ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್ನಲ್ಲಿ ಟೊರೊಂಟೊ ನ್ಯಾಷನಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಒಂಟಾರಿಯೊದ ಸಿಎಎ ಸೆಂಟರ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೊರೊಂಟೊ ನ್ಯಾಷನಲ್ಸ್ ತಂಡದ ನಾಯಕ ಕಾಲಿನ್ ಮನ್ರೊ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಮಾಂಟ್ರಿಯಲ್ ಟೈಗರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 36 ರನ್ಗಳಿಸುಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ಕಾರ್ಬಿನ್ ಬಾಷ್ 33 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಈ ರನ್ಗಳ ನೆರವಿನಿಂದ ಮಾಂಟ್ರಿಯಲ್ ಟೈಗರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ ಕಲೆಹಾಕಿತು.
97 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೊರೊಂಟೊ ನ್ಯಾಷನಲ್ಸ್ ತಂಡವು 12 ರನ್ ಕಲೆಹಾಕುವಷ್ಟರಲ್ಲಿ ಕಾಲಿನ್ ಮನ್ರೊ (0) ಹಾಗೂ ಉನ್ಮುಕ್ತ್ ಚಂದ್ (4) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ಗೆ ಆಗಮಿಸಿದ ಆಂಡ್ರೀಸ್ ಗೌಸ್(58) ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (30) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 15 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಟೊರೊಂಟೊ ನ್ಯಾಷನಲ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
𝐓𝐡𝐞 𝐦𝐨𝐦𝐞𝐧𝐭 𝐭𝐡𝐞𝐲 𝐰𝐨𝐫𝐤𝐞𝐝 𝐫𝐞𝐚𝐥𝐥𝐲 𝐡𝐚𝐫𝐝 𝐟𝐨𝐫 𝐢𝐬 𝐡𝐞𝐫𝐞! 🤩
Presenting you the #GT20Canada Season 4️⃣ Champions! 🙌🏆#GlobalT20 | #CricketsNorth | #MTvTN pic.twitter.com/nbuCYuq58u
— GT20 Canada (@GT20Canada) August 12, 2024
ಮಾಂಟ್ರಿಯಲ್ ಟೈಗರ್ಸ್ ಪ್ಲೇಯಿಂಗ್ 11: ಕ್ರಿಸ್ ಲಿನ್ (ನಾಯಕ) , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಪರ್ವೀನ್ ಕುಮಾರ್ , ಶೆರ್ಫೇನ್ ರುದರ್ಫೋರ್ಡ್ , ಗೆರ್ಹಾರ್ಡ್ ಎರಾಸ್ಮಸ್ , ಅಜ್ಮತುಲ್ಲಾ ಒಮರ್ಜಾಯ್ , ಕಾರ್ಬಿನ್ ಬಾಷ್ , ಅನೂಪ್ ರವಿ , ಅಯಾನ್ ಅಫ್ಜಲ್ ಖಾನ್ , ಜಹೂರ್ ಖಾನ್ , ಜಸ್ಕರನ್ ಸಿಂಗ್.
ಇದನ್ನೂ ಓದಿ: Rohit Sharma: ಈ ಒಂದು ದಾಖಲೆ ಬರೆಯಲು ರೋಹಿತ್ ಶರ್ಮಾ ಮುಂದಿನ ವರ್ಷದವರೆಗೆ ಕಾಯಲೇಬೇಕು..!
ಟೊರೊಂಟೊ ನ್ಯಾಷನಲ್ಸ್ ಪ್ಲೇಯಿಂಗ್ 11: ಕಾಲಿನ್ ಮುನ್ರೊ (ನಾಯಕ) , ಉನ್ಮುಕ್ತ್ ಚಂದ್ (ವಿಕೆಟ್ ಕೀಪರ್) , ಆಂಡ್ರೀಸ್ ಗೌಸ್ , ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ಅರ್ಮಾನ್ ಕಪೂರ್ , ಮೊಹಮ್ಮದ್ ನವಾಜ್ , ರೊಮಾರಿಯೊ ಶೆಫರ್ಡ್ , ನಿಖಿಲ್ ದತ್ತಾ , ಜತೀಂದ್ರಪಾಲ್ ಮಥಾರು , ಜೇಸನ್ ಬೆಹ್ರೆಂಡಾರ್ಫ್ , ಜುನೈದ್ ಸಿದ್ದಿಕ್.