Global T20 2024: ಗ್ಲೋಬಲ್ ಟಿ20 ಲೀಗ್​ನ ವೇಳಾಪಟ್ಟಿ ಪ್ರಕಟ

|

Updated on: Jul 24, 2024 | 11:43 AM

Global T20 2024: 2018 ರಲ್ಲಿ ಶುರುವಾದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಈವರೆಗೆ ಕೇವಲ ಮೂರು ಸೀಸನ್​ ಮಾತ್ರ ಆಡಲಾಗಿದೆ. ಅಂದರೆ ಕೋವಿಡ್ ಭೀತಿಯ ಕಾರಣ 2020, 2021 ಮತ್ತು 2022 ರಲ್ಲಿ ಟೂರ್ನಿಯನ್ನು ಆಯೋಜಿಸಲಾಗಿರಲಿಲ್ಲ. ಇನ್ನು 2018 ರಲ್ಲಿ ವ್ಯಾಂಕೋವರ್ ನೈಟ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 2019 ರಲ್ಲಿ ವಿನ್ನಿಪೆಗ್ ಹಾಕ್ಸ್ ತಂಡ ಕಿರೀಟ ಮುಡಿಗೇರಿಸಿಕೊಂಡಿತು. ಹಾಗೆಯೇ 2023 ರಲ್ಲಿ ಮಾಂಟ್ರಿಯಲ್ ಟೈಗರ್ಸ್ ಚಾಂಪಿಯನ್ ಪಟಕ್ಕೇರಿತು.

Global T20 2024: ಗ್ಲೋಬಲ್ ಟಿ20 ಲೀಗ್​ನ ವೇಳಾಪಟ್ಟಿ ಪ್ರಕಟ
Global T20 2024
Follow us on

ಕೆನಡಾದಲ್ಲಿ ನಡೆಯಲಿರುವ ಗ್ಲೋಬಲ್ ಟಿ20 ಲೀಗ್​ನ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿಯ ಟೂರ್ನಿಯು ಜುಲೈ 26 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಆಗಸ್ಟ್ 11 ರಂದು ನಡೆಯಲಿದೆ. ಹಾಗೆಯೇ ಕಳೆದ ಬಾರಿಯಂತೆ ಈ ಸಲ ಕೂಡ 6 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಲ್ಲಿನ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಸರ್ರೆ ಜಾಗ್ವಾರ್ಸ್ ತಂಡ: ಮಾರ್ಕಸ್ ಸ್ಟೊಯಿನಿಸ್, ಸುನಿಲ್ ನರೈನ್, ಕೈಲ್ ಮೇಯರ್ಸ್, ಮೊಹಮ್ಮದ್ ನಬಿ, ಬೆನ್ ಲಿಸ್ಟರ್, ಟೆರನ್ಸ್ ಹಿಂಡ್ಸ್, ಹರ್ಮೀತ್ ಬದ್ಧನ್, ಬ್ರಾಂಡನ್ ಮೆಕಲಮ್, ಲೋಗನ್ ವ್ಯಾನ್ ಬೀಕ್, ವಿರಂದೀಪ್ ಸಿಂಗ್, ಶ್ರೇಯಸ್ ಮೋವಾ, ಹಂಝ ತಾರಿಕ್, ರಿಜ್ವಾನ್ ಚೀಮಾ, ಮನ್ಸಾಬ್ ಗಿಲ್, ಉದಯ್ ಭಗವಾನ್ ಸಿಂಗ್, ಪದಮ್ ಜೋಶಿ.

ವ್ಯಾಂಕೋವರ್ ನೈಟ್ಸ್: ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ಅಮೀರ್, ಆಸಿಫ್ ಅಲಿ, ಮೈಕೆಲ್ ರಿಪ್ಪನ್, ಡ್ವೈನ್ ಪ್ರಿಟೋರಿಯಸ್, ಸಂದೀಪ್ ಲಮಿಚಾನೆ, ದೀಪೇಂದ್ರ ಸಿಂಗ್ ಐರಿ, ಪಾಲ್ ವ್ಯಾನ್ ಮೀಕೆರೆನ್, ರೂಬೆನ್ ಟ್ರಂಪೆಲ್‌ಮನ್, ಜೆರೆಮಿ ಗಾರ್ಡನ್, ಹರ್ಷ್ ಠಾಕರ್, ರಿಶಿವ್ ಜೋಶಿ, ಸರ್ಮದ್ ಅನ್ವರ್, ಶುಭಂ ಶರ್ಮಾ, ಯುವರಾಜ್ ಸಮ್ರ, ಅಜಯ್ವೀರ್ ಸಿಂಗ್, ಮನ್ದೀಪ್ ಗಿರ್ಧರ್.

ಟೊರೊಂಟೊ ನ್ಯಾಷನಲ್ಸ್: ಕಾಲಿನ್ ಮನ್ರೊ, ಶಾಹೀನ್ ಅಫ್ರಿದಿ, ರೊಮಾರಿಯೊ ಶೆಫರ್ಡ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಮೊಹಮ್ಮದ್ ನವಾಜ್, ರಿಶಾದ್ ಹೊಸೈನ್, ಆಂಡ್ರೀಸ್ ಗೌಸ್, ಜುನೈದ್ ಸಿದ್ದಿಕ್, ರೋಹಿದ್ ಖಾನ್, ಸಾದ್ ಬಿನ್ ಜಾಫರ್, ನಿಕೋಲಸ್ ಕಿರ್ಟನ್, ನಿಖಿಲ್ ದತ್ತಾ, ಅರ್ಮಾನ್ ಕಪೂರ್ತಾ, ಅರ್ಮಾನ್ ಕಪೂರ್ತಾ ಕನ್ವರ್ ಮನ್, ಜಗನ್‌ದೀಪ್ ಸಿಂಗ್.

ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ: ಶಾಕಿಬ್ ಅಲ್ ಹಸನ್, ಇಫ್ತಿಕರ್ ಅಹ್ಮದ್, ರಹಮಾನುಲ್ಲಾ ಗುರ್ಬಾಝ್, ಹಜರತುಲ್ಲಾ ಝಝೈ, ಶೋರಿಫುಲ್ ಇಸ್ಲಾಂ, ಓಡಿಯನ್ ಸ್ಮಿತ್, ಡೇವಿಡ್ ವೀಸ್, ಮುಹಮ್ಮದ್ ವಾಸೆಮ್, ಫರ್ಹಾನ್ ಖಾನ್, ನವ್ ಪಬ್ರೇಜಾ, ಪರ್ಗತ್ ಸಿಂಗ್, ದಿಲೋನ್ ಹೆಲಿಗರ್, ಪಯ್ಯನ್ ಪಠಾಣ್, ತಾಜಿಂದರ್ ಎಸ್. ದೋಸಾಂಜ್, ರವೀಂದರ್ ರೆಡ್ಡಿ, ಗುರ್ಬಾಝ್ ಬಾಜ್ವಾ.

ಮಾಂಟ್ರಿಯಲ್ ಟೈಗರ್ಸ್: ಕ್ರಿಸ್ ಲಿನ್, ಶೆರ್ಫೇನ್ ರುದರ್‌ಫೋರ್ಡ್, ನವೀನ್-ಉಲ್-ಹಕ್, ಅಝ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ಸೈಫುದ್ದೀನ್, ಟಾಮ್ ಲಾಥಮ್, ಗೆರ್ಹಾರ್ಡ್ ಎರಾಸ್ಮಸ್, ಬೆನ್ ಮಾನೆಂಟಿ, ಅಯಾನ್ ಅಫ್ಜಲ್ ಖಾನ್, ಜಹೂರ್ ಖಾನ್, ಕಲೀಮ್ ಸನಾ, ದಿಲ್‌ಪ್ರೀತ್ ಅಫ್ಜಲ್ ಖಾನ್, ಪ್ರಜನದ್ ಬಜ್ವಾ, ಪ್ರಜನದ್ ಬಜ್ವಾ, , ಪ್ರಭಾಸೀಸ್ ರೈನಾ, ಯುವರಾಜ್ ಹುಂಡಾಲ್, ಚರಂಜಿತ್ ರಾಧಾವ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರು

ಬ್ರಾಂಪ್ಟನ್ ವುಲ್ವ್ಸ್: ಡೇವಿಡ್ ವಾರ್ನರ್, ಆಂಡ್ರ್ಯೂ ಟೈ, ಬ್ಯೂ ವೆಬ್‌ಸ್ಟರ್, ಜೋಶುವಾ ಬ್ರೌನ್, ಕಾರ್ಲೋಸ್ ಬ್ರಾಥ್‌ವೈಟ್, ಕೋಬ್ ಹೆರ್ಫ್ಟ್, ಮುಹಮ್ಮದ್ ಜವದುಲ್ಲಾ, ಜಾರ್ಜ್ ಮುನ್ಸಿ, ಆರ್ಯನ್ ದತ್, ಜ್ಯಾಕ್ ಜಾರ್ವಿಸ್, ಆರನ್ ಥಾಪಾಲ್ ಜಾನ್ಸನ್, ಆರನ್ ಪಾಲ್ ಜಾನ್ಸನ್, ಅಭಿಜೈ ಮಾನ್ಸಿಂಗ್, ಅಖಿಲ್ ಕುಮಾರ್, ರಾಬಿನ್ ಸಿಂಗ್, ಸಮರ್ಜಿತ್ ಸಿಂಗ್, ಹರ್ಮನ್ದೀಪ್ ಬಹಿಯಾ.

ಗ್ಲೋಬಲ್ ಟಿ20 ವೇಳಾಪಟ್ಟಿ:

ಗ್ಲೋಬಲ್ ಟಿ20 ಲೀಗ್ ಹಂತದ ವೇಳಾಪಟ್ಟಿ

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಗ್ಲೋಬಲ್ ಟಿ20 ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ಇರಲಿದೆ. ಹಾಗೆಯೇ ಡಿಸ್ನಿ ಹಾಟ್​ ಸ್ಟಾರ್​ನಲ್ಲೂ ಈ ಪಂದ್ಯಗಳನ್ನು ವೀಕ್ಷಿಸಬಹುದು.