AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಯಾವಾಗ ನನಗೆ ನಡೆಯಲು ಆಗುವುದಿಲ್ಲವೊ ಅಲ್ಲಿಯವರೆಗೆ ಐಪಿಎಲ್ ಆಡುತ್ತೇನೆ: ಮ್ಯಾಕ್ಸ್​ವೆಲ್

Glenn Maxwell About IPL: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಮಾತನಾಡಿದ್ದು, ನನಗೆ ಯಾವಾಗ ನಡೆಯಲು ಆಗುವುದಿಲ್ಲ ಅನಿಸುತ್ತದೆಯೊ ಅಲ್ಲಿಯವರೆಗೆ ನಾನು ಐಪಿಎಲ್ ಆಡುತ್ತಲೇ ಇರುತ್ತೇನೆ. ಕೊನೆಯ ವರೆಗೂ ಆಡುವ ಲೀಗ್ ಎಂದರೆ ಅದು ಐಪಿಎಲ್ ಮಾತ್ರ ಎಂದು ಹೇಳಿದ್ದಾರೆ.

IPL 2024: ಯಾವಾಗ ನನಗೆ ನಡೆಯಲು ಆಗುವುದಿಲ್ಲವೊ ಅಲ್ಲಿಯವರೆಗೆ ಐಪಿಎಲ್ ಆಡುತ್ತೇನೆ: ಮ್ಯಾಕ್ಸ್​ವೆಲ್
Glenn Maxwell IPL
Vinay Bhat
|

Updated on:Dec 07, 2023 | 9:26 AM

Share

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್‌ ಮತ್ತು ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚು ಹರಿಸಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (Glenn Maxwell) ಇಂಡಿಯನ್ ಪ್ರೀಮಿಯರ್ ಲೀಗ್ ಎಷ್ಟು ಮಹತ್ವದ್ದು ಎಂಬುದು ಅವರ ಇತ್ತೀಚಿನ ಹೇಳಿಕೆ ಕೇಳಿದರೆ ಗೊತ್ತಾಗುತ್ತದೆ. ವಿಶ್ವಕಪ್ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದ ವಿರುದ್ಧ T20 ಸರಣಿಯ ಆರಂಭಿಕ ಪಂದ್ಯಗಳನ್ನು ಆಡಿ ನಂತರ ವಿರಾಮಕ್ಕೆ ಜಾರಿದ್ದರು. ಇದೀಗ ಮತ್ತೆ ಕ್ರಿಕೆಟ್ ಆಕ್ಷನ್‌ಗೆ ಮರಳಲು ಸಜ್ಜಾಗಿದ್ದು, ಬಿಗ್ ಬ್ಯಾಷ್ ಲೀಗ್‌ನಲ್ಲಿ ತಮ್ಮ ತಂಡದ ನಾಯಕತ್ವ ವಹಿಸಲಿದ್ದಾರೆ.

ಈ ಮಧ್ಯೆ, ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಐಪಿಎಲ್ ಕುರಿತು ಪ್ರಶ್ನೆಯನ್ನು ಕೇಳಿದಾಗ, ”ಐಪಿಎಲ್ ಕೊನೆಯವರೆಗೂ ಆಡಲು ಬಯಸುವ ಏಕೈಕ ಪಂದ್ಯಾವಳಿಯಾಗಿದೆ. ಯಾವಾಗ ನನಗೆ ನಡೆಯಲು ಆಗುವುದಿಲ್ಲ ಅನಿಸುತ್ತದೆಯೊ ಅಲ್ಲಿಯವರೆಗೆ ನಾನು ಐಪಿಎಲ್ ಆಡುತ್ತಲೇ ಇರುತ್ತೇನೆ. ಕೊನೆಯ ವರೆಗೂ ಆಡುವ ಲೀಗ್ ಎಂದರೆ ಅದು ಐಪಿಎಲ್ ಮಾತ್ರ,” ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

VIDEO: 24 ಎಸೆತಗಳಲ್ಲಿ ಸ್ಪೋಟಕ ಶತಕ​: ಹೊಸ ವಿಶ್ವ ದಾಖಲೆ

ಇದನ್ನೂ ಓದಿ
Image
ಗುಜರಾತ್ ಜೈಂಟ್ಸ್​ ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್​ ತಂಡಕ್ಕೆ ರೋಚಕ ಜಯ
Image
IND vs ENG: ಟೀಮ್ ಇಂಡಿಯಾಗೆ ಸೋಲುಣಿಸಿದ ಇಂಗ್ಲೆಂಡ್
Image
IPL 2024: 3 ತಂಡಗಳಿಗೆ ಹೊಸ ನಾಯಕ..!
Image
IPL 2024: ಮೊಹಮ್ಮದ್ ಶಮಿಗೆ ತೆರೆಮರೆಯಲ್ಲೇ ಬಿಗ್ ಆಫರ್..!

”ಐಪಿಎಲ್ ನನ್ನ ಇಡೀ ವೃತ್ತಿಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ ಟೂರ್ನಿಯಾಗಿದೆ. ನನಗೆ ಅನೇಕ ಜನರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು, ಈ ಪಂದ್ಯಾವಳಿಯಿಂದಾಗಿ ನಾನು ಅನೇಕ ಶ್ರೇಷ್ಠ ಆಟಗಾರರು ಮತ್ತು ತರಬೇತುದಾರರೊಂದಿಗೆ ಆಡಲು ಸಾಧ್ಯವಾಯಿತು. ನಾನು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರೊಂದಿಗೆ ಆಡುತ್ತಿದ್ದೇನೆ, ದೊಡ್ಡ ಆಟಗಾರರೊಂದಿಗೆ ಸ್ಪರ್ಧಿಸುತ್ತಿದ್ದೇನೆ, ಇದಕ್ಕಿಂತ ಉತ್ತಮವಾದುದೇನು ಬೇಕು,” ಎಂಬುದು ಮ್ಯಾಕ್ಸ್​ವೆಲ್ ಮಾತು.

”ಆಸ್ಟ್ರೇಲಿಯಾದ ಹೆಚ್ಚು ಆಟಗಾರರು ಐಪಿಎಲ್‌ನಲ್ಲಿ ಭಾಗವಾಗಬೇಕೆಂದು ಬಯಸುತ್ತೇನೆ, ಏಕೆಂದರೆ ಅವರು ಸಾಕಷ್ಟು ಅನುಭವವನ್ನು ಪಡೆಯುತ್ತಾರೆ. ಇದು ಭಾರತದ ಪಿಚ್‌ಗಳಲ್ಲಿ ಮಾತ್ರವಲ್ಲದೆ ವೆಸ್ಟ್ ಇಂಡೀಸ್‌ನ ಪಿಚ್‌ಗಳಲ್ಲಿಯೂ ಆಡಲು ಸುಲಭವಾಗುತ್ತದೆ,” ಎಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧ ಸ್ಫೋಟಕ ಆಟವಾಡಿದರು. ನೋವಿನ ನಡುವೆಯೂ ಅವರು ಬ್ಯಾಟ್ ಬೀಸಿ ದ್ವಿಶತಕ ಬಾರಿಸಿ ಸೋಲುವ ಪಂದ್ಯವನ್ನು ಗೆಲ್ಲುವಂತೆ ಮಾಡಿದರು.

ವಿಶ್ವಕಪ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ನೋಡಿದರೆ, ಅವರು 9 ಪಂದ್ಯಗಳಲ್ಲಿ 400 ರನ್ ಗಳಿಸಿದರು. ಅದರಲ್ಲಿ ದ್ವಿಶತಕ ಮತ್ತು ಶತಕವೂ ಸೇರಿದೆ. ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ನಲ್ಲಿ ಮ್ಯಾಕ್ಸಿ ಮಹತ್ವದ ಪಾತ್ರವಹಿಸಲಿದ್ದಾರೆ. ಐಪಿಎಲ್​ನಲ್ಲಿ ಇವರು 124 ಪಂದ್ಯಗಳಲ್ಲಿ 2700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿಕೊಂಡು ಕಳೆದ 3 ಋತುಗಳಲ್ಲಿ 1200 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 am, Thu, 7 December 23