CSK vs GT IPL 2023 Final: ‘ಹೆದರುವುದಿಲ್ಲ’; ಫೈನಲ್​ಗೂ ಮುನ್ನ ಚೆನ್ನೈ ಕೋಚ್ ಹೇಳಿದ್ದೇನು ಗೊತ್ತಾ?

CSK vs GT IPL 2023 Final: ಫೈನಲ್‌ನಲ್ಲಿ ಪರಿಸ್ಥಿತಿ ಏನೇ ಇರಲಿ, ತಮ್ಮ ತಂಡವು ಪ್ರತಿ ಸವಾಲಿಗೆ ಸಿದ್ಧವಾಗಿದೆ ಎಂದು ಹೇಳುವ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡಕ್ಕೆ ಸ್ಟೀಫನ್ ಫ್ಲೆಮಿಂಗ್ ಮುನ್ನೆಚ್ಚರಿಕೆ ನೀಡಿದ್ದಾರೆ.

CSK vs GT IPL 2023 Final: ‘ಹೆದರುವುದಿಲ್ಲ'; ಫೈನಲ್​ಗೂ ಮುನ್ನ ಚೆನ್ನೈ ಕೋಚ್ ಹೇಳಿದ್ದೇನು ಗೊತ್ತಾ?
ಸ್ಟೀಫನ್ ಫ್ಲೆಮಿಂಗ್
Follow us
ಪೃಥ್ವಿಶಂಕರ
|

Updated on: May 28, 2023 | 6:30 PM

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲ್ಲಿರುವ 16ನೇ ಆವೃತ್ತಿಯ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ತಂಡಗಳು (Chennai Super Kings vs Gujarat Titans) ಮುಖಾಮುಖಿಯಾಗುತ್ತಿವೆ. ಇದರಲ್ಲಿ ಚೆನ್ನೈ ತಂಡ ದಾಖಲೆಯ ಐದನೇ ಐಪಿಎಲ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತನ್ನಲ್ಲೇ ಪ್ರಶಸ್ತಿ ಉಳಿಸಿಕೊಳ್ಳಲು ಯತ್ನಿಸಲಿದೆ. ಆದರೆ ಈ ಪ್ರಶಸ್ತಿ ಪಂದ್ಯಕ್ಕೂ ಮುನ್ನ ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ತಮ್ಮ ತಂಡದ ಫೈನಲ್ ತಯಾರಿಯ ಬಗ್ಗೆ ಮಾತನಾಡಿದ್ದು, ಫೈನಲ್‌ನಲ್ಲಿ ಪರಿಸ್ಥಿತಿ ಏನೇ ಇರಲಿ, ತಮ್ಮ ತಂಡವು ಪ್ರತಿ ಸವಾಲಿಗೆ ಸಿದ್ಧವಾಗಿದೆ ಎಂದು ಹೇಳುವ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ತಂಡಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಇದು ಚೆನ್ನೈ ತಂಡದ 14ನೇ ಸೀಸನ್ ಆಗಿದ್ದು, ಈ 14ನೇ ಸೀಸನ್​ನಲ್ಲಿ ಚೆನ್ನೈ ತಂಡ 10ನೇ ಬಾರಿಗೆ ಫೈನಲ್ ಆಡಲಿದೆ. ಈ ತಂಡ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದೆ. ಮತ್ತೊಂದೆಡೆ, ಇದು ಗುಜರಾತ್‌ನ ಎರಡನೇ ಐಪಿಎಲ್ ಸೀಸನ್ ಆಗಿದ್ದು, ಎರಡೂ ಸೀಸನ್‌ಗಳಲ್ಲಿ ಈ ತಂಡ ಅಮೋಘ ಆಟ ಪ್ರದರ್ಶಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಹೀಗಾಗಿ ಉಭಯ ತಂಡಗಳು ಕಾಗದದ ಮೇಲೂ ಹಾಗೂ ಮೈದಾನದಲ್ಲೂ ಬಲಿಷ್ಠವಾಗಿ ಕಾಣುತ್ತಿದ್ದು ಯಾರ ಮುಡಿಗೆ ಚಾಂಪಿಯನ್ ಕಿರೀಟ ಏರಲಿದೆ ಎಂಬುದುನ ಕುತೂಹಲ ಮೂಡಿಸಿದೆ.

GT vs CSK, IPL 2023 Final Live Score: ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ ಚೆನ್ನೈ- ಗುಜರಾತ್

ನಾವು ಹೆದರುವುದಿಲ್ಲ

ವಾಸ್ತವವಾಗಿ ಕ್ರಿಕೆಟ್‌ನಲ್ಲಿ ಪರಿಸ್ಥಿತಿಗಳು ಬಹಳ ಮುಖ್ಯ. ಪಿಚ್ ಹೇಗಿದೆ, ಎಲ್ಲೆಲ್ಲಿ ಪಂದ್ಯ ನಡೆಯುತ್ತಿದೆ, ಯಾವ ತಂಡದ ತವರು ನೆಲದಲ್ಲಿ ಪಂದ್ಯ ನಡೆಯುತ್ತಿದೆ, ಎಂಬುದೆಲ್ಲವೂ ಬಹಳ ಮುಖ್ಯ. ಇದೀಗ ಐಪಿಎಲ್​ನ ಫೈನಲ್ ಪಂದ್ಯ ಗುಜರಾತ್‌ನ ತವರು ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗುಜರಾತ್ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆಗಳಿವೆ. ಆದರೆ ಇದೆಲ್ಲದಕ್ಕೂ ಸಿದ್ಧವಾಗಿರುವ ಚೆನ್ನೈ ತಂಡ ಫೈನಲ್ ಗೆಲ್ಲುವ ಉತ್ಸಾಹದಲ್ಲಿದೆ. ಇನ್ನು ತಂಡದ ಫೈನಲ್ ತಯಾರಿ ಹಾಗೂ ಎದುರಾಳಿ ಬಗ್ಗೆ ಮಾತನಾಡಿರುವ ಚೆನ್ನೈ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಇದಕ್ಕೆಲ್ಲ ಚೆನ್ನೈ ಹೆದರುವುದಿಲ್ಲ. ಚೆನ್ನೈ ತಂಡವು ತವರಿನ ಹೊರಗಿನ ಪಂದ್ಯಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿತು ನಿಜ. ಆದರೆ ಈಗ ತಂಡ ಸ್ಥಿರವಾಗಿದೆ. ಹಾಗೆಯೇ ತಂಡವು ಮೊದಲಿಗಿಂತ ಮಾನಸಿಕವಾಗಿ ಉತ್ತಮವಾಗಿದೆ. ಅಲ್ಲದೆ ಫೈನಲ್‌ನಲ್ಲಿ ಈ ತಂಡವು ಪರಿಸ್ಥಿತಿಗಳ ಬಗ್ಗೆ ಚಿಂತಿಸುವುದಿಲ್ಲ ಎಂದು ಕೋಚ್ ಹೇಳಿದ್ದಾರೆ.

‘ಸವಾಲಿಗೆ ಸಿದ್ಧ’

ಮುಂದುವರೆದು ಮಾತನಾಡಿರುವ ಫ್ಲೆಮಿಂಗ್, ಇದೊಂದು ದೊಡ್ಡ ಅವಕಾಶವಾಗಿದ್ದು, ತಂಡ ತುಂಬಾ ಉತ್ಸುಕವಾಗಿದೆ. ತಮ್ಮ ತಂಡದಲ್ಲಿ ಕ್ವಾಲಿಟಿ ಪ್ಲೇಯರ್ಸ್​ಗಳಿದ್ದಾರೆ. ಹೀಗಾಗಿ ಫೈನಲ್‌ನಲ್ಲಿ ಗುಜರಾತ್ ಒಡ್ಡುವ ಪ್ರತಿಯೊಂದು ಸವಾಲಿಗೆ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಫ್ಲೆಮಿಂಗ್ ಹೇಳಿಕೊಂಡಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2021ರಲ್ಲಿ ತನ್ನ ಕೊನೆಯ ಫೈನಲ್ ಪಂದ್ಯವನ್ನಾಡಿದ್ದ ಚೆನ್ನೈ 4ನೇ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಆದರೆ ಆನಂತರದ ಸೀಸನ್​ನಲ್ಲಿ ತಂಡ ತೀರ ಕಳಪೆ ಪ್ರದರ್ಶನ ನೀಡಿ 9ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಆದರೆ ಈ ಆವೃತ್ತಿಯಲ್ಲಿ ಮೈಗೊಡವಿ ನಿಂತಿರುವ ಚೆನ್ನೈ ಚಾಂಪಿಯನ್ ಪಟ್ಟಕ್ಕೇರುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ