WPL 2023 GG Vs MI Live Streaming: ಮೊದಲ ಪಂದ್ಯದಲ್ಲಿ ಗುಜರಾತ್- ಮುಂಬೈ ಫೈಟ್; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

|

Updated on: Mar 03, 2023 | 4:13 PM

WPL 2023 Gujarat Giants Vs Mumbai Indians Live Streaming: ಮುಂಬೈ ಇಂಡಿಯನ್ಸ್ ತಂಡ ಟೀಂ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ತಮ್ಮ ತಂಡದ ನಾಯಕತ್ವ ನೀಡಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ಆಯ್ಕೆ ಮಾಡಿದೆ.

WPL 2023 GG Vs MI Live Streaming: ಮೊದಲ ಪಂದ್ಯದಲ್ಲಿ ಗುಜರಾತ್- ಮುಂಬೈ ಫೈಟ್; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಮಹಿಳಾ ಪ್ರೀಮಿಯರ್ ಲೀಗ್
Follow us on

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಮಾರ್ಚ್ 4 ರ ಶನಿವಾರದಂದು ಪ್ರಾರಂಭವಾಗಲಿದೆ. ಮೊದಲ ಸೀಸನ್‌ನಲ್ಲಿ ಐದು ತಂಡಗಳು ಭಾಗವಹಿಸುತ್ತಿದ್ದು, ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಇದೇ ಶನಿವಾರ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ಲೀಗ್‌ನ ಮೊದಲ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Giants and Mumbai Indians) ತಂಡಗಳ ನಡುವೆ ನಡೆಯಲಿದೆ. ಈ ಸೀಸನ್​ನಲ್ಲಿ ಐದು ತಂಡಗಳ ನಡುವೆ 22 ಪಂದ್ಯಗಳು ನಡೆಯಲಿದ್ದು, ಲೀಗ್ ಸುತ್ತಿನ ನಂತರ, ಎಲಿಮಿನೇಟರ್ ಮತ್ತು ನಂತರ ಫೈನಲ್ ಪಂದ್ಯ ನಡೆಯಲಿದೆ.

ಮುಂಬೈ ಇಂಡಿಯನ್ಸ್ ತಂಡ ಟೀಂ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ತಮ್ಮ ತಂಡದ ನಾಯಕತ್ವ ನೀಡಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ತಮ್ಮ ತಂಡ ಸೂಪರ್‌ನೋವಾಸ್‌ನ್ನು ಚಾಂಪಿಯನ್‌ ಆಗಿ ಮಾಡಿದ್ದರೆ, ಇತ್ತ ಬೆತ್ ಮೂನಿ ತನ್ನ ಅಬ್ಬರದ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾಕ್ಕೆ ಅನೇಕ ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

IND vs AUS: ಟಾಸ್ ಗೆದ್ದರೂ ಸೋತ ಭಾರತ; ಇಂದೋರ್​ನಲ್ಲಿ ರೋಹಿತ್ ಪಡೆ ಎಡವಿದ್ದೆಲ್ಲಿ?

ಮಹಿಳಾ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದ ಪೂರ್ಣ ವಿವರ

ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭ ಯಾವಾಗ ಪ್ರಾರಂಭವಾಗುತ್ತದೆ?

ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭವು ಮಾರ್ಚ್ 4 ರಂದು ಸಂಜೆ 4.30 ಕ್ಕೆ ಪ್ರಾರಂಭವಾಗಲಿದೆ.

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ಯಾವಾಗ ನಡೆಯಲಿದೆ?

ಮಾರ್ಚ್ 4 ರ ಶನಿವಾರದಂದು ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಹಿಳಾ ನಡುವಿನ ಪಂದ್ಯ ನಡೆಯಲಿದೆ.

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ರಾತ್ರಿ 7.30 ಕ್ಕೆ ನಡೆಯಲಿದ್ದು, ಟಾಸ್ 7.00 ಗಂಟೆಗೆ ನಡೆಯಲಿದೆ.

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿರಲಿದೆ?

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್‌ಗಳಲ್ಲಿರಲಿದೆ.

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

ಮುಂಬೈ ಇಂಡಿಯನ್ಸ್ ತಂಡ: ಹರ್ಮನ್‌ಪ್ರೀತ್ ಕೌರ್, ಯಾಸ್ತಿಕಾ ಭಾಟಿಯಾ, ಅಮನ್‌ಜೋತ್ ಕೌರ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ನೇಟ್ ಸಿವರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್, ನೀಲಂ ಬಿಷ್ತ್, ಸಿ ವಾಂಗ್, ಹೀದರ್ ಗ್ರಹಾಂ, ಜಿಂತಿಮಣಿ ಕಲಿತಾ, ಪೂಜಾ ವಸ್ತ್ರಾಕರ್, ಅಮೆಲಿಯಾ

ಗುಜರಾತ್ ಜೈಂಟ್ಸ್ ತಂಡ: ಆಶ್ಲೇ ಗಾರ್ಡ್ನರ್, ಬೆತ್ ಮೂನಿ, ಸ್ನೇಹ ರಾಣಾ, ಮಾನಸಿ ಜೋಶಿ, ಶಬ್ನಮ್ ಶಕೀಲ್, ಸೋಫಿ ಡಂಕ್ಲೆ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಡೈಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಲಾ, ಎಸ್ ಮೇಘನಾ, ಜಾರ್ಜಿಯಾ, ಅಶ್ವಿನಿ, ಪರುಣಿಕಾ ಸಿಸೋಡಿಯಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Fri, 3 March 23