GT vs CSK, IPL 2023 Final Highlights: ನಿಲ್ಲದ ಮಳೆ; ಸೋಮವಾರ ನಡೆಯಲಿದೆ ಫೈನಲ್ ಪಂದ್ಯ
Gujarat Titans vs Chennai Super Kings, IPL 2023 Highlights: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯಿಂದಾಗಿ ಇಂದು ನಡೆಯಲಿಲ್ಲ. ಈ ಪಂದ್ಯವು ಈಗ ಮೀಸಲು ದಿನ ಅಂದರೆ ಸೋಮವಾರದಂದು ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯಿಂದಾಗಿ ಇಂದು ನಡೆಯಲಿಲ್ಲ. ಈ ಪಂದ್ಯವು ಈಗ ಮೀಸಲು ದಿನ ಅಂದರೆ ಸೋಮವಾರದಂದು ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿಯಲಾರಂಭಿಸಿದ್ದು, ಎಡಬಿಡದೆ ಸುರಿಯುತ್ತಿದೆ. ಹೀಗಾಗಿ ಅಂಪೈರ್‌ಗಳು ಅಂತಿಮ ಪಂದ್ಯವನ್ನು ಮುಂದೂಡಿ ಸೋಮವಾರ ನಡೆಸಲು ತೀರ್ಮಾನಿಸಿದರು.
LIVE NEWS & UPDATES
-
ಸೋಮವಾರ ನಡೆಯಲಿದೆ ಫೈನಲ್ ಪಂದ್ಯ
11 ಗಂಟೆಗೊಳಗೆ ಮಳೆ ನಿಂತಿತ್ತಾದರೂ ಉಭಯ ತಂಡದ ನಾಯಕರು ಹಾಗೂ ಅಂಪೈರ್ಗಳ ಒಮ್ಮತ ನಿರ್ಧಾರದ ಮೇರೆಗೆ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
-
ಪಂದ್ಯದ ಬಗ್ಗೆ ಅಂಪೈರ್ ಮಾತು
The Umpires are here with the latest update on the rain delay ?️
Hear what they have to say ? #TATAIPL | #CSKvGT | #Final pic.twitter.com/qG6LVj4uvh
— IndianPremierLeague (@IPL) May 28, 2023
-
11 ಗಂಟೆಯೊಳಗೆ ಮಳೆ ನಿಂತರೆ ಆಟ ಆರಂಭ
ಫಿಲ್ಡ್ ಅಂಪೈರ್ಗಳ ಹೇಳಿಕೆಯ ಪ್ರಕಾರ ಮಳೆ 11:06ರೊಳಗೆ ನಿಂತರೆ ಇಂದೇ ಫೈನಲ್ ನಡೆಯಲಿದೆ.
ಎಷ್ಟು ಓವರ್ ಕಡಿತ?
ಅಂದಹಾಗೆ, ಮಳೆಯಿಂದಾಗಿ ಇಂದು ಪಂದ್ಯ ಆಡುವ ಸಾಧ್ಯತೆಯು ತುಂಬಾ ಕಷ್ಟಕರವಾಗಿದೆ. ಮತ್ತೆ ಮಳೆ ಆರಂಭವಾಗುತ್ತಿದ್ದು, ಪಂದ್ಯ ಯಾವಾಗ ಆರಂಭವಾಗಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 9:45ಕ್ಕೆ ಪಂದ್ಯ ಆರಂಭವಾದರೆ ಒಂದು ಓವರ್ ಮಾತ್ರ ಕಡಿತಗೊಳಿಸಲಾಗುತ್ತದೆ. 10 ಗಂಟೆಗೆ ಪಂದ್ಯ ಆರಂಭವಾದರೆ ತಲಾ 17 ಓವರ್ ಪಂದ್ಯ ನಡೆಯುತ್ತದೆ. 10:30 ಕ್ಕೆ ಆರಂಭವಾದರೆ ಪ್ರತಿ ಇನಿಂಗ್ಸ್‌ಗೆ 15 ಓವರ್ ಸಿಗಲಿದೆ. ಪಂದ್ಯ 12:06 ಕ್ಕೆ ಪ್ರಾರಂಭವಾದರೆ ಪ್ರತಿ ಇನಿಂಗ್ಸ್‌ಗೆ ಐದು ಓವರ್ ಸಿಗಲಿದೆ.
ಮತ್ತೆ ಮಳೆ
The rain ?️ returns
The covers are back ?
The wait continues ⌛️
Follow the match ▶️ https://t.co/IUkeFQS4Il#TATAIPL | #Final | #CSKvGT pic.twitter.com/rGesIuwWJu
— IndianPremierLeague (@IPL) May 28, 2023
ಓವರ್ ಕಡಿತ ಆರಂಭ
UPDATE from Ahmedabad ?
Overs will start reducing after 9:35 PM IST. #TATAIPL | #Final
— IndianPremierLeague (@IPL) May 28, 2023
ಮತ್ತೆ ಮಳೆ ಆರಂಭ
ಸ್ವಲ್ಪ ಸಮಯ ವಿರಾಮ ತೆಗೆದುಕೊಂಡಿದ್ದ ಮಳೆ ರಾಯ ಮತ್ತೆ ಸುರಿಯಲಾರಂಭಿಸಿದ್ದಾನೆ. ಹೀಗಾಗಿ ಮತ್ತೆ ಮೈದಾನದಿಂದ ಆಟಗಾರರು ಪೆವಿಲಿಯನ್ಗೆ ತೆರಳಿದ್ದಾರೆ. 9:35ರೊಳಗೆ ಪಂದ್ಯ ಆರಂಭವಾಗದಿದ್ದರೆ ಓವರ್‌ಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಅಹಮದಾಬಾದ್‌ನಲ್ಲಿ ಮಳೆ ನಿಂತಿದೆ
ಅಹಮದಾಬಾದ್‌ನಲ್ಲಿ ಮಳೆ ನಿಂತಿದ್ದು ಪಿಚ್ ಮೇಲೆ ಹೊದಿಸಲಾಗಿದ್ದ ಕವರ್ಗಳನ್ನು ತೆಗೆಯಲಾಗಿದೆ.
ಮಳೆ ಮತ್ತೆ ಆರಂಭ
ಅಹಮದಾಬಾದ್‌ನಲ್ಲಿ ಎಡಬಿಡದೆ ಮಳೆಯಾಗುತ್ತಿದೆ. 9.35ರೊಳಗೆ ಪಂದ್ಯ ಆರಂಭವಾದರೆ ಓವರ್‌ಗಳನ್ನು ಕಡಿತಗೊಳಿಸುವುದಿಲ್ಲ.
ಅಹಮದಾಬಾದ್‌ನಲ್ಲಿ ಭಾರೀ ಮಳೆ
ಟಾಸ್‌ಗೂ ಮುನ್ನವೇ ಅಹಮದಾಬಾದ್‌ನಲ್ಲಿ ವಾತಾವರಣ ಹದಗೆಟ್ಟಿದೆ. ಜೋರು ಮಳೆ ಶುರುವಾಗಿದೆ.
ಇದೇ ದಿನ ಫೈನಲ್ ಗೆದ್ದಿದ್ದ ಚೆನ್ನೈ
ನಿಖರವಾಗಿ 12 ವರ್ಷಗಳ ಹಿಂದೆ, ಈ ದಿನ ಅಂದರೆ 28 ಮೇ 2011 ರಂದು, ಚೆನ್ನೈ ತನ್ನ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 12 ವರ್ಷಗಳ ಹಿಂದೆ ಚೆನ್ನೈ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.
ಫೈನಲ್‌ಗೆ ಮಳೆ ಕಾಟ
ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ವಿಲನ್ ಆಗುವ ಸಾಧ್ಯತೆಗಳಿವೆ.
Published On - May 28,2023 4:46 PM