GT vs SRH Highlights, IPL 2022: ಕೊನೆ ಓವರ್​ನಲ್ಲಿ 4 ಸಿಕ್ಸರ್! ರೋಚಕ ಪಂದ್ಯದಲ್ಲಿ ಗೆದ್ದ ಗುಜರಾತ್

| Updated By: ಪೃಥ್ವಿಶಂಕರ

Updated on: Apr 27, 2022 | 11:27 PM

GT vs SRH, IPL 2022: ರಶೀದ್ ಖಾನ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ಟೈಟಾನ್ಸ್​ಗೆ ಗೆಲುವು ತಂದುಕೊಟ್ಟರು. ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ 22 ರನ್‌ಗಳ ಅಗತ್ಯವಿತ್ತು. ಈ ಓವರ್‌ನಲ್ಲಿ ರಶೀದ್ ಮೂರು ಸಿಕ್ಸರ್ ಬಾರಿಸುವ ಮೂಲಕ ಗುಜರಾತ್​ಗೆ ಗೆಲುವಿನ ಸಿಹಿ ಹಂಚಿದರು.

GT vs SRH Highlights, IPL 2022: ಕೊನೆ ಓವರ್​ನಲ್ಲಿ 4 ಸಿಕ್ಸರ್! ರೋಚಕ ಪಂದ್ಯದಲ್ಲಿ ಗೆದ್ದ ಗುಜರಾತ್

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ತಂಡ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿದೆ. ಆ ಸೋಲನ್ನೂ ಹೈದರಾಬಾದ್‌ನಿಂದಲೇ ಗುಜರಾತ್‌ ಎದುರಿಸಬೇಕಾಯಿತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ತನ್ನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.

LIVE NEWS & UPDATES

The liveblog has ended.
  • 27 Apr 2022 11:27 PM (IST)

    ರಶೀದ್ ಸಿಕ್ಸರ್, ಗುಜರಾತ್​ಗೆ ರೋಚಕ ಗೆಲುವು

    ರಶೀದ್ ಖಾನ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ಟೈಟಾನ್ಸ್​ಗೆ ಗೆಲುವು ತಂದುಕೊಟ್ಟರು. ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ 22 ರನ್‌ಗಳ ಅಗತ್ಯವಿತ್ತು. ಈ ಓವರ್‌ನಲ್ಲಿ ರಶೀದ್ ಮೂರು ಸಿಕ್ಸರ್ ಬಾರಿಸುವ ಮೂಲಕ ಗುಜರಾತ್​ಗೆ ಗೆಲುವಿನ ಸಿಹಿ ಹಂಚಿದರು.

  • 27 Apr 2022 11:26 PM (IST)

    ರಶೀದ್ ಮತ್ತೊಂದು ಸಿಕ್ಸರ್

    ರಶೀದ್ ಖಾನ್ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಗುಜರಾತ್‌ಗೆ ಒಂದು ಎಸೆತದಲ್ಲಿ ಮೂರು ರನ್‌ಗಳ ಅಗತ್ಯವಿದೆ.


  • 27 Apr 2022 11:22 PM (IST)

    ರಶೀದ್ ಸಿಕ್ಸರ್

    ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ರಶೀದ್ ಖಾನ್ ಅವರು ಮಾರ್ಕೊ ಯಾನ್ಸನ್ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಇಲ್ಲಿಂದ ಈಗ ಗುಜರಾತ್‌ಗೆ ಮೂರು ಎಸೆತಗಳಲ್ಲಿ ಒಂಬತ್ತು ರನ್‌ಗಳ ಅಗತ್ಯವಿದೆ.

  • 27 Apr 2022 11:21 PM (IST)

    ರಾಹುಲ್ ತೆವಾಟಿಯಾ ಮತ್ತೊಂದು ಸಿಕ್ಸರ್

    ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ 22 ರನ್ ಅಗತ್ಯವಿತ್ತು. ಮಾರ್ಕೊ ಯಾನ್ಸನ್ ಅವರ ಮೊದಲ ಎಸೆತದಲ್ಲಿ ರಾಹುಲ್ ಟಿಯೋಟಿಯಾ ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದರು.

  • 27 Apr 2022 11:20 PM (IST)

    ತೆವಾಟಿಯಾ ಸಿಕ್ಸರ್

    19ನೇ ಓವರ್‌ನ ಐದನೇ ಎಸೆತದಲ್ಲಿ ರಾಹುಲ್ ತೆವಾಟಿಯಾ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ನಟರಾಜನ್ ಚೆಂಡನ್ನು ಯಾರ್ಕರ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಫುಲ್ ಟಾಸ್ ಆಯಿತು ಮತ್ತು ಈ ಫುಲ್ ಟಾಸ್‌ನಲ್ಲಿ ತೆವಾಟಿಯಾ ಸುಲಭವಾಗಿ ಆರು ರನ್ ಗಳಿಸಿದರು.

  • 27 Apr 2022 11:15 PM (IST)

    ರಶೀದ್ ಸಿಕ್ಸ್

    18ನೇ ಓವರ್​ನ ನಾಲ್ಕನೇ ಎಸೆತದಲ್ಲಿ ರಶೀದ್ ಖಾನ್ ಅವರು ಭುವನೇಶ್ವರ್ ಕುಮಾರ್ ಎಸೆತವನ್ನು ಸಿಕ್ಸರ್​ಗೆ ಅಟ್ಟಿದರು. ರಶೀದ್ ತಮ್ಮದೇ ಶೈಲಿಯಲ್ಲಿ ಹೆಲಿಕಾಪ್ಟರ್ ಶಾಟ್ ಆಡಿ ಲಾಂಗ್ ಆನ್‌ನಲ್ಲಿ ಆರು ರನ್​ಗೆ ಕಳುಹಿಸಿದರು.

  • 27 Apr 2022 11:10 PM (IST)

    ಟಿ.ನಟರಾಜನ್‌ ಉತ್ತಮ ಓವರ್

    17ನೇ ಓವರ್ ಎಸೆಯಲು ಬಂದ ಟಿ.ನಟರಾಜನ್ ಈ ಓವರ್ ನಲ್ಲಿ 9 ರನ್ ನೀಡಿದರು. ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ನಂತರ ನಟರಾಜನ್ ಉತ್ತಮ ಪುನರಾಗಮನವನ್ನು ಮಾಡಿ ನಂತರ ಯಾವುದೇ ಬೌಂಡರಿ ನೀಡಲಿಲ್ಲ.

  • 27 Apr 2022 11:08 PM (IST)

    ಉಮ್ರಾನ್​ಗೆ 5 ವಿಕೆಟ್

    ಡೇವಿಡ್ ಮಿಲ್ಲರ್ ನಂತರದ 16ನೇ ಓವರ್​ನ ಕೊನೆಯ ಎಸೆತದಲ್ಲಿ ಉಮ್ರಾನ್ ಮಲಿಕ್ ಕೂಡ ಅಭಿನವ್ ಮನೋಹರ್ ವಿಕೆಟ್ ಉರುಳಿಸಿದರು. ಇದರೊಂದಿಗೆ ಅವರು ಐದು ವಿಕೆಟ್‌ಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಅಂತ್ಯಗೊಳಿಸಿದರು. ಅಭಿನವ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

  • 27 Apr 2022 11:07 PM (IST)

    ಡೇವಿಡ್ ಮಿಲ್ಲರ್ ಔಟ್

    ಡೇವಿಡ್ ಮಿಲ್ಲರ್ ಔಟ್ ಆಗಿದ್ದಾರೆ. ಉಮ್ರಾನ್ ಮಲಿಕ್ ಅವರ ವಿಕೆಟ್ ಪಡೆದರು. 16ನೇ ಓವರ್‌ನ ಐದನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಔಟಾದರು. ಉಮ್ರಾನ್ ಅವರ 148kph ಚೆಂಡಿನ ಮುಂದೆ ಮಿಲ್ಲರ್ ಬೌಲ್ಡ್ ಆದರು.

    ಡೇವಿಡ್ ಮಿಲ್ಲರ್ – 17 ರನ್, 19 ಎಸೆತಗಳು, 1x

  • 27 Apr 2022 10:58 PM (IST)

    ಭುವನೇಶ್ವರ್ ಉತ್ತಮ ಓವರ್

    15ನೇ ಓವರ್‌ನಲ್ಲಿ ಭುವನೇಶ್ವರ್ ಉತ್ತಮ ಬೌಲಿಂಗ್ ಮಾಡಿದರು. ರಾಹುಲ್ ತೆವಾಟಿಯಾ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆ ಓವರ್‌ನಲ್ಲಿ ಒಟ್ಟು ಎಂಟು ರನ್‌ಗಳು ಬಂದವು. ಗುಜರಾತ್ ಗೆಲುವಿಗೆ ಇನ್ನು 30 ಎಸೆತಗಳಲ್ಲಿ 61 ರನ್ ಅಗತ್ಯವಿದೆ.

  • 27 Apr 2022 10:49 PM (IST)

    ಸಹಾ ಔಟ್

    ವೃದ್ಧಿಮಾನ್ ಸಹಾ ಔಟಾಗಿದ್ದಾರೆ. ಸಹಾ ಅವರನ್ನು ಉಮ್ರಾನ್ ಮಲಿಕ್ ಔಟ್ ಮಾಡಿದರು. 152 ಕಿಮೀ ವೇಗದ ಚೆಂಡನ್ನು ಸಹಾ ಕವರ್‌ನಲ್ಲಿ ಹೊಡೆಯಲು ಪ್ರಯತ್ನಿಸಿದರು ಆದರೆ ವಿಫಲರಾಗಿ ಬೌಲ್ಡ್ ಆದರು.

    ಸಹಾ – 68 ರನ್, 38 ಎಸೆತಗಳು 11×4 1×6

  • 27 Apr 2022 10:43 PM (IST)

    ಸಹಾ ಬಿರುಗಾಳಿ ಆಟ

    13ನೇ ಓವರ್​ನ ಎರಡನೇ ಎಸೆತದಲ್ಲಿ ಸಹಾ ಬೌಂಡರಿ ಬಾರಿಸಿದರು. ಸುಂದರ್ ಅವರ ಚೆಂಡನ್ನು ಸಹಾ ಮಿಡ್‌ವಿಕೆಟ್‌ನಿಂದ ನಾಲ್ಕು ರನ್‌ಗಳಿಗೆ ಕಳುಹಿಸಿದರು.

  • 27 Apr 2022 10:33 PM (IST)

    ಸಹಾ ಅರ್ಧಶತಕ

    ವೃದ್ಧಿಮಾನ್ ಸಹಾ 11ನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ 50 ರನ್ ಪೂರೈಸಿದರು. ಇದು ಈ ಋತುವಿನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ಇದಕ್ಕಾಗಿ ಅವರು 29 ಎಸೆತಗಳನ್ನು ಎದುರಿಸಿದರು.

  • 27 Apr 2022 10:29 PM (IST)

    ಬೌಂಡರಿ ಬಾರಿಸಿದ ಪಾಂಡ್ಯ ಔಟ್

    10ನೇ ಓವರ್ ಎಸೆದ ಮಲಿಕ್​​ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಬಾರಿಸಿ ಸ್ವಾಗತಿಸಿದರಾದರೂ ಮುಂದಿನ ಎಸೆತದಲ್ಲಿ ಔಟಾದರು. ಮಲಿಕ್ ಮತ್ತೊಮ್ಮೆ ಬೌನ್ಸರ್ ಎಸೆದರು ಮತ್ತು ಪಾಂಡ್ಯ ಪುಲ್ ಮಾಡಿದರು. ಚೆಂಡು ಅವರ ಬ್ಯಾಟ್‌ಗೆ ಸರಿಯಾಗಿ ತಾಕದೆ ಅಂಚನ್ನು ತಾಗಿ ಥರ್ಡ್ ಮ್ಯಾನ್‌ಗೆ ಹೋಯಿತು, ಅಲ್ಲಿ ಮಾರ್ಕೊ ಯಾನ್ಸನ್ ಕ್ಯಾಚ್ ಪಡೆದರು.

  • 27 Apr 2022 10:28 PM (IST)

    ಸಹಾ ಉತ್ತಮ ಹೊಡೆತ

    ಒಂಬತ್ತನೇ ಓವರ್‌ನ ಐದನೇ ಎಸೆತದಲ್ಲಿ ಸಹಾ ಬೌಂಡರಿ ಬಾರಿಸಿದರು. ಸುಂದರ್ ಅವರ ಆಫ್-ಸ್ಪಿನ್‌ನಲ್ಲಿ, ಸಹಾ ಚೆಂಡನ್ನು ಎಕ್ಸ್​​ಟ್ರಾ ಕವರ್‌ಗೆ ಪಂಚ್ ಮಾಡುವ ಮೂಲಕ ನಾಲ್ಕು ರನ್ ಗಳಿಸಿದರು.

  • 27 Apr 2022 10:22 PM (IST)

    ಗಿಲ್ ಔಟ್

    ಶುಭಮನ್ ಗಿಲ್ ಔಟಾಗಿದ್ದಾರೆ. ಅವರನ್ನು ಉಮ್ರಾನ್ ಮಲಿಕ್ ವಜಾ ಮಾಡಿದರು. ಎಂಟನೇ ಓವರ್‌ನ ನಾಲ್ಕನೇ ಎಸೆತವನ್ನು ಗಿಲ್ ವಿಭಿನ್ನವಾಗಿ ಆಡಲು ಪ್ರಯತ್ನಿಸಿದರು ಆದರೆ ಬೌಲ್ಡ್ ಆದರು.

  • 27 Apr 2022 10:09 PM (IST)

    ಗಿಲ್ ಸಿಕ್ಸರ್

    ಶುಬ್ಮನ್ ಗಿಲ್ ಕೂಡ ಈಗ ಸಹಾ ಅವರ ಹಾದಿಯನ್ನು ಅನುಸರಿಸುತ್ತಿದ್ದಾರೆ. ಏಳನೇ ಓವರ್ ಎಸೆದ ವಾಷಿಂಗ್ಟನ್ ಸುಂದರ್ ಅವರ ಎರಡನೇ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸಿದರು.

  • 27 Apr 2022 10:08 PM (IST)

    ಗುಜರಾತ್‌ ಪರ ಪವರ್‌ಪ್ಲೇ

    ಪವರ್‌ಪ್ಲೇ ಮುಗಿದಿದೆ. ಈ ಪವರ್‌ಪ್ಲೇ ಗುಜರಾತ್ ಟೈಟಾನ್ಸ್ ಹೆಸರಿನಲ್ಲಿತ್ತು. ವಿಶೇಷವಾಗಿ ವೃದ್ಧಿಮಾನ್ ಸಹಾ ಅವರ ಹೆಸರಿನಲ್ಲಿ. ಈ ಆರು ಓವರ್‌ಗಳಲ್ಲಿ ಟೈಟಾನ್ಸ್ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದೆ. ಸಹಾ 39ರನ್ ಗಳಿಸಿದ್ದಾರೆ.

  • 27 Apr 2022 10:04 PM (IST)

    ಸಹಾ ಮತ್ತೊಂದು ಉತ್ತಮ ಹೊಡೆತ

    ವೃದ್ಧಿಮಾನ್ ಸಹಾ ಸದ್ಯ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಮಾರ್ಕೊ ಯಾನ್ಸನ್ ಚೆಂಡನ್ನು ಆಫ್ ಸ್ಟಂಪ್‌ನ ಹೊರಗೆ ಮಿಡ್ ಆನ್‌ನಲ್ಲಿ ನಾಲ್ಕು ರನ್‌ಗಳಿಗೆ ಕಳುಹಿಸಿದರು.

  • 27 Apr 2022 10:03 PM (IST)

    ಸಹಾ ಫೋರ್‌

    ಸಹಾ ನಾಲ್ಕನೇ ಓವರ್ ಅನ್ನು ಬೌಂಡರಿಯೊಂದಿಗೆ ಕೊನೆಗೊಳಿಸಿದರು. ಟಿ.ನಟರಾಜನ್ ಕೊನೆಯ ಚೆಂಡನ್ನು ಆಫ್ ಸ್ಟಂಪ್ ಹೊರಗೆ ನೀಡಿದರು, ಸಹಾ ಅದನ್ನು ಕವರ್‌ ಮೇಲೆ ಎತ್ತಿ ಬೌಂಡರಿ ದಾಟಿಸಿದರು.

  • 27 Apr 2022 10:03 PM (IST)

    ಗಿಲ್ ಮೊದಲ ಫೋರ್

    ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಶುಭಮನ್ ಗಿಲ್ ಬೌಂಡರಿ ಬಾರಿಸಿದರು. T. ನಟರಾಜನ್ ಅವರು ಚೆಂಡನ್ನು ಗಿಲ್ ಮಿಡ್-ಆನ್‌ಗೆ ನಾಲ್ಕು ರನ್‌ಗಳಿಗೆ ಡ್ರೈವ್‌ನಲ್ಲಿ ಕಳುಹಿಸಿದರು.

  • 27 Apr 2022 09:48 PM (IST)

    ಸಹಾ ಫೋರ್

    ಮೂರನೇ ಓವರ್ ಎಸೆದ ಭುವನೇಶ್ವರ್ ಕುಮಾರ್ ಅವರ ಮೂರನೇ ಎಸೆತದಲ್ಲಿ ವೃದ್ಧಿಮಾನ್ ಸಹಾ ಬೌಂಡರಿ ಬಾರಿಸಿದರು. ಸಹಾ ಮುಂದೆ ಹೋಗಿ ಭುವನೇಶ್ವರ್ ಅವರ ಶಾರ್ಟ್ ಬಾಲ್ ಅನ್ನು ಹೊಡೆದು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ನಾಲ್ಕು ರನ್ ಗಳಿಸಿದರು.

  • 27 Apr 2022 09:47 PM (IST)

    ಸಹಾ ಸಿಕ್ಸ್

    ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ವೃದ್ಧಿಮಾನ್ ಸಹಾ ಬೌಂಡರಿ ಬಾರಿಸಿದರು. ಮಾರ್ಕೊ ಯಾನ್ಸನ್ ಎಸೆತವನ್ನು ಸಹಾ ಫ್ಲಿಕ್ ಮಾಡಿ ನಾಲ್ಕು ರನ್‌ಗಳಿಗೆ ಅದನ್ನು ಡೀಪ್ ಸ್ಕ್ವೇರ್ ಲೆಗ್‌ಗೆ ಕಳುಹಿಸಿದರು. ಇದರ ನಂತರ, ಅವರು ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.

  • 27 Apr 2022 09:41 PM (IST)

    ಭುವನೇಶ್ವರ್ ಅದ್ಭುತ ಓವರ್

    ಮೊದಲ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಓವರ್‌ನಲ್ಲಿ ಕೇವಲ ಎರಡು ರನ್‌ಗಳನ್ನು ಬಿಟ್ಟುಕೊಟ್ಟರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ ಒಂದು ರನ್ ಗಳಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಮುಕ್ತವಾಗಿ ಆಡುವ ಅವಕಾಶವನ್ನು ಭುವನೇಶ್ವರ್ ನೀಡಲಿಲ್ಲ.

  • 27 Apr 2022 09:40 PM (IST)

    ಗುಜರಾತ್ ಇನ್ನಿಂಗ್ಸ್ ಆರಂಭ

    ಗುಜರಾತ್ ಇನ್ನಿಂಗ್ಸ್ ಆರಂಭವಾಗಿದೆ. ಹೈದರಾಬಾದ್‌ನ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಜೋಡಿ ಶುಬ್‌ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಬ್ಯಾಟಿಂಗ್​ಗಿಳಿದಿದ್ದಾರೆ.

  • 27 Apr 2022 09:28 PM (IST)

    ಶಶಾಂಕ್ ಬಿರುಸಿನ ಇನ್ನಿಂಗ್ಸ್

    ಐದು ಪಂದ್ಯಗಳ ನಂತರ ಮೊದಲ ಬಾರಿಗೆ ಬ್ಯಾಟಿಂಗ್‌ಗೆ ಬಂದ ಶಶಾಂಕ್ ಸಿಂಗ್ ಕೇವಲ ಆರು ಎಸೆತಗಳನ್ನು ಆಡಿ 26 ರನ್ ಗಳಿಸಿದರು. ಇದರ ಆಧಾರದ ಮೇಲೆ ಹೈದರಾಬಾದ್ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 195 ರನ್ ಗಳಿಸಿತು.

  • 27 Apr 2022 09:28 PM (IST)

    ಫರ್ಗುಸನ್ ದುಬಾರಿ ಓವರ್

    ಕೊನೆಯ ಓವರ್ ಬೌಲ್ ಮಾಡಲು ಬಂದಿದ್ದ ಲಾಕಿ ಫರ್ಗುಸನ್ ಅತ್ಯಂತ ದುಬಾರಿ ಎನಿಸಿಕೊಂಡರು. ಅವರು ಕೊನೆಯ ಓವರ್‌ನಲ್ಲಿ 25 ರನ್ ನೀಡಿದರು. ಮಾರ್ಕ್ ಯಾನ್ಸನ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಶಶಾಂಕ್ ಸಿಂಗ್ ಕೊನೆಯ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದರು.

  • 27 Apr 2022 09:20 PM (IST)

    ಯಾನ್ಸನ್ ಸಿಕ್ಸ್

    ಕೊನೆಯ ಓವರ್ ಬೌಲಿಂಗ್ ಮಾಡಲು ಬಂದ ಲಾಕಿ ಫರ್ಗುಸನ್ ಅವರ ಮೊದಲ ಎಸೆತದಲ್ಲಿ ಮಾರ್ಕೊ ಯಾನ್ಸನ್ ಸಿಕ್ಸರ್ ಬಾರಿಸಿದರು. ಚೆಂಡು ಅಪ್ ಆಗಿತ್ತು, ಅದನ್ನು ಯಾಸನ್ ಆಡಿ ಲಾಂಗ್ ಆನ್‌ನಲ್ಲಿ ಸಿಕ್ಸರ್ ಹೊಡೆದರು.

  • 27 Apr 2022 09:18 PM (IST)

    5 ಪಂದ್ಯಗಳ ನಂತರ ಶಶಾಂಕ್ ಬ್ಯಾಟಿಂಗ್‌ಗೆ

    ಅಂತಿಮವಾಗಿ ಇಂದು ಶಶಾಂಕ್ ಸಿಂಗ್ ಬ್ಯಾಟಿಂಗ್​ಗೆ ಬಂದಿದ್ದಾರೆ. ಐದು ಪಂದ್ಯಗಳ ನಂತರ ಅವರು ಬ್ಯಾಟಿಂಗ್‌ಗೆ ಬಂದಿದ್ದಾರೆ. ಬಂದ ಕೂಡಲೇ ಫೋರ್ ಹೊಡೆದರು.

  • 27 Apr 2022 09:17 PM (IST)

    ಸುಂದರ್ ಔಟ್

    ವಾಷಿಂಗ್ಟನ್ ಸುಂದರ್ ಔಟಾಗಿದ್ದಾರೆ. ಅಲ್ಜಾರಿ ಜೋಸೆಫ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ, ಸುಂದರ್ ಸಿಂಗಲ್ ಕದಿಯಲು ಯತ್ನಿಸಿದರು ಆದರೆ ಜೋಸೆಫ್ ಓಡಿಹೋಗಿ ವಿಕೆಟ್ ಬಳಿ ಬಿದ್ದಿದ್ದ ಚೆಂಡನ್ನು ಎತ್ತಿಕೊಂಡು ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದ ಸ್ಟಂಪ್ಸ್​ಗೆ ಥ್ರೋ ಹೊಡೆದರು.

  • 27 Apr 2022 09:16 PM (IST)

    ಮಾರ್ಕ್ರಾಮ್ ಔಟ್

    18ನೇ ಓವರ್‌ನ ಕೊನೆಯ ಎಸೆತದಲ್ಲಿ ಏಡೆನ್ ಮಕ್ರಂ ಔಟಾದರು. ಯಶ್ ದಯಾಳ್ ಅವರನ್ನು ವಜಾಗೊಳಿಸಿದರು.ಡೇವಿಡ್ ಮಿಲ್ಲರ್ ಅವರ ಅದ್ಭುತ ಕ್ಯಾಚ್ ಪಡೆದರು.

    ಮಕ್ರಮ್ – 56 ರನ್ 40 ಎಸೆತಗಳು 2×4 3×6

  • 27 Apr 2022 09:15 PM (IST)

    ಮಾರ್ಕ್ರಾಮ್ 50 ರನ್ ಪೂರ್ಣ

    ಮಕ್ರಮ್ 50 ರನ್ ಪೂರೈಸಿದ್ದಾರೆ. 17ನೇ ಓವರ್ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು

  • 27 Apr 2022 09:15 PM (IST)

    ನಿಕೋಲಸ್ ಪೂರನ್ ಔಟ್

    ನಿಕೋಲಸ್ ಪೂರನ್ ಔಟ್ ಆಗಿದ್ದಾರೆ. ಪೂರನ್ ಮೊಹಮ್ಮದ್ ಶಮಿ ಬಲೆಗೆ ಸಿಲುಕಿದರು. 17ನೇ ಓವರ್‌ನೊಂದಿಗೆ ಬಂದ ಶಮಿ ಸ್ವಲ್ಪ ನಿಧಾನವಾದ ಲೆಂಗ್ತ್ ಬಾಲ್ ಎಸೆದರು. ಪೂರನ್ ಅದನ್ನು ಲಾಂಗ್ ಆನ್‌ನಲ್ಲಿ ಹೊಡೆದರು ಮತ್ತು ಅಲ್ಲಿ ನಿಂತಿದ್ದ ಶುಭಮನ್ ಗಿಲ್ ಅವರ ಕ್ಯಾಚ್ ಹಿಡಿದರು.

  • 27 Apr 2022 09:01 PM (IST)

    ಅಭಿಷೇಕ್ ಔಟ್

    ಅಭಿಷೇಕ್ ಶರ್ಮಾ ಔಟಾಗಿದ್ದಾರೆ. 16ನೇ ಓವರ್‌ನ ಮೊದಲ ಎಸೆತದಲ್ಲಿ ಅಲ್ಜಾರಿ ಜೋಸೆಫ್ ಅವರನ್ನು ಬೌಲ್ಡ್ ಮಾಡಿದರು.

    ಅಭಿಷೇಕ್ – 65 ರನ್, 42 ಎಸೆತಗಳು 6×4 3×6

  • 27 Apr 2022 08:52 PM (IST)

    ಮಾರ್ಕ್ರಾಮ್ ಸಿಕ್ಸ್

    14ನೇ ಓವರ್‌ನ ಐದನೇ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್ ಫರ್ಗುಸನ್ ಮೇಲೆ ಸಿಕ್ಸರ್ ಬಾರಿಸಿದರು. ಮಾರ್ಕ್‌ರಾಮ್ ಮಿಡ್‌ವಿಕೆಟ್ ನಡುವೆ ಆರು ರನ್‌ಗಳಿಗೆ ಕಳುಹಿಸಿದರು. ಕೊನೆಯ ಎಸೆತದಲ್ಲಿ ಮಾರ್ಕ್ರಾಮ್ ಬೌಂಡರಿ ಬಾರಿಸಿದರು.

  • 27 Apr 2022 08:48 PM (IST)

    ಅಭಿಷೇಕ್ ಫೋರ್

    14ನೇ ಓವರ್‌ನ ಎರಡನೇ ಎಸೆತದಲ್ಲಿ ಅಭಿಷೇಕ್ ಬೌಂಡರಿ ಬಾರಿಸಿದರು. ಲೆಗ್ ಸ್ಟಂಪ್‌ನ ಈ ಬಾಲ್ ಅನ್ನು ಅಭಿಷೇಕ್ ಡೀಪ್ ಮಿಡ್‌ವಿಕೆಟ್‌ ಕಡೆ ಆಡಿದರು. ವಿಜಯ್ ಶಂಕರ್ ಡೈವ್ ಬಾರಿಸಿ ಕ್ಯಾಚ್ ಹಿಡಿಯಲು ಯತ್ನಿಸಿದರಾದರೂ ವಿಫಲರಾದರು.

  • 27 Apr 2022 08:43 PM (IST)

    ಅಭಿಷೇಕ್ ಅರ್ಧಶತಕ

    ಅಭಿಷೇಕ್ ಶರ್ಮಾ 12ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಈ ವೇಳೆ ಅವರು ಸಿಕ್ಸರ್​ಗೆ ಚೆಂಡನ್ನು ಮಿಡ್‌ವಿಕೆಟ್‌ ಕಡೆಗೆ ಕಳುಹಿಸಿದರು. ಇದು ಈ ಋತುವಿನಲ್ಲಿ ಅಭಿಷೇಕ್ ಅವರ ಎರಡನೇ ಅರ್ಧಶತಕವಾಗಿದೆ.

  • 27 Apr 2022 08:34 PM (IST)

    ಸಿಕ್ಸರ್ನೊಂದಿಗೆ ಓವರ್ ಅಂತ್ಯ

    ಮಾರ್ಕ್ರಾಮ್ 11 ನೇ ಓವರ್ ಅನ್ನು ಸಿಕ್ಸರ್ನೊಂದಿಗೆ ಕೊನೆಗೊಳಿಸಿದರು. ಜೋಸೆಫ್ ಅವರ ಬಾಲ್‌ನಲ್ಲಿ ಮಾರ್ಕ್‌ರಾಮ್ ಮುಂದೆ ಹೋಗಿ ಚೆಂಡನ್ನು ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್‌ಗೆ ಹೊಡೆದರು.

  • 27 Apr 2022 08:18 PM (IST)

    ಮಾರ್ಕ್ರಾಮ್ ಅತ್ಯುತ್ತಮ ಶಾಟ್

    ಎಂಟನೇ ಓವರ್ ಎಸೆದ ಲಾಕಿ ಫರ್ಗುಸನ್ ಅವರ ಎರಡನೇ ಎಸೆತದಲ್ಲಿ ಏಡೆನ್ ಮಾರ್ಕ್ರಾಮ್ ಅದ್ಭುತ ಶಾಟ್ ಆಡಿದರು. ಚೆಂಡು ಆಫ್-ಸ್ಟಂಪ್‌ನಲ್ಲಿತ್ತು ಮತ್ತು ಮಾರ್ಕ್ರಾಮ್ ಅದರ ಮೇಲೆ ಅತ್ಯುತ್ತಮ ಡ್ರೈವ್ ಮಾಡಿ ಕವರ್ ಮತ್ತು ಮಿಡ್-ಆನ್ ನಡುವೆ ನಾಲ್ಕು ರನ್‌ಗಳಿಗೆ ಕಳುಹಿಸಿದರು.

  • 27 Apr 2022 08:17 PM (IST)

    ಅಭಿಷೇಕ್ ಬೌಂಡರಿ

    ಆರನೇ ಓವರ್ ಎಸೆದ ಅಲ್ಜಾರಿ ಜೋಸೆಫ್ ಅವರ ಮೊದಲ ಎಸೆತದಲ್ಲಿ ಅಭಿಷೇಕ್ ಬೌಂಡರಿ ಬಾರಿಸಿದರು.ಎರಡನೇ ಎಸೆತವನ್ನೂ ಸಹ ಅಭಿಷೇಕ್ ಬೌಂಡರಿಗಟ್ಟಿದರು.

  • 27 Apr 2022 08:06 PM (IST)

    ರಾಹುಲ್ ಪೆವಿಲಿಯನ್​ಗೆ

    ಐದನೇ ಓವರ್‌ನ ಕೊನೆಯ ಎಸೆತವನ್ನು ಮೊಹಮ್ಮದ್ ಶಮಿ ಶಾರ್ಟ್ ಆಫ್ ಲೆಂಗ್ತ್‌ನಿಂದ ಸ್ವಿಂಗ್‌ನಲ್ಲಿ ಎಸೆದರು, ಅದು ರಾಹುಲ್ ತ್ರಿಪಾಠಿ ಅವರ ಪ್ಯಾಡ್‌ಗೆ ಬಡಿಯಿತು. ಈ ಬಗ್ಗೆ ಶಮಿ ಮನವಿ ಮಾಡಿದರೂ ಅಂಪೈರ್ ಔಟ್ ನೀಡಲಿಲ್ಲ. ಪಾಂಡ್ಯ ಡಿಆರ್​ಎಸ್ ತೆಗೆದುಕೊಂಡರು, ಅದರಲ್ಲಿ ರಾಹುಲ್ ಔಟಾಗಿರುವುದು ಸಾಭೀತಾಯಿತು.

  • 27 Apr 2022 08:04 PM (IST)

    ರಾಹುಲ್ ತ್ರಿಪಾಠಿ ಸಿಕ್ಸ್

    ಮೊಹಮ್ಮದ್ ಶಮಿ ಎಸೆತದಲ್ಲಿ ರಾಹುಲ್ ತ್ರಿಪಾಠಿ ಅದ್ಭುತ ಸಿಕ್ಸರ್ ಬಾರಿಸಿದರು. ಅದರ ಮುಂದಿನ ಎಸೆತದಲ್ಲೂ ಅದೇ ಶೈಲಿಯಲ್ಲಿ ಬೌಂಡರಿ ಬಾರಿಸಿದರು. ಅಲ್ಲದೆ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 27 Apr 2022 07:54 PM (IST)

    ಕೇನ್ ವಿಲಿಯಮ್ಸನ್ ಔಟ್

    ಕೇನ್ ವಿಲಿಯಮ್ಸನ್ ಔಟಾಗಿದ್ದಾರೆ. ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. ಶಮಿ ಅವರ ಅಮೋಘ ಬೌಲಿಂಗ್‌ಗೆ ವಿಲಿಯಮ್ಸನ್‌ ಬಳಿ ಉತ್ತರವಿಲ್ಲ. ಚೆಂಡು ವಿಲಿಯಮ್ಸನ್ ಅವರ ಬ್ಯಾಟ್‌ಗೆ ಬಡಿದು ಸ್ಟಂಪ್ಸ್​ಗೆ ಬಡಿಯಿತು.

    ಕೇನ್ ವಿಲಿಯಮ್ಸನ್ – 5 ರನ್, 8 ಎಸೆತಗಳು 1×4

  • 27 Apr 2022 07:53 PM (IST)

    ವಿಲಿಯಮ್ಸನ್ ಫೋರ್

    ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಬೌಂಡರಿ ಬಾರಿಸಿದರು.

  • 27 Apr 2022 07:53 PM (IST)

    ಅಭಿಷೇಕ್ ಅತ್ಯುತ್ತಮ ಶಾಟ್

    ಎರಡನೇ ಓವರ್ ಬೌಲ್ ಮಾಡಲು ಬಂದ ಯಶ್ ದಯಾಳ್ ಅವರ ನಾಲ್ಕನೇ ಎಸೆತದಲ್ಲಿ ಅಭಿಷೇಕ್ ಬೌಂಡರಿ ಬಾರಿಸಿದರು. ಇದು ಬ್ಯಾಟ್‌ನೊಂದಿಗೆ ಬಂದ ಮೊದಲ ಬೌಂಡರಿ.

  • 27 Apr 2022 07:40 PM (IST)

    ಮೊದಲ ಬೌಂಡರಿ

    ಸನ್ ರೈಸರ್ಸ್ ಹೈದರಾಬಾದ್ ತಂಡದ ಖಾತೆ ತೆರೆಯಲಾಗಿದೆ. ಎರಡನೇ ಎಸೆತವನ್ನು ಮೊಹಮ್ಮದ್ ಶಮಿ ವೈಡ್ ಮಾಡಿದರು. ವಿಕೆಟ್ ಕೀಪರ್ ಕೂಡ ಕ್ಯಾಚ್ ಹಿಡಿಯಲು ಸಾಧ್ಯವಾಗದೆ ಚೆಂಡು ನಾಲ್ಕು ರನ್ ಗಳಿಗೆ ಹೋಯಿತು.

  • 27 Apr 2022 07:39 PM (IST)

    ಪಂದ್ಯ ಪ್ರಾರಂಭ

    ಗುಜರಾತ್ ಮತ್ತು ಹೈದರಾಬಾದ್ ನಡುವಿನ ಪಂದ್ಯ ಆರಂಭವಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಮತ್ತು ಅಭಿಷೇಕ್ ಶರ್ಮಾ ಹೈದರಾಬಾದ್ ಇನ್ನಿಂಗ್ಸ್ ತೆರೆಯಲು ಬಂದಿದ್ದಾರೆ. ಅವರ ಮುಂದೆ ಗುಜರಾತ್ ಟೈಟಾನ್ಸ್‌ನ ಪ್ರಮುಖ ಅಸ್ತ್ರ ಮೊಹಮ್ಮದ್ ಶಮಿ ಇದ್ದಾರೆ.

  • 27 Apr 2022 07:12 PM (IST)

    ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್:

    ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಟಿ. ನಟರಾಜನ್, ಉಮ್ರಾನ್ ಮಲಿಕ್

  • 27 Apr 2022 07:12 PM (IST)

    ಗುಜರಾತ್‌ನ ಪ್ಲೇಯಿಂಗ್-11

    ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಭಿನವ್ ಮನೋಹರ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಯಶ್ ದಯಾಲ್, ಮೊಹಮ್ಮದ್ ಶಮಿ

  • 27 Apr 2022 07:11 PM (IST)

    ಮೊದಲ ಬಾರಿಗೆ ಟಾಸ್ ಸೋತ ವಿಲಿಯಮ್ಸನ್

    ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲ ಬಾರಿಗೆ ಟಾಸ್ ಸೋತಿರುವುದು ಇದೇ ಮೊದಲು. ಗುಜರಾತ್ ತನ್ನ ಪ್ಲೇಯಿಂಗ್-11 ಅನ್ನು ಬದಲಾಯಿಸಿಲ್ಲ. ಬದಲಾವಣೆಯೊಂದಿಗೆ ಹೈದರಾಬಾದ್ ಬಂದಿದೆ. ಜಗದೀಶ್ ಸುಚಿತ್ ಹೊರ ಹೋಗಿದ್ದು, ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಬಂದಿದ್ದಾರೆ.

Published On - 7:01 pm, Wed, 27 April 22

Follow us on