
ಐಪಿಎಲ್‌ನ 51ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 56 ರನ್ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಸಮೀಪಕ್ಕೆ ಬಂದಿದೆ. ಈ ಪಂದ್ಯದಲ್ಲಿ ಲಕ್ನೋ ನಾಯಕ ಕೃನಾಲ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು. ಗುಇದಕ್ಕೆ ಉತ್ತರವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಯುಷ್ ಬದೋನಿ 19ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು
ಕ್ವಿಂಟನ್ ಡಿ ಕಾಕ್ 41 ಎಸೆತಗಳಲ್ಲಿ 70 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ.
16ನೇ ಓವರ್‌ನ ಮೊದಲ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಸಿಕ್ಸರ್ ಬಾರಿಸಿದರು.
ಲಕ್ನೋ ಸೂಪರ್ ಜೈಂಟ್ಸ್ಗೆ ಮೂರನೇ ಹೊಡೆತ ಬಿದ್ದಿದೆ. ಮಾರ್ಕ್ವೆಸ್ ಸ್ಟೊಯಿನಿಸ್ 9 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಲಕ್ನೋ ಸೂಪರ್ ಜೈಂಟ್ಸ್ 13 ಓವರ್‌ಗಳಲ್ಲಿ 2 ವಿಕೆಟ್‌ಗೆ 117 ರನ್ ಗಳಿಸಿದೆ. 10 ಓವರ್‌ಗಳಲ್ಲಿ ತಂಡ 102 ರನ್ ಗಳಿಸಿತು. ಕೊನೆಯ ಎರಡು ಓವರ್‌ಗಳಲ್ಲಿ ಕೇವಲ 11 ರನ್ ಗಳಿಸಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ಗೆ ದೀಪಕ್ ಹೂಡಾ ರೂಪದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಹೂಡಾ 11 ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ
8 ಪಂದ್ಯಗಳ ಬಳಿಕ ಆಡುವ ಅವಕಾಶ ಪಡೆದ ಕ್ವಿಂಟನ್ ಡಿ ಕಾಕ್ 31 ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ.
10 ಓವರ್‌ಗಳ ಅಂತ್ಯಕ್ಕೆ ಲಕ್ನೋ 1 ವಿಕೆಟ್‌ಗೆ 102 ರನ್ ಗಳಿಸಿದೆ. ಕ್ವಿಂಟನ್ ಡಿ ಕಾಕ್, ಸಿಕ್ಸರ್ ಬಾರಿಸಿ ಲಕ್ನೋ ಪರ ಶತಕ ಪೂರೈಸಿದರು. ಡಿ ಕಾಕ್ 24 ಎಸೆತಗಳಲ್ಲಿ 45 ಮತ್ತು ದೀಪಕ್ ಹೂಡಾ 5 ರನ್ ಗಳಿಸಿ ಆಡುತ್ತಿದ್ದಾರೆ.
ಸ್ಟಾರ್ಮ್ ಬ್ಯಾಟ್ಸ್‌ಮನ್ ಕೈಲ್ ಮೇಯರ್ಸ್ ಔಟಾಗಿದ್ದಾರೆ. ಮೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ರಶೀದ್ ಖಾನ್ ಅವರ ಅದ್ಭುತ ಕ್ಯಾಚ್ ಪಡೆದರು. ಮೇಯರ್ಸ್ 32 ಎಸೆತಗಳಲ್ಲಿ 48 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು.
8 ಓವರ್‌ಗಳ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದೆ. ಮೈಯರ್ಸ್ 48 ಮತ್ತು ಕ್ವಿಂಟನ್ ಡಿ ಕಾಕ್ 35 ರನ್ ಗಳಿಸಿ ಆಡುತ್ತಿದ್ದಾರೆ.
ಪವರ್ ಪ್ಲೇಯ 6 ಓವರ್‌ಗಳಲ್ಲಿ ಲಕ್ನೋ ಯಾವುದೇ ವಿಕೆಟ್ ನಷ್ಟವಿಲ್ಲದೆ 68 ರನ್ ಬಾರಿಸಿದೆ. 6ನೇ ಓವರ್ನಲ್ಲೂ ಮೇಯರ್ಸ್ 2 ಬೌಂಡರಿ ಹೊಡೆದರು.
ರಶೀದ್ ಬೌಲ್ ಮಾಡಿದ 5ನೇ ಓವರ್‌ನ 4ನೇ ಎಸೆತವನ್ನು ಮೇಯರ್ಸ್ ಸಿಕ್ಸರ್ಗಟ್ಟಿದರು. ಇದಲ್ಲದೆ ಇನ್ನೊಂದು ಬೌಂಡರಿ ಕೂಡ ಬಂತು.
ಲಕ್ನೋ ತಂಡ ಉತ್ತಮ ಆರಂಭ ಪಡೆದುಕೊಂಡಿದೆ ಕೇವಲ 4 ಓವರ್ಗಳಲ್ಲೇ ತಂಡದ ಅರ್ಧಶತಕ ಪೂರ್ಣಗೊಂಡಿದೆ.
4ನೇ ಓವರ್ ಬೌಲ್ ಮಾಡಿದ ಪಾಂಡ್ಯ 14 ರನ್ ಬಿಟ್ಟುಕೊಟ್ಟರು. ಇದರಲ್ಲಿ ಡಿ ಕಾಕ್ 2 ಬೌಂಡರಿ ಹೊಡೆದರೆ, ಮೇಯರ್ಸ್ ಕೂಡ 1 ಬೌಂಡರಿ ಹೊಡೆದರು
ಶಮಿ ಎಸೆದ 3ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಡಿ ಕಾಕ್ ಬೌಂಡರಿ ಹೊಡೆದರೆ, ಮೇಯರ್ಸ್ ಸಿಕ್ಸರ್ ಸಿಡಿಸಿದರು.
ಲಕ್ನೋ ಚೇಸ್ ಆರಂಭವಾಗಿದ್ದು. ಪಾಂಡ್ಯ ಬೌಲ್ ಮಾಡಿದ 2ನೇ ಓವರ್ನಲ್ಲಿ ಮೇಯರ್ಸ್ ಹ್ಯಾಟ್ರಿಕ್ ಬೌಂಡರಿ ಹೊಡೆದರು.
20 ಓವರ್‌ಗಳ ಅಂತ್ಯಕ್ಕೆ ಗುಜರಾತ್ ಕೇವಲ 2 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದೆ.ತಂಡದ ಪರ ಸಹಾ ಹಾಗೂ ಗಿಲ್ ಅರ್ಧಶತಕ ಬಾರಿಸಿದರು. ಇದರಲ್ಲಿ ಗಿಲ್ ಅಜೇಯ 94 ರನ್ ಸಿಡಿಸಿದರು.
20ನೇ ಓವರ್‌ನ ಮೊದಲ ಎಸೆತದಲ್ಲಿ ಗಿಲ್ ಸಿಕ್ಸರ್ ಬಾರಿಸುವ ಮೂಲಕ ಶತಕದ ಸನಿಹಕ್ಕೆ ಬಂದಿದ್ದಾರೆ.
19ನೇ ಓವರ್‌ನ 4ನೇ ಎಸೆತವನ್ನು ಮಿಲ್ಲರ್ ಮಿಡ್ ಆಫ್ ಮೇಲೆ ಸಿಕ್ಸರ್ಗಟ್ಟಿದರು.
ಜಿಟಿ 213/2
ಯಶ್ ಬೌಲ್ ಮಾಡಿದ 18ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟಿದ ಮಿಲ್ಲರ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಆವೇಶ್ ಬೌಲ್ ಮಾಡಿದ 17ನೇ ಓವರ್‌ನ 4ನೇ ಎಸೆತದಲ್ಲಿ ಗಿಲ್ ಮಿಡ್ ಆಫ್ ಕಡೆ ಬೌಂಡರಿ ಬಾರಿಸಿದರು.
16ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಪಾಂಡ್ಯ ಕ್ಯಾಚಿತ್ತು ಔಟಾದರು. ಪಾಂಡ್ಯ 15 ಎಸೆತದಲ್ಲಿ 25 ರನ್ ಬಾರಿಸಿದರು.
ಸ್ಟೋಯ್ನಿಸ್ ಬೌಲ್ ಮಾಡಿದ 15ನೇ ಓವರ್ನಲ್ಲಿ ಗಿಲ್ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರೆ, ಪಾಂಡ್ಯ ಓವರ್‌ನ 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಹೊಡೆದರು.
ಸಹಾ ವಿಕೆಟ್ ಬಳಿಕ ಗುಜರಾತ್ ಇನ್ನಿಂಗ್ಸ್ ನಿಧಾನವಾಗಿದೆ. ಈಗಾಗಲೇ 14ನೇ ಓವರ್ ಮುಗಿದಿದ್ದು 2 ಓವರ್‌ಗಳಲ್ಲಿ ಯಾವುದೇ ಬೌಂಡರಿ ಬಂದಿಲ್ಲ. ಆದರೆ 14ನೇ ಓವರ್‌ನ 5ನೇ ಎಸೆತದಲ್ಲಿ ಪಾಂಡ್ಯ ಸಿಕ್ಸರ್ ಹೊಡೆದರು.
ಗುಜರಾತ್ ಮೊದಲ ವಿಕೆಟ್ ಪತನಗೊಂಡಿದೆ. 81 ರನ್ ಬಾರಿಸಿದ್ದ ಸಹಾ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
12ನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಗಿಲ್ ತಮ್ಮ ಅರ್ಧಶತಕ ಪೂರೈಸಿದ್ದಾರೆ.
ಗುಜರಾತ್ ಇನ್ನಿಂಗ್ಸ್ನ 10 ಓವರ್ ಮುಗಿದಿದ್ದು ಇದರಲ್ಲಿ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 121 ರನ್ ಕಲೆಹಾಕಿದೆ.
9ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಗಿಲ್, ಗುಜರಾತ್ ಮೊತ್ತವನ್ನು 100ರ ಗಡಿ ದಾಟಿಸಿದರು.
ಮೇಯರ್ಸ್ ಬೌಲ್ ಮಾಡಿದ 8ನೇ ಓವರ್‌ನ 2ನೇ ಎಸೆತವನ್ನು ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದ ಸಹಾ, 4ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಹೊಡೆದರು. ಹಾಗೆಯೇ ಕೊನೆಯ ಎಸೆತದಲ್ಲೂ ಬೌಂಡರಿ ಬಂತು.
ಪವರ್ ಪ್ಲೇಯ 6 ಓವರ್‌ಗಳಲ್ಲಿ ಗುಜರಾತ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 78 ರನ್ ಬಾರಿಸಿದೆ. ಇದರಲ್ಲಿ ಸಿಂಹಪಾಲು ಸಹಾ ಅವರದ್ದಾಗಿದೆ.
6ನೇ ಓವರ್‌ನ ಮೊದಲ ಎಸೆತವನ್ನು ಲಾಂಗ್ ಆನ್ನಲ್ಲಿ ಸಿಕ್ಸರ್ಗಟ್ಟಿದ ಸಹಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಮೊಹ್ಸಿನ್ ಬೌಲ್ ಮಾಡಿದ 4ನೇ ಓವರ್‌ನ ಮೊದಲ ಎಸೆತದಲ್ಲೇ ಸಹಾ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಹೊಡೆದರು. ಈ ಓವರ್ನಲ್ಲಿ ಮತ್ತೊಂದು ಸಿಕ್ಸರ್ ಹಾಗೂ ಬೌಂಡರಿ ಸೇರಿದಂತೆ 22 ರನ್ ಬಂದವು.
2ನೇ ಓವರ್ ಬೌಲ್ ಮಾಡಿದ ಆವೇಶ್ 1 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ ಒಟ್ಟು 11 ರನ್ ಬಿಟ್ಟುಕೊಟ್ಟರು. ಈ ಎರಡೂ ಬೌಂಡರಿಗಳನ್ನು ಸಹಾ ಬಾರಿಸಿದರು.
ಗುಜರಾತ್ ಬ್ಯಾಟಿಂಗ್ ಆರಂಭಿಸಿದ್ದು, ಸಹಾ ಹಾಗೂ ಗಿಲ್ ಕ್ರೀಸ್ನಲ್ಲಿದ್ದಾರೆ. ಮೊಹ್ಸಿನ್ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಸಹಾ 2 ಬೌಂಡರಿ ಬಾರಿಸಿದರು.
ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅವೇಶ್ ಖಾನ್
ಟಾಸ್ ಗೆದ್ದ ಲಕ್ನೋ ನಾಯಕ ಕೃನಾಲ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:01 pm, Sun, 7 May 23