
ಐಪಿಎಲ್ 2025 (IPL 2025) ರಲ್ಲಿ, ಆಟಗಾರರು ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿಯುವ ಪ್ರವೃತ್ತಿ ಮುಂದುವರೆದಿದೆ. ಈಗ ಈ ಪಟ್ಟಿಗೆ ಹೊಸ ಹೆಸರು ಸೇರ್ಪಡೆಯಾಗಿದ್ದು, ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಟೂರ್ನಿಯಿಂದ ಹೊರಬೀಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವೂ ಇದ್ದು, ಗಾಯದಿಂದ ಬಳಲುತ್ತಿರುವ ಮ್ಯಾಕ್ಸ್‌ವೆಲ್ ಇದುವರೆಗೂ ಚೇತರಿಸಿಕೊಂಡಿಲ್ಲ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಬಗ್ಗೆ ಮಾತನಾಡಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಕೂಡ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಪಂದ್ಯಗಳನ್ನು ಆಡುವ ಬಗ್ಗೆ ಯಾವುದೇ ಖಚಿತತೆಯನ್ನು ನೀಡಲಿಲ್ಲ.
ಈ ಆವೃತ್ತಿಯಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಮ್ಯಾಕ್ಸ್‌ವೆಲ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಕುತೂಹಲವಿತ್ತು. ಆದರೆ ಟಾಸ್ ಗೆದ್ದ ತಕ್ಷಣ ಮ್ಯಾಕ್ಸ್‌ವೆಲ್ ಬಗ್ಗೆ ಮಾತನಾಡಿದ ತಂಡದ ನಾಯಕ ಶ್ರೇಯಸ್ ಅಯ್ಯರ್, ಮ್ಯಾಕ್ಸ್‌ವೆಲ್ ಅವರ ಬೆರಳಿನಲ್ಲಿ ಮೂಳೆ ಮುರಿತವಿದ್ದು, ಅವರು ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಇದರರ್ಥ ಕಳಪೆ ಫಾರ್ಮ್ ಜೊತೆಗೆ ಗಾಯದಿಂದ ಬಳಲುತ್ತಿರುವ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್ನ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.
ಮ್ಯಾಕ್ಸ್‌ವೆಲ್ ಅವರನ್ನು ಲೀಗ್ನಿಂದ ಹೊರಗಿಡುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕ ಹೊರಬಿದ್ದಿಲ್ಲವಾದರೂ, ಟಾಸ್ ಸಮಯದಲ್ಲಿ ಅಯ್ಯರ್ ಹೇಳಿದ ಮಾತುಗಳಿಂದ, ಅವರು ಈ ಪಂದ್ಯಾವಳಿಯಲ್ಲಿ ಮುಂದೆ ಆಡಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮ್ಯಾಕ್ಸ್‌ವೆಲ್ ಅವರ ಬದಲಿ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಯ್ಯರ್ ಹೇಳಿದ್ದರಿಂದ ಮ್ಯಾಕ್ಸ್‌ವೆಲ್ ಈಗ ಈ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಆದರೆ ಅವರ ಸ್ಥಾನದಲ್ಲಿ ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಪ್ರಶ್ನೆ. ಈ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಅವರ ಪ್ರದರ್ಶನವನ್ನು ಗಮನಿಸಿದರೆ, ತಂಡಕ್ಕೆ ಖಂಡಿತವಾಗಿಯೂ ಬದಲಿ ಆಟಗಾರನ ಅಗತ್ಯವಿದೆ.
PBKS skipper Shreyas Iyer hinted that Glenn Maxwell is ruled out for the remainder of the IPL 2025 season due to a finger injury 🤕🗣️#GlennMaxwell #IPL2025 #CSKvPBKS #Sportskeeda pic.twitter.com/iCvnSOa0ze
— Sportskeeda (@Sportskeeda) April 30, 2025
ಈ ಸೀಸನ್ನಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದಾರೆ. ಅವರು ಆಡಿದ 7 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದು, 6 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 7,7,3,1,30, ಮತ್ತು 0 ರನ್ ಕಲೆಹಾಕಿದ್ದಾರೆ. ಬೌಲಿಂಗ್‌ನಲ್ಲಿ ಅವರು 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಮ್ಯಾಕ್ಸ್‌ವೆಲ್ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 48 ರನ್‌ಗಳನ್ನು ಗಳಿಸಿರುವುದು ಅವರ ಇತ್ತೀಚಿನ ಕಳಪೆ ಫಾರ್ಮ್ ಅನ್ನು ಪ್ರತಿಬಿಂಬಿಸುತ್ತದೆ.
IPL 2025: ‘ಮುಂದಿನ ಪಂದ್ಯ ಆಡುವುದೇ ನಿರ್ಧಾರವಾಗಿಲ್ಲ’; ಎಲ್ಲರನ್ನೂ ಅಚ್ಚರಿಗೊಳಿಸಿದ ಧೋನಿ
ಮ್ಯಾಕ್ಸ್‌ವೆಲ್ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 141 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 135 ಇನ್ನಿಂಗ್ಸ್‌ಗಳಲ್ಲಿ 23.88 ಸರಾಸರಿ ಮತ್ತು 155.14 ಸ್ಟ್ರೈಕ್ ರೇಟ್‌ನೊಂದಿಗೆ 2,819 ರನ್ ಗಳಿಸಿದ್ದಾರೆ. ಇದರಲ್ಲಿ 18 ಅರ್ಧಶತಕಗಳು ಸೇರಿವೆ. ಬೌಲಿಂಗ್ನಲ್ಲಿಯೂ ಮ್ಯಾಜಿಕ್ ಮಾಡಿರುವ ಮ್ಯಾಕ್ಸ್‌ವೆಲ್ 34.46 ಸರಾಸರಿಯಲ್ಲಿ ಒಟ್ಟು 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುವ ಈ ಆಟಗಾರನನ್ನು ಟಿ20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಲ್‌ರೌಂಡರ್ ಎಂದು ಪರಿಗಣಿಸಲಾಗಿದೆ. ಆದರೆ ಪ್ರಸ್ತುತ ಅವರು ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Wed, 30 April 25