Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6: RCB ಪರ ಭರ್ಜರಿ ದಾಖಲೆ ಬರೆದ ರಿಚಾ ಘೋಷ್

Richa Ghosh Record: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಪರ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಸೋಫಿ ಡಿವೈನ್ ಹೆಸರಿನಲ್ಲಿದೆ. 2023 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಡಿವೈನ್ ಕೇವಲ 20 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ರಿಚಾ ಘೋಷ್ ಕೂಡ ಸೇರ್ಪಡೆಯಾಗಿದ್ದಾರೆ. ಅದು ಸಹ ಬಿರುಸಿನ ಅರ್ಧಶತಕ ಬಾರಿಸಿ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on:Feb 15, 2025 | 8:08 AM

ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2025) ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಅದು ಸಹ 202 ರನ್​ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ. ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ರಿಚಾ ಘೋಷ್ ಕೂಡ ಒಬ್ಬರು.

1 / 5
ಗುಜರಾತ್ ಜೈಂಟ್ಸ್ ತಂಡ ನೀಡಿದ 202 ರನ್​ಗಳ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಪರ ಇಬ್ಬರು ಅರ್ಧಶತಕ ಬಾರಿಸಿದ್ದರು. ಮೊದಲಿಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲ್ಲಿಸ್ ಪೆರ್ರಿ (57) 27 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದಾದ ಬಳಿಕ ಆರ್ಭಟಿಸಿದ್ದು ರಿಚಾ ಘೋಷ್.

2 / 5
ಗುಜರಾತ್ ಜೈಂಟ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ರಿಚಾ ಘೋಷ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಆರ್​ಸಿಬಿ ವಿಕೆಟ್ ಕೀಪರ್ ಬ್ಯಾಟರ್​ ಕಡೆಯಿಂದ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಆರ್​ಸಿಬಿ ಪರ ಸ್ಪೋಟಕ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ರಿಚಾ ಘೋಷ್ ಪಾಲಾಯಿತು.

3 / 5
ಅಲ್ಲದೆ WPL ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೋಫಿಯಾ ಡಂಕ್ಲಿ. 2023 ರಲ್ಲಿ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಡಂಕ್ಲಿ ಆರ್​ಸಿಬಿ ವಿರುದ್ಧ ಕೇವಲ 18 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದೀಗ ಗುಜರಾತ್ ಜೈಂಟ್ಸ್ ವಿರುದ್ಧ ರಿಚಾ ಘೋಷ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

4 / 5
ಇನ್ನು ಈ ಪಂದ್ಯದಲ್ಲಿ 27 ಎಸೆತಗಳನ್ನು ಎದುರಿಸಿದ ರಿಚಾ ಘೋಷ್ 4 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 64 ರನ್ ಚಚ್ಚಿದರು. ಅಲ್ಲದೆ ಕನಿಕಾ ಅಹುಜಾ (30) ಜೊತೆಗೂಡಿ ಆರ್​ಸಿಬಿ ತಂಡವನ್ನು 18.3 ಓವರ್​ಗಳಲ್ಲಿ 202 ರನ್​ಗಳ ಗುರಿ ಮುಟ್ಟಿಸಿದರು. ಈ ಮೂಲಕ ಆರ್​ಸಿಬಿ ತಂಡವು ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದೆ.

5 / 5

Published On - 8:08 am, Sat, 15 February 25

Follow us
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್

ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!

ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​

ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್

ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ

VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!