GT vs MI, IPL 2023: ಐಪಿಎಲ್​ನಲ್ಲಿಂದು ದಿಗ್ಗಜರ ಕಾಳಗ: ಗುಜರಾತ್-ಮುಂಬೈ ನಡುವೆ ಹೈವೋಲ್ಟೇಜ್ ಪಂದ್ಯ

|

Updated on: Apr 25, 2023 | 10:48 AM

Gujarat vs Mumbai: ಐಪಿಎಲ್​ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿದೆ.

GT vs MI, IPL 2023: ಐಪಿಎಲ್​ನಲ್ಲಿಂದು ದಿಗ್ಗಜರ ಕಾಳಗ: ಗುಜರಾತ್-ಮುಂಬೈ ನಡುವೆ ಹೈವೋಲ್ಟೇಜ್ ಪಂದ್ಯ
GT vs MI IPL 2023
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಮಹತ್ವದ ಪಂದ್ಯ ನಡೆಯಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (GT vs MI) ಮುಖಾಮುಖಿ ಆಗಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಜಿಟಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು, ಎರಡು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಆಡಿದ ಆರು ಪಂದ್ಯಗಳಲ್ಲಿ ತಲಾ ಮೂರರಲ್ಲಿ ಸೋಲು-ಗೆಲುವು ಕಂಡು ಏಳನೇ ಸ್ಥಾನಲ್ಲಿದೆ. ಪಾಯಿಂಟ್ ಟೇಬಲ್​ನಲ್ಲಿ ಮೇಲಕ್ಕೇರಲು ಉಭಯ ತಂಡಗಳಿಗೆ ಗೆಲುವು ಅನಿವಾರ್ಯ.

ಗುಜರಾತ್:

ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಜಿಟಿ ತಂಡದ ಪ್ಲೇಯರ್ಸ್ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಉತ್ತಮ ರನ್​ರೇಟ್ ಕೂಡ ಹೊಂದಿದೆ. ನಾಯಕ ಹಾರ್ದಿಕ್ ಪಾಂಡ್ಯ ಲಯಕಂಡುಕೊಂಡಿರುವುದು ದೊಡ್ಡ ಪ್ಲಸ್ ಪಾಯಿಂಟ್. ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್ ಪ್ರತಿ ಪಂದ್ಯದಲ್ಲಿ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಅಭಿನವ್ ಮನೋಹರ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಸಾಯಿ ಸುದರ್ಶನ್ ಆಡುವ ಬಳಗಕ್ಕೆ ಕಮ್​ಬ್ಯಾಕ್ ಮಾಡಬಹುದು. ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಫಿನಿಶರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಶಮಿ, ಅಲ್ಜರಿ ಜೋಸೆಫ್, ಜೋಶ್ವಾ ಲಿಟಲ್, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ಮಾರಕವಾಗಿದ್ದಾರೆ.

IPL 2023: RCB ತಂಡದಲ್ಲಿ 3 ಬ್ಯಾಟ್ಸ್​ಮನ್​, ಒಬ್ಬ ಬೌಲರ್ ಮತ್ತು 7 ಫೀಲ್ಡರ್​ಗಳು..!

ಇದನ್ನೂ ಓದಿ
IPL 2023: ಈ ಸಲ ಪಕ್ಕಾ RCB ಫೈನಲ್​ ಆಡಲಿದೆಯಂತೆ..!
IPL 2023: ವಿರಾಟ್ ಕೊಹ್ಲಿಗೆ 24 ಲಕ್ಷ ರೂ. ದಂಡ: ಬ್ಯಾನ್ ಭೀತಿಯಲ್ಲಿ RCB ನಾಯಕ..!
IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಪ್ರಮುಖ ವೇಗಿ ಕಂಬ್ಯಾಕ್..!
Suryakumar Yadav: ಸ್ಪೋಟಕ ಬ್ಯಾಟಿಂಗ್​ ಮೂಲಕ ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಮುಂಬೈ:

ಮುಂಬೈ ಆರಂಭದ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಬಳಿಕ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಸೋತಿತ್ತು. ಆದರೆ, ಸೂರ್ಯಕುಮಾರ್ ಯಾದವ್ ಫಾರ್ಮ್​ಗೆ ಬಂದಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಕ್ಯಾಮ್ರೋನ್ ಗ್ರೀನ್ ಕಡೆಯಿಂದ ಕೂಡ ಉತ್ತಮ ಆಟ ಬರುತ್ತಿದೆ. ರೋಹಿತ್-ಕಿಶನ್ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ತಿಲಕ್ ವರ್ಮಾ, ಟಿಮ್ ಡೇವಿಡ್ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ದುಬಾರಿ ಆಗಿರುವ ಅರ್ಜುನ್ ತೆಂಡೂಲ್ಕರ್​ಗೆ ಇಂದಿನ ಪಂದ್ಯದಲ್ಲಿ ಸ್ಥಾನ ಸಿಗುತ್ತಾ ನೋಡಬೇಕಿದೆ. ಡ್ಯೂಯೆನ್ ಜಾನ್ಸೆನ್, ರಿಲೆ ಮೆರೆಡಿತ್, ಹೃತಿಕ್ ಶೋಕೀನ್ ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್​ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ.

ಗುಜರಾತ್ ತಂಡ: ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್, ಯಶ್ ದಯಾಳ್, ಅಲ್ಜರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ಯಾಮ್ರೋನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಡ್ಯೂಯೆನ್ ಜಾನ್ಸೆನ್, ಪಿಯೂಷ್ ಚಾವ್ಲಾ, ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ವಿಷ್ಣು ವಿನೋದ್, ಕುಮಾರ್ ಕಾರ್ತಿಕೇಯ, ಅರ್ಷದ್ ಖಾನ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ಜೋಫ್ರಾ ಆರ್ಚರ್, ಶಮ್ಸ್ ಮುಲಾನಿ, ಆಕಾಶ್ ಮಧ್ವಲ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 am, Tue, 25 April 23