಿದ್ದಾರೆ’ ಎಂದು ಬೊಬಾಟ್ ಹೇಳಿದ್ದಾರೆ.

ಕ್ಯಾಪ್ಟನ್ ಹೌದೋ ಅಥವಾ ಅಲ್ಲವೋ ಕೊಹ್ಲಿ ಯಾವಾಗಲೂ ತಂಡದ ನಾಯಕನಾಗಿರುತ್ತಾರೆ. ಈಗಾಗಲೇ ಅವರು ಪಾಟಿದಾರ್​ಗೆ ಬೆಂಬಲ ನೀಡುವಂತೆ ಕೋರಿದ್ದಾರೆ. ಫಾಪ್ ಕ್ಯಾಪ್ಟನ್ ಆಗುವುದಕ್ಕೂ ಮೊದಲು ಕೊಹ್ಲಿ ಅವರೇ ಸ್ವತಃ ನಾಯಕತ್ವದಿಂದ ಹಿಂದೆ ಸರಿದಿದ್ದರು. ಆ ಬಳಿಕ ಫಾಪ್​ ಅವರು ನಾಯಕತ್ವ ಪಡೆದುಕೊಂಡಿದ್ದರು.

ಇದನ್ನೂ ಓದಿ: ಕೊಹ್ಲಿಯಿಂದ ವಿಶೇಷ ವಸ್ತು ಪಡೆದು ಮಗನಿಗೆ ಗಿಫ್ಟ್ ಕೊಟ್ಟ ಸ್ಟಾರ್ ಆಟಗಾರ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆರ್​ಸಿಬಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ನಲ್ಲಿ ಮಹಾಭಾರತದ ಹೋಲಿಕೆ ಮಾಡಲಾಗಿದೆ. ಕೊಹ್ಲಿ ಅವರು ಕೃಷ್ಣನಂತೆ ಮುಂದಿದ್ದರೆ, ರಜತ್ ಅವರು ಅರ್ಜುನ್ ರೀತಿ ಹಿಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:07 pm, Fri, 14 February 25

ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ
ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ
ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ
ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ
ಬೋಡೋ ಸಾಂಸ್ಕೃತಿಕ ವೈಭವ ವೀಕ್ಷಿಸಿದ ಪ್ರಧಾನಿ ಮೋದಿ
ಬೋಡೋ ಸಾಂಸ್ಕೃತಿಕ ವೈಭವ ವೀಕ್ಷಿಸಿದ ಪ್ರಧಾನಿ ಮೋದಿ
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ