ಐಪಿಎಲ್ 2023 ರಲ್ಲಿ ಅತ್ಯಂತ ರೋಚಕ ಪಂದ್ಯ ಇಂದು ನಡೆದಿದ್ದು, ಕೊನೆಯ ಎಸೆತದಲ್ಲಿ ಗೆಲುವು ದಕ್ಕಿಸಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಗೆಲುವಿನ ಸನಿಹದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡವು 3 ವಿಕೆಟ್‌ಗಳಿಂದ ಸೋತಿದೆ. ಈ ಪಂದ್ಯದ ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಇದೇ ಪಂದ್ಯದಲ್ಲಿ ಗುಜರಾತ್ ನಾಯಕ ರಶೀದ್ ಖಾನ್ ತಮ್ಮ ಐಪಿಎಲ್ ಇತಿಹಾಸದ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದರೆ, ಇತ್ತ ಕೆಕೆಆರ್ ತಂಡದ ಬ್ಯಾಟರ್ ರಿಂಕು ಸಿಂಗ್ 20ನೇ ಓವರ್‌ನ ಕೊನೆಯ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಕೆಕೆಆರ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಇನ್ನೇನೂ ಪಂದ್ಯ ಸೋತೋ ಎಂದುಕೊಂಡಿದ್ದ ಕೆಕೆಆರ್ಗೆ ರಿಂಕು ಸಿಂಗ್ ರೋಚಕ ಜಯ ತಂದುಕೊಟ್ಟಿದ್ದಾರೆ. ಯಶ್ ದಯಾಳ್ ಎಸೆದ ಕೊನೆಯ ಓವರ್ನಲ್ಲಿ ಕೊನೆಯ ಐದು ಎಸೆತಗಳನ್ನು ಸಿಕ್ಸರ್ಗಟ್ಟಿದ ರಿಂಕು ಸಿಂಗ್ ಕೆಕೆಆರ್ಗೆ ರೋಚಕ ಜಯ ತಂದುಕೊಟ್ಟಿದ್ದಾರೆ.
ಕೋಲ್ಕತ್ತಾ ತಂಡ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 29 ರನ್‌ಗಳ ಅಗತ್ಯವಿದೆ.
ರಸೆಲ್ ವಿಕೆಟ್ ಬಳಿಕ ಬಂದ ಶಾರ್ದೂಲ್ ಠಾಕೂರ್ ಕೂಡ ಮೊದಲ ಎಸೆತದಲ್ಲೇ ಎಲ್ಬಿ ಬಲೆಗೆ ಬಿದ್ದರು. ಈ ಮೂಲಕ ರಶೀದ್ ಖಾನ್ ಐಪಿಎಲ್ ಇತಿಹಾಸದಲ್ಲಿ ತಮ್ಮ ಮೊದಲ ಹ್ಯಾಟ್ರಿಕ್ ಪಡೆದಿದ್ದಾರೆ.
ಆಂಡ್ರೆ ರಸೆಲ್ 2 ಎಸೆತಗಳಲ್ಲಿ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು, ಕೋಲ್ಕತ್ತಾದ ಐದನೇ ವಿಕೆಟ್ 155 ರನ್‌ಗಳಿಗೆ ಪತನವಾಯಿತು.
ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 83 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ವೆಂಕಟೇಶ್ ತಮ್ಮ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್ ಮತ್ತು ಎಂಟು ಬೌಂಡರಿಗಳನ್ನು ಬಾರಿಸಿದರು. ಇನ್ನು ರಿಂಕು ಸಿಂಗ್ ಜೊತೆ ಆಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದಾರೆ.
ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅಮೋಘ ಫಾರ್ಮ್ನಲ್ಲಿದ್ದಾರೆ. ಅವರು ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಅವರ ಅದ್ಭುತ ಇನ್ನಿಂಗ್ಸ್‌ನಿಂದ ಕೋಲ್ಕತ್ತಾ 15 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 149 ರನ್ ಗಳಿಸಿದೆ. ಇನ್ನು ಈ ತಂಡದ ಗೆಲುವಿಗೆ 30 ಎಸೆತಗಳಲ್ಲಿ 56 ರನ್‌ಗಳ ಅಗತ್ಯವಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 30 ಎಸೆತಗಳಲ್ಲಿ 56 ರನ್ ಅಗತ್ಯವಿದೆ
ಕೋಲ್ಕತ್ತಾ ನೈಟ್ ರೈಡರ್ಸ್ 14 ಓವರ್‌ಗಳಲ್ಲಿ 132/3, ವೆಂಕಟೇಶ್ ಅಯ್ಯರ್ ಅವರೊಂದಿಗೆ ರಿಂಕು ಸಿಂಗ್ ಕ್ರೀಸ್‌ನಲ್ಲಿದ್ದಾರೆ. ವೆಂಕಟೇಶ್ ಅಯ್ಯರ್ 32 ಎಸೆತಗಳಲ್ಲಿ 64 ರನ್ ಮತ್ತು ರಿಂಕು ಸಿಂಗ್ 3 ಎಸೆತಗಳಲ್ಲಿ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಕೆಕೆಆರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ನಾಯಕ ನಿತೀಶ್ ರಾಣಾ 29 ಎಸೆತಗಳಲ್ಲಿ 45 ರನ್ ಬಾರಿಸಿ, ಮಿಡ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ನಿತೀಶ್ ರಾಣಾ 13ನೇ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದರು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಮತ್ತೆ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದಾರೆ.
ನಿತೀಶ್ ರಾಣಾ ಮತ್ತು ವೆಂಕಟೇಶ್ ಅಯ್ಯರ್ ಅರ್ಧಶತಕದ ಜೊತೆಯಾಟ ನಡೆಸಿದ್ದಾರೆ. ಇಬ್ಬರೂ 30 ಎಸೆತಗಳಲ್ಲಿ 50 ರನ್ ಸೇರಿಸಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಅಯ್ಯರ್ ಅರ್ಧಶತಕದ ಸಮೀಪದಲ್ಲಿದ್ದಾರೆ. ಕೋಲ್ಕತ್ತಾ ಸ್ಕೋರ್ 11 ಓವರ್‌ಗಳ ನಂತರ ಎರಡು ವಿಕೆಟ್‌ಗೆ 99 ಆಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಮತ್ತು ವೆಂಕಟೇಶ್ ಅಯ್ಯರ್ ನಿಧಾನಗತಿಯ ಇನ್ನಿಂಗ್ಸ್‌ಗೆ ವೇಗ ನೀಡಲು ಆರಂಭಿಸಿದ್ದಾರೆ.
ವೆಂಕಟೇಶ್ ಅಯ್ಯರ್ 10ನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಸದ್ಯ ವೆಂಕಟೇಶ್ ಅಯ್ಯರ್ ಮತ್ತು ನಿತೀಶ್ ರಾಣಾ ಉತ್ತಮ ಜೊತೆಯಾಟವನ್ನು ರೂಪಿಸುತ್ತಿದ್ದಾರೆ. ಇಬ್ಬರೂ ವೇಗದಲ್ಲಿ ರನ್ ಗಳಿಸುತ್ತಿದ್ದಾರೆ. 9 ಓವರ್‌ಗಳ ನಂತರ ಕೋಲ್ಕತ್ತಾದ ಸ್ಕೋರ್ ಎರಡು ವಿಕೆಟ್‌ಗೆ 78 ರನ್ ಆಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ 8 ಓವರ್‌ಗಳ ನಂತರ 68/2. ನಿತೀಶ್ ರಾಣಾ 12 ಎಸೆತಗಳಲ್ಲಿ 17 ರನ್ ಮತ್ತು ವೆಂಕಟೇಶ್ ಅಯ್ಯರ್ 16 ಎಸೆತಗಳಲ್ಲಿ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ವೆಂಕಟೇಶ್ ಅಯ್ಯರ್ ಏಳನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಹಾಗೂ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಪವರ್‌ಪ್ಲೇಯಲ್ಲಿ ಕೋಲ್ಕತ್ತಾ ತಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ. ನಾಯಕ ನಿತೀಶ್ ರಾಣಾ ಮತ್ತು ವೆಂಕಟೇಶ್ ಅಯ್ಯರ್ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ.
ಕೋಲ್ಕತ್ತಾಗೆ ಮತ್ತೊಂದು ಹೊಡೆತ ಬಿದ್ದಿದೆ.ಎನ್ ಜಗದೀಶನ್ ಔಟಾಗಿದ್ದಾರೆ. ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು.
ಕೋಲ್ಕತ್ತಾ ತಂಡ 20 ರನ್‌ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಇನ್ನು ನಾರಾಯಣ್ ಜಗದೀಸನ್ ಅವರೊಂದಿಗೆ ವೆಂಕಟೇಶ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ. ಮೂರು ಓವರ್‌ಗಳ ನಂತರ ಕೋಲ್ಕತ್ತಾದ ಸ್ಕೋರ್ ಒಂದು ವಿಕೆಟ್‌ಗೆ 26 ರನ್ ಆಗಿದೆ.
ಕೋಲ್ಕತ್ತಾದ ಮೊದಲ ವಿಕೆಟ್ ಪತನವಾಗಿದೆ.ಓಪನರ್ ರಹಮಾನುಲ್ಲಾ ಗುರ್ಬಾಜ್ ಔಟಾಗಿದ್ದಾರೆ. ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡಿದರು.ಮೂರನೇ ಓವರ್‌ನ ಎರಡನೇ ಎಸೆತವು ಗುರ್ಬಾಜ್ ಅವರ ಬ್ಯಾಟ್‌ಗೆ ತಾಗಿ ಗಾಳಿಯಲ್ಲಿ ಹೋಯಿತು, ಯಶ್ ದಯಾಲ್ ಅದ್ಭುತ ಕ್ಯಾಚ್ ಹಿಡಿದರು.
ಕೋಲ್ಕತ್ತಾದ ಇನ್ನಿಂಗ್ಸ್ ಆರಂಭವಾಗಿದೆ. ರಹಮಾನುಲ್ಲಾ ಗುರ್ಬಾಜ್ ಮತ್ತು ಎನ್ ಜಗದೀಶನ್ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ.
20ನೇ ಓವರ್ ಎಸೆದ ಶಾರ್ದೂಲ್ ತೀರ ದುಬಾರಿಯಾದರು. ಈ ಓವರ್ನಲ್ಲಿ ವಿಜಯ್ ಶಂಕರ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಗುಜರಾತ್ 4 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿದೆ.
20ನೇ ಓವರ್ 3ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶಂಕರ್ 21 ಎಸೆತದಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಲಾಕಿ ಫರ್ಗ್ಯೂಸನ್ ಎಸೆದ 19ನೇ ಓವರ್‌ನ ಎರಡನೇ ಎಸೆತದಲ್ಲಿ ವಿಜಯ್ ಶಂಕರ್ ಸಿಕ್ಸರ್ ಹಾಗೂ ಮೂರನೇ ಎಸೆತದಲ್ಲಿ ಬೌಂಡರಿ ಅಂತಿಮವಾಗಿ 6ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು.
ಸಾಯಿ ಸುದರ್ಶನ್ 38 ಎಸೆತಗಳಲ್ಲಿ 53 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ನರೈನ್ಗೆ ಇದು 3ನೇ ವಿಕೆಟ್
ಗುಜರಾತ್ ತಂಡದ ಪರ ಸಾಯಿ ಸುದರ್ಶನ್ ಸತತ ಎರಡನೇ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 17 ಓವರ್‌ಗಳ ನಂತರ ತಂಡದ ಸ್ಕೋರ್ 3 ವಿಕೆಟ್‌ಗೆ 151 ರನ್ ಆಗಿದೆ. ಇದರಲ್ಲಿ ಸಾಯಿ 37 ಎಸೆತಗಳಲ್ಲಿ 53 ರನ್ ಕೊಡುಗೆ ನೀಡಿದ್ದಾರೆ. ವಿಜಯ್ ಶಂಕರ್ 10 ಎಸೆತಗಳಲ್ಲಿ 16 ರನ್ ಗಳಿಸಿ ಕ್ರೀಸ್ ನಲ್ಲಿ ಆಡುತ್ತಿದ್ದಾರೆ
17ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ಸುದರ್ಶನ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
ಗುಜರಾತ್ ಟೈಟಾನ್ಸ್ ಸ್ಕೋರ್ 15 ಓವರ್‌ಗಳ ನಂತರ 132/3. ಸಾಯಿ ಸುದರ್ಶನ್ 31 ಎಸೆತಗಳಲ್ಲಿ 46 ರನ್ ಮತ್ತು ವಿಜಯ್ ಶಂಕರ್ 3 ಎಸೆತಗಳಲ್ಲಿ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಗುಜರಾತ್ ಟೈಟಾನ್ಸ್ 14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಭಿನವ್ ಮನೋಹರ್ ಔಟಾದರು. ಅವರನ್ನು ಸುಯಾಶ್ ಶರ್ಮಾ ಬೌಲ್ಡ್ ಮಾಡಿದರು.
ಗಿಲ್ ವಿಕೆಟ್ ಬಳಿಕ ಬಂದ ಕನ್ನಡಿಗ ಅಭಿನವ್ ಮನೋಹರ್ ಉಮೇಶ್ ಯಾದವ್ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು.
ನರೈನ್ ಎಸೆದ 12ನೇ ಓವರ್‌ನ 4 ನೇ ಎಸೆತದಲ್ಲಿ ಲಾಂಗ್ ಆನ್ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಗಿಲ್, ಉಮೇಶ್ಗೆ ಕ್ಯಾಚಿತ್ತು ಔಟಾದರು.
ಸಾಯಿ ಸುದರ್ಶನ್ 12ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅರ್ಧಶತಕದ ಜೊತೆಯಾಟ ನಡೆಸಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಸ್ಕೋರ್ ಅನ್ನು ಒಂದು ವಿಕೆಟ್‌ಗೆ 90 ರನ್‌ಗಳಿಗೆ ಕೊಂಡೊಯ್ದಿದ್ದಾರೆ.
10ನೇ ಓವರ್‌ನ ಎರಡನೇ ಎಸೆತದಲ್ಲಿ ಗಿಲ್ 1 ಬೌಂಡರಿ ಬಾರಿಸಿದರು. ಬಳಿಕ ಸುದರ್ಶನ್ ಕೂಡ ಇನ್ನೊಂದು ಬೌಂಡರಿ ಬಾರಿಸಿದರು.
ಸುಯೇಶ್ ಎಸೆದ 8ನೇ ಓವರ್‌ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮಾಡಿದ ಸುದರ್ಶನ್ ಅದ್ಭುತ ಬೌಂಡರಿ ಬಾರಿಸಿದರು.
ನರೈನ್ ಎಸೆದ 7ನೇ ಓವರ್‌ನ ಕೊನೆಯ ಎಸೆತದಲ್ಲಿ ಗಿಲ್ ಬೌಂಡರಿ ಬಾರಿಸಿದರು. ಸದ್ಯ ಗುಜರಾತ್ 1 ವಿಕೆಟ್ ಕಳೆದುಕೊಂಡು 62 ರನ್ ಬಾರಿಸಿದೆ.
ಪವರ್ ಪ್ಲೇಯ ಕೊನೆಯ ಓವರ್ನಲ್ಲಿ 3 ಬೌಂಡರಿ ಬಂದವು. ಇದರಲ್ಲಿ 2 ಬೌಂಡರಿ ಗಿಲ್ ಬ್ಯಾಟ್ನಿಂದ ಬಂದರೆ, 1 ಬೌಂಡರಿ ವೈಡ್ ಮೂಲಕ ಬಂತು.
ಗುಜರಾತ್ ಟೈಟಾನ್ಸ್‌ಗೆ ಮೊದಲ ಹೊಡೆತ ಬಿದ್ದಿತು. ವೃದ್ಧಿಮಾನ್ ಸಹಾ 17 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು.
ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ವೃದ್ಧಿಮಾನ್ ಸಹಾ ಬೌಂಡರಿ ಬಾರಿಸಿದರು
ಆರಂಭಿಕರಾದ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಉತ್ತಮ ಆರಂಭ ನೀಡಿದ್ದಾರೆ. ಮೊದಲ 3 ಓವರ್‌ಗಳಲ್ಲಿ ಇಬ್ಬರೂ 24 ರನ್ ಗಳಿಸಿದ್ದರು.
ಗುಜರಾತ್ ಬ್ಯಾಟಿಂಗ್ ಆರಂಭಿಸಿದ್ದು, ತಂಡದ ಪರ ಗಿಲ್ ಹಾಗೂ ಸಾಹ ಬ್ಯಾಟಿಂಗ್ ಆರಂಭಿಸಿದ್ದಾರೆ. ಉಮೇಶ್ ಎಸೆದ ಈ ಓವರ್ನಲ್ಲಿ ಗುಜರಾತ್ 4 ರನ್ ಕಲೆ ಹಾಕಿತು.
ರಹಮಾನುಲ್ಲಾ ಗುರ್ಬಾಜ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ಸುಯೇಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಎನ್. ಜಗದೀಶನ್
ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್ (ನಾಯಕ), ಜೋಸ್ ಲಿಟಲ್, ಯಶ್ ದಯಾಳ್, ಮೊಹಮ್ಮದ್ ಶಮಿ
ಟಾಸ್ ಗೆದ್ದ ಗುಜರಾತ್ ಹಂಗಾಮಿ ನಾಯಕ ರಶೀದ್ ಖಾನ್ ಮೊದಲ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಂಜುರಿಯಿಂದಾಗಿ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಆಡುತ್ತಿಲ್ಲ.
Published On - 2:47 pm, Sun, 9 April 23