GT vs CSK, IPL 2023 Final Highlights: ನಿಲ್ಲದ ಮಳೆ; ಸೋಮವಾರ ನಡೆಯಲಿದೆ ಫೈನಲ್ ಪಂದ್ಯ

|

Updated on: May 28, 2023 | 11:10 PM

Gujarat Titans vs Chennai Super Kings, IPL 2023 Highlights: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯಿಂದಾಗಿ ಇಂದು ನಡೆಯಲಿಲ್ಲ. ಈ ಪಂದ್ಯವು ಈಗ ಮೀಸಲು ದಿನ ಅಂದರೆ ಸೋಮವಾರದಂದು ನಡೆಯಲಿದೆ.

GT vs CSK, IPL 2023 Final Highlights: ನಿಲ್ಲದ ಮಳೆ; ಸೋಮವಾರ ನಡೆಯಲಿದೆ ಫೈನಲ್ ಪಂದ್ಯ
ಚೆನ್ನೈ- ಗುಜರಾತ್ ಮುಖಾಮುಖಿ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯಿಂದಾಗಿ ಇಂದು ನಡೆಯಲಿಲ್ಲ. ಈ ಪಂದ್ಯವು ಈಗ ಮೀಸಲು ದಿನ ಅಂದರೆ ಸೋಮವಾರದಂದು ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿಯಲಾರಂಭಿಸಿದ್ದು, ಎಡಬಿಡದೆ ಸುರಿಯುತ್ತಿದೆ. ಹೀಗಾಗಿ ಅಂಪೈರ್‌ಗಳು ಅಂತಿಮ ಪಂದ್ಯವನ್ನು ಮುಂದೂಡಿ ಸೋಮವಾರ ನಡೆಸಲು ತೀರ್ಮಾನಿಸಿದರು.

LIVE NEWS & UPDATES

The liveblog has ended.
  • 28 May 2023 11:03 PM (IST)

    ಸೋಮವಾರ ನಡೆಯಲಿದೆ ಫೈನಲ್ ಪಂದ್ಯ

    11 ಗಂಟೆಗೊಳಗೆ ಮಳೆ ನಿಂತಿತ್ತಾದರೂ ಉಭಯ ತಂಡದ ನಾಯಕರು ಹಾಗೂ ಅಂಪೈರ್​ಗಳ ಒಮ್ಮತ ನಿರ್ಧಾರದ ಮೇರೆಗೆ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

  • 28 May 2023 10:58 PM (IST)

    ಪಂದ್ಯದ ಬಗ್ಗೆ ಅಂಪೈರ್ ಮಾತು

  • 28 May 2023 10:35 PM (IST)

    11 ಗಂಟೆಯೊಳಗೆ ಮಳೆ ನಿಂತರೆ ಆಟ ಆರಂಭ

    ಫಿಲ್ಡ್ ಅಂಪೈರ್​ಗಳ ಹೇಳಿಕೆಯ ಪ್ರಕಾರ ಮಳೆ 11:06ರೊಳಗೆ ನಿಂತರೆ ಇಂದೇ ಫೈನಲ್ ನಡೆಯಲಿದೆ.

  • 28 May 2023 10:07 PM (IST)

    ಎಷ್ಟು ಓವರ್‌ ಕಡಿತ?

    ಅಂದಹಾಗೆ, ಮಳೆಯಿಂದಾಗಿ ಇಂದು ಪಂದ್ಯ ಆಡುವ ಸಾಧ್ಯತೆಯು ತುಂಬಾ ಕಷ್ಟಕರವಾಗಿದೆ. ಮತ್ತೆ ಮಳೆ ಆರಂಭವಾಗುತ್ತಿದ್ದು, ಪಂದ್ಯ ಯಾವಾಗ ಆರಂಭವಾಗಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 9:45ಕ್ಕೆ ಪಂದ್ಯ ಆರಂಭವಾದರೆ ಒಂದು ಓವರ್ ಮಾತ್ರ ಕಡಿತಗೊಳಿಸಲಾಗುತ್ತದೆ. 10 ಗಂಟೆಗೆ ಪಂದ್ಯ ಆರಂಭವಾದರೆ ತಲಾ 17 ಓವರ್‌ ಪಂದ್ಯ ನಡೆಯುತ್ತದೆ. 10:30 ಕ್ಕೆ ಆರಂಭವಾದರೆ ಪ್ರತಿ ಇನಿಂಗ್ಸ್‌ಗೆ 15 ಓವರ್‌ ಸಿಗಲಿದೆ. ಪಂದ್ಯ 12:06 ಕ್ಕೆ ಪ್ರಾರಂಭವಾದರೆ ಪ್ರತಿ ಇನಿಂಗ್ಸ್‌ಗೆ ಐದು ಓವರ್‌ ಸಿಗಲಿದೆ.

  • 28 May 2023 09:58 PM (IST)

    ಮತ್ತೆ ಮಳೆ

  • 28 May 2023 09:58 PM (IST)

    ಓವರ್ ಕಡಿತ ಆರಂಭ

  • 28 May 2023 09:23 PM (IST)

    ಮತ್ತೆ ಮಳೆ ಆರಂಭ

    ಸ್ವಲ್ಪ ಸಮಯ ವಿರಾಮ ತೆಗೆದುಕೊಂಡಿದ್ದ ಮಳೆ ರಾಯ ಮತ್ತೆ ಸುರಿಯಲಾರಂಭಿಸಿದ್ದಾನೆ. ಹೀಗಾಗಿ ಮತ್ತೆ ಮೈದಾನದಿಂದ ಆಟಗಾರರು ಪೆವಿಲಿಯನ್​ಗೆ ತೆರಳಿದ್ದಾರೆ. 9:35ರೊಳಗೆ ಪಂದ್ಯ ಆರಂಭವಾಗದಿದ್ದರೆ ಓವರ್​ಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ.

  • 28 May 2023 09:06 PM (IST)

    ಅಹಮದಾಬಾದ್‌ನಲ್ಲಿ ಮಳೆ ನಿಂತಿದೆ

    ಅಹಮದಾಬಾದ್‌ನಲ್ಲಿ ಮಳೆ ನಿಂತಿದ್ದು ಪಿಚ್ ಮೇಲೆ ಹೊದಿಸಲಾಗಿದ್ದ ಕವರ್​ಗಳನ್ನು ತೆಗೆಯಲಾಗಿದೆ.

  • 28 May 2023 08:25 PM (IST)

    ಮಳೆ ಮತ್ತೆ ಆರಂಭ

    ಅಹಮದಾಬಾದ್‌ನಲ್ಲಿ ಎಡಬಿಡದೆ ಮಳೆಯಾಗುತ್ತಿದೆ. 9.35ರೊಳಗೆ ಪಂದ್ಯ ಆರಂಭವಾದರೆ ಓವರ್‌ಗಳನ್ನು ಕಡಿತಗೊಳಿಸುವುದಿಲ್ಲ.

  • 28 May 2023 07:00 PM (IST)

    ಅಹಮದಾಬಾದ್‌ನಲ್ಲಿ ಭಾರೀ ಮಳೆ

    ಟಾಸ್‌ಗೂ ಮುನ್ನವೇ ಅಹಮದಾಬಾದ್‌ನಲ್ಲಿ ವಾತಾವರಣ ಹದಗೆಟ್ಟಿದೆ. ಜೋರು ಮಳೆ ಶುರುವಾಗಿದೆ.

  • 28 May 2023 05:31 PM (IST)

    ಇದೇ ದಿನ ಫೈನಲ್ ಗೆದ್ದಿದ್ದ ಚೆನ್ನೈ

    ನಿಖರವಾಗಿ 12 ವರ್ಷಗಳ ಹಿಂದೆ, ಈ ದಿನ ಅಂದರೆ 28 ಮೇ 2011 ರಂದು, ಚೆನ್ನೈ ತನ್ನ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 12 ವರ್ಷಗಳ ಹಿಂದೆ ಚೆನ್ನೈ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಚಾಂಪಿಯನ್​ ಪಟ್ಟಕ್ಕೇರಿತ್ತು.

  • 28 May 2023 04:51 PM (IST)

    ಫೈನಲ್‌ಗೆ ಮಳೆ ಕಾಟ

    ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಅಹಮದಾಬಾದ್​ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ವಿಲನ್ ಆಗುವ ಸಾಧ್ಯತೆಗಳಿವೆ.

Published On - 4:46 pm, Sun, 28 May 23

Follow us on