AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಟೀಂ ಇಂಡಿಯಾ ಖಾತೆಗೆ ಬೇಡದ ದಾಖಲೆಗಳನ್ನು ಹಾಕಿದ ಇಂದೋರ್ ಟೆಸ್ಟ್ ಸೋಲು..!

IND vs AUS: ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿದ್ದು, ಎರಡೂವರೆ ದಿನಗಳಲ್ಲಿ ಈ ಪಂದ್ಯ ಮುಗಿದಿದೆ. 2012-13ರ ನಂತರ ತವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಇದು ಮೊದಲ ಸೋಲು.

ಪೃಥ್ವಿಶಂಕರ
|

Updated on:Mar 03, 2023 | 6:00 PM

Share
ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿಯಲ್ಲಿ ತನ್ನ ಮೊದಲ ಸೋಲು ಅನುಭವಿಸಿದೆ. ಈ ಸೋಲು ನಿರೀಕ್ಷಿತವಾಗಿಲ್ಲದಿದ್ದರೂ, ಆಸ್ಟ್ರೇಲಿಯಾ ತನ್ನ ಅದ್ಭುತ ಆಟದ ಆಧಾರದ ಮೇಲೆ ಭಾರತವನ್ನು ಅಚ್ಚರಿಗೊಳಿಸಿತು. ಆಸ್ಟ್ರೇಲಿಯಾ ಒಂಬತ್ತು ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಈ ಸೋಲಿನೊಂದಿಗೆ ಟೀಂ ಇಂಡಿಯಾ ಕೂಡ ಕೆಲವು ಬೇಡದ ದಾಖಲೆಗಳಿಗೆ ಕೊರಳ್ಳೊಡ್ಡಿದೆ.

1 / 5
ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿದ್ದು, ಎರಡೂವರೆ ದಿನಗಳಲ್ಲಿ ಈ ಪಂದ್ಯ ಮುಗಿದಿದೆ. 2012-13ರ ನಂತರ ತವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಇದು ಮೊದಲ ಸೋಲು. 2012-13ರಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸಿತ್ತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಇಂಗ್ಲೆಂಡ್ ವಿರುದ್ಧ ಮಂಡಿಯೂರಿತ್ತು.

2 / 5
ಈ ಪಂದ್ಯ ಮೂರನೇ ದಿನವೇ ಮುಕ್ತಾಯಗೊಂಡಿತು. ಮೂರನೇ ದಿನವೇ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನುಭವಿಸಿದ್ದು ಇದು ಆರನೇ ಬಾರಿ. ಇಂದೋರ್‌ಗಿಂತ ಮೊದಲು, 2016-17ರಲ್ಲಿ ಪುಣೆಯಲ್ಲಿ ಭಾರತ ಮೂರು ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಅದಕ್ಕೂ ಮೊದಲು 2007-08ರಲ್ಲಿ ಅಹಮದಾಬಾದ್‌ನಲ್ಲಿ, 2000-01ರಲ್ಲಿ ಮುಂಬೈನಲ್ಲಿ, 1999-00ರಲ್ಲಿ ಮುಂಬೈನಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಮತ್ತು 1951-52 ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ದಿನಗಳಲ್ಲಿ ಸೋತಿತ್ತು.

3 / 5
ಅಲ್ಲದೆ ಇಂದೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯ ಅತಿ ಕಡಿಮೆ ಚೆಂಡುಗಳಲ್ಲಿ ಮುಕ್ತಾಯಗೊಂಡಿತು. ಈ ಪಂದ್ಯ ಕೇವಲ 1135 ಎಸೆತಗಳಲ್ಲಿ ಕೊನೆಗೊಂಡಿತು. ಈ ಹಿಂದೆ 1951-52ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡಿದ ಟೆಸ್ಟ್ ಪಂದ್ಯ 14549 ಎಸೆತಗಳ ನಂತರ ಕೊನೆಗೊಂಡಿತ್ತು. 1983-84ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯವು 1474 ಎಸೆತಗಳಲ್ಲಿ ಕೊನೆಗೊಂಡಿತು.

4 / 5
ಮಾರ್ಚ್ 9 ರಂದು ಅಹಮದಾಬಾದ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ಮೇಲೆ ಈಗ ಆಸ್ಟ್ರೇಲಿಯಾದ ಕಣ್ಣು ನೆಟ್ಟಿದೆ. ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದರೆ ಸರಣಿ 2-2ರಿಂದ ಸಮವಾಗಲಿದೆ. ಒಂದು ವೇಳೆ ಈ ಪಂದ್ಯ ಡ್ರಾ ಅಥವಾ ಭಾರತ ಗೆದ್ದರೆ ಆತಿಥೇಯ ತಂಡ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳಲಿದೆ.

5 / 5

Published On - 6:00 pm, Fri, 3 March 23

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ

80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ

ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ

ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ

8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?

ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ

ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ

ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ

ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ