VIDEO: 24 ಎಸೆತಗಳಲ್ಲಿ ಸ್ಪೋಟಕ ಶತಕ: ಹೊಸ ವಿಶ್ವ ದಾಖಲೆ
Hamza Saleem Dar: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಟಲುನ್ಯ ಜಾಗ್ವಾರ್ ತಂಡದ ಪರ ಹಮ್ಝ ಸಲೀಮ್ ದಾರ್ ಹಾಗೂ ಅಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಲೀಮ್ ದಾರ್ ಎದುರಾಳಿ ಬೌಲರ್ಗಳ ಬೆಂಡೆತ್ತಿದರು.
ಸ್ಪೇನ್ನಲ್ಲಿ ನಡೆದ ಯುರೋಪಿಯನ್ ಟಿ10 ಕ್ರಿಕೆಟ್ ಸಿರೀಸ್ನಲ್ಲಿ ಸ್ಪೋಟಕ ಶತಕ ಸಿಡಿಸಿ ಹಮ್ಝ ಸಲೀಮ್ ದಾರ್ (Hamza Saleem Dar) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕ್ಯಾಟಲುನ್ಯ ಜಾಗ್ವಾರ್ (CJG) ಮತ್ತು ಸೋಹಲ್ ಹಾಸ್ಪಿಟಲ್ (SOH) ನಡುವಿನ ಈ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಟಲುನ್ಯ ಜಾಗ್ವಾರ್ ತಂಡದ ಪರ ಹಮ್ಝ ಸಲೀಮ್ ದಾರ್ ಹಾಗೂ ಅಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಲೀಮ್ ದಾರ್ ಎದುರಾಳಿ ಬೌಲರ್ಗಳ ಬೆಂಡೆತ್ತಿದರು.
ಅದರಲ್ಲೂ ಸಿಕ್ಸ್-ಫೋರ್ಗಳ ಸುರಿಮಳೆಗೈದ ಸಲೀಮ್ ದಾರ್ ಕೇವಲ 24 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ದಾರ್ 22 ಭರ್ಜರಿ ಸಿಕ್ಸ್ ಹಾಗೂ 14 ಬೌಂಡರಿಗಳೊಂದಿಗೆ ಕೇವಲ 43 ಎಸೆತಗಳಲ್ಲಿ ಅಜೇಯ 193 ರನ್ ಬಾರಿಸಿದರು.
ಇದರೊಂದಿಗೆ ಟಿ10 ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಹಮ್ಝ ಸಲೀಮ್ ದಾರ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ 163 ರನ್ ಬಾರಿಸಿದ ಹಂಗೇರಿಯ ಲಿವ್ಸ್ ಡು ಪ್ಲಾಡಿ ಹೆಸರಿನಲ್ಲಿತ್ತು. ಇದೀಗ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸಲೀಮ್ ದಾರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
𝗪𝗢𝗥𝗟𝗗 𝗥𝗘𝗖𝗢𝗥𝗗 𝗞𝗡𝗢𝗖𝗞!🤯
Hamza Saleem Dar’s 43-ball 1️⃣9️⃣3️⃣ not out is the highest individual score in a 10-over match.😍 #EuropeanCricket #EuropeanCricketSeries #StrongerTogether pic.twitter.com/4RQEKMynu2
— European Cricket (@EuropeanCricket) December 6, 2023
ಇನ್ನು ಸಲೀಮ್ ದಾರ್ ಅವರ ಈ ಸ್ಪೋಟಕ ಶತಕದ ನೆರವಿನಿಂದ ಕ್ಯಾಟಲುನ್ಯ ಜಾಗ್ವಾರ್ ತಂಡವು 10 ಓವರ್ಗಳಲ್ಲಿ 257 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಇದನ್ನೂ ಓದಿ: ಸೂರ್ಯನ ಸಿಡಿಲಬ್ಬರಕ್ಕೆ ಕಿಂಗ್ ಕೊಹ್ಲಿ ದಾಖಲೆ ಶೇಕಿಂಗ್..!
258 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಸೋಹಲ್ ಹಾಸ್ಪಿಟಲ್ (SOH) ತಂಡವು 10 ಓವರ್ಗಳಲ್ಲಿ ಕೇವಲ 104 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕ್ಯಾಟಲುನ್ಯ ಜಾಗ್ವಾರ್ ತಂಡವು 153 ರನ್ಗಳ ಭರ್ಜರಿ ಜಯ ಸಾಧಿಸಿದೆ.