GT vs MI Highlights IPL 2023: ಗಿಲ್ ಶತಕ; ಸತತ 2ನೇ ಬಾರಿಗೆ ಫೈನಲ್ಗೇರಿದ ಗುಜರಾತ್
Gujarat Titans vs Mumbai Indians IPL 2023 Highlights Qualifier-2 in Kannada: ಇಂದು ಐಪಿಎಲ್ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.
ಶುಭ್ಮನ್ ಗಿಲ್ ಅವರ ಅದ್ಭುತ ಶತಕ (129) ಮತ್ತು ಮೋಹಿತ್ ಶರ್ಮಾ ಅವರ ಅತ್ಯುತ್ತಮ ಬೌಲಿಂಗ್ (ಐದು ವಿಕೆಟ್) ಆಧಾರದ ಮೇಲೆ ಗುಜರಾತ್ ಟೈಟಾನ್ಸ್ ಕ್ವಾಲಿಫೈಯರ್-2 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 62 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 3 ವಿಕೆಟ್ ಕಳೆದುಕೊಂಡು 233 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟಿದ ಮುಂಬೈ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ಮುಂಬೈ ತಂಡದ ಕನಸು ಕೂಡ ಭಗ್ನಗೊಂಡಿದೆ. ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
LIVE NEWS & UPDATES
-
ಗುಜರಾತ್ ಫೈನಲ್‌ಗೆ
ಮುಂಬೈ ತಂಡವನ್ನು ಸೋಲಿಸಿ ಗುಜರಾತ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೀಗ ಈ ತಂಡ ಫೈನಲ್‌ನಲ್ಲಿ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.
-
ಗುಜರಾತ್‌ಗೆ ಗೆಲುವು
19ನೇ ಓವರ್‌ನ ಎರಡನೇ ಎಸೆತದಲ್ಲಿ ಮೋಹಿತ್ ಶರ್ಮಾ ಕುಮಾರ್ ಕಾರ್ತಿಕೇಯರನ್ನು ಔಟ್ ಮಾಡುವ ಮೂಲಕ ಮುಂಬೈ ತಂಡವನ್ನು ಆಲೌಟ್ ಮಾಡಿದರು. ಇದರೊಂದಿಗೆ ಗುಜರಾತ್ ಪಂದ್ಯವನ್ನು 62 ರನ್‌ಗಳಿಂದ ಗೆದ್ದುಕೊಂಡಿತು.
-
ಸೂರ್ಯಕುಮಾರ್ ಅರ್ಧಶತಕ
ಮಹತ್ವದ ಪಂದ್ಯದಲ್ಲಿ ಸೂರ್ಯಕುಮಾರ್ ಅದ್ಭುತ ಇನ್ನಿಂಗ್ಸ್ ಆಡಿದ್ದು, ಅರ್ಧಶತಕ ಬಾರಿಸಿದ್ದಾರೆ. 14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.
ಕ್ಯಾಮರೂನ್ ಗ್ರೀನ್ ಔಟ್
ಕ್ಯಾಮರೂನ್ ಗ್ರೀನ್ ಔಟ್ ಆಗಿದ್ದಾರೆ. ಜೋಶ್ ಲಿಟಲ್ 12ನೇ ಓವರ್ ನ ಎರಡನೇ ಎಸೆತದಲ್ಲಿ ಗ್ರೀನ್ ಅವರನ್ನು ಬೌಲ್ಡ್ ಮಾಡಿದರು.
ಮುಂಬೈ 100 ರನ್ ಪೂರ್ಣ
10ನೇ ಓವರ್‌ನ ಎರಡನೇ ಎಸೆತದಲ್ಲಿ ಸೂರ್ಯಕುಮಾರ್ ಬೌಂಡರಿ ಬಾರಿಸಿ ಮುಂಬೈ ಇಂಡಿಯನ್ಸ್ ಸ್ಕೋರ್ 100ರ ಗಡಿ ದಾಟಿಸಿದರು.
ತಿಲಕ್ ವರ್ಮಾ ಔಟ್
ಪವರ್ ಪ್ಲೇನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ವಿಕೆಟ್ ಪಡೆದರು.
ರಶೀದ್ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ತಿಲಕ್ ಕ್ಲೀನ್ ಬೌಲ್ಡ್ ಆದರು.
ತಿಲಕ್ 14 ಎಸೆತಗಳಲ್ಲಿ 43 ರನ್ ಬಾರಿಸಿ ನಿರ್ಗಮಿಸಿದರು.
ರೋಹಿತ್ ಶರ್ಮಾ ಔಟ್
ರೋಹಿತ್ ಶರ್ಮಾ ಔಟಾಗಿದ್ದಾರೆ. ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಶಮಿ ರೋಹಿತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ರೋಹಿತ್ ಶರ್ಮಾ – 8 ರನ್, 7 ಎಸೆತಗಳು 1×4
ಮುಂಬೈಗೆ 234 ರನ್ ಟಾರ್ಗೆಟ್
ಗುಜರಾತ್ ನ ಇನ್ನಿಂಗ್ಸ್ ಮುಗಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಮೂರು ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದೆ. ತಂಡದ ಪರ ಗಿಲ್ 129 ರನ್ಗಳ ಇನಿಂಗ್ಸ್ ಆಡಿದರು.
ಗಿಲ್ ಔಟ್
ಶುಭಮನ್ ಗಿಲ್ ಔಟಾಗಿದ್ದಾರೆ. ಆಕಾಶ್ ಮಧ್ವಲ್ ಎಸೆದ 17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗಿಲ್ ಟಿಮ್ ಡೇವಿಡ್ ಕ್ಯಾಚ್ ನೀಡಿದರು. ಆರಂಭದಲ್ಲಿ ಗಿಲ್ ಅವರ ಕ್ಯಾಚ್ ಅನ್ನು ಡೇವಿಡ್ ಅವರೇ ಕೈಬಿಟ್ಟಿದ್ದರು.
ಗಿಲ್ ಶತಕ
15ನೇ ಓವರ್‌ನ ಆರಂಭದಲ್ಲಿ ಶುಭಮನ್ ಗಿಲ್ ಒಂದು ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ಗಿಲ್ ಇದೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದರು. ಗಿಲ್ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್ ಕೂಡ ಸೇರಿವೆ.
ಗಿಲ್ ಬಿರುಸಿನ ಬ್ಯಾಟಿಂಗ್
ಶುಭಮನ್ ಗಿಲ್ ಕೊನೆಯ 2 ಓವರ್‌ಗಳಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆಕಾಶ್ ಓವರ್‌ನಲ್ಲಿ ಮೂರು ಅದ್ಭುತ ಸಿಕ್ಸರ್‌ಗಳನ್ನು ಬಾರಿಸಿದ ಗಿಲ್, ಪಿಯೂಷ್ ಚಾವ್ಲಾ ಓವರ್‌ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.
ಗುಜರಾತ್ ಶತಕ
ಆಕಾಶ್ ಎಸೆದ 12ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಗಿಲ್ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಗುಜರಾತ್ ಸ್ಕೋರ್ 100ರ ಗಡಿ ದಾಟಿತು.
ಗಿಲ್ ಅರ್ಧ ಶತಕ
10ನೇ ಓವರ್‌ನಲ್ಲಿ ಶುಭಮನ್ ಗಿಲ್ ಮೂರನೇ ಎಸೆತವನ್ನು ಸ್ಕ್ವೇರ್ ಲೆಗ್ ಕಡೆಗೆ ಫ್ಲಿಕ್ ಮಾಡಿದರು. ಇದರೊಂದಿಗೆ ಗಿಲ್ ಅರ್ಧಶತಕ ಪೂರೈಸಿದರು.
ಗಿಲ್ ಸಿಕ್ಸ್
9ನೇ ಓವರ್‌ನಲ್ಲಿ 16 ರನ್ ಬಂದವು
ಓವರ್‌ನ ಮೊದಲ ಎಸೆತವನ್ನು ಸುದರ್ಶನ್ ಬೌಂಡರಿಗಟ್ಟಿದರೆ, 3ನೇ ಎಸೆತವನ್ನು ಗಿಲ್ ಸಿಕ್ಸರ್ಗಟ್ಟಿದರು.
9 ಓವರ್ ಅಂತ್ಯಕ್ಕೆ 80/1
ಸಾಹ ಔಟ್
7ನೇ ಓವರ್‌ನ 3ನೇ ಎಸೆತದಲ್ಲಿ ಗುಜರಾತ್ ಮೊದಲ ವಿಕೆಟ್ ಕಳೆದುಕೊಂಡಿದೆ
ಸಹಾ ಸ್ಟಂಪ್ ಔಟ್ ಆದರು
ಪವರ್ ಪ್ಲೇ ಅಂತ್ಯ
ಜೋರ್ಡಾನ್ ಬೌಲ್ ಮಾಡಿದ 6ನೇ ಓವರ್‌ನಲ್ಲಿ 12 ರನ್ ಬಂದವು
ಈ ಓವರ್‌ನಲ್ಲಿ ಗಿಲ್ 1 ಸಿಕ್ಸರ್ ಹಾಗೂ ಬೌಂಡರಿ ಬಂತು
ಇದೇ ಓವರ್‌ನಲ್ಲಿ ಗುಜರಾತ್ ಅರ್ಧಶತಕ ಪೂರೈಸಿತು
ವೃದ್ಧಿಮಾನ್ ಸಹಾ18* (16)
ಶುಭಮನ್ ಗಿಲ್ 31* (20)
ಜಿಟಿ 50/0
ಸಾಹ ಬೌಂಡರಿ
ಆಕಾಶ್ ಬೌಲ್ ಮಾಡಿದ 4ನೇ ಓವರ್‌ನ ಕೊನೆಯ ಎಸೆತವನ್ನು ಸಾಹ ಡೀಪ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು
4 ಓವರ್ ಅಂತ್ಯಕ್ಕೆ 27/0
ಗಿಲ್ ಫೋರ್
2ನೇ ಓವರ್‌ನಲ್ಲಿ 10 ರನ್ ಬಂದವು
ಓವರ್‌ನ 5ನೇ ಎಸೆತವನ್ನು ಗಿಲ್ ಡೀಪ್ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ನಲ್ಲಿ ಬೌಂಡರಿಗಟ್ಟಿದರು.
GT 13/0
ಗುಜರಾತ್ ಬ್ಯಾಟಿಂಗ್ ಆರಂಭ
ಗುಜರಾತ್ ಪರ ಗಿಲ್ ಹಾಗೂ ಸಹಾ ಬ್ಯಾಟಿಂಗ್ ಆರಂಭಿಸಿದ್ದಾರೆ
ಮೊದಲ ಓವರ್‌ನಲ್ಲಿ ಕೇವಲ 3 ರನ್ ಬಂತು
ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್
ಉಭಯ ತಂಡಗಳಲ್ಲೂ ಬದಲಾವಣೆ
ಮುಂಬೈ ತನ್ನ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದೆ. ಹೃತಿಕ್ ಶೋಕಿನ್ ಬದಲಿಗೆ ಕುಮಾರ್ ಕಾರ್ತಿಕೇಯ ತಂಡಕ್ಕೆ ಬಂದಿದ್ದಾರೆ. ಗುಜರಾತ್ ಎರಡು ಬದಲಾವಣೆ ಮಾಡಿದೆ. ಜೋಶ್ ಲಿಟಲ್ ಮತ್ತು ಸಾಯಿ ಸುದರ್ಶನ್ ತಂಡಕ್ಕೆ ಬಂದಿದ್ದಾರೆ. ದಾಸುನ್ ಶನಕ ಮತ್ತು ದರ್ಶನ್ ನಲ್ಕಂಡೆ ತಂಡದಿಂದ ಹೊರ ಹೋಗಿದ್ದಾರೆ.
ಟಾಸ್ ಗೆದ್ದ ಮುಂಬೈ
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಮಳೆ ನಿಂತಿದೆ
ಅಹಮದಾಬಾದ್‌ನಲ್ಲಿ ಮಳೆ ನಿಂತಿದ್ದು, 7:45ಕ್ಕೆ ಟಾಸ್ ನಡೆಯಲಿದೆ. ಆ ಬಳಿಕ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಅಹಮದಾಬಾದ್‌ನಲ್ಲಿ ಮಳೆ
ಅಹಮದಾಬಾದ್‌ನಲ್ಲಿ ಮಳೆಯಾಗುತ್ತಿದ್ದು ಪಂದ್ಯ ಆರಂಭ ವಿಳಂಬವಾಗುವ ಸಾಧ್ಯತೆ ಇದೆ. ಈಗ ಪಂದ್ಯ ಯಾವಾಗ ಆರಂಭವಾಗುತ್ತದೆ ಎಂದು ನೋಡಬೇಕಿದೆ.
Published On - May 26,2023 6:53 PM