ಟಿ20 ಕ್ರಿಕೆಟ್ ವೃತ್ತಿ ಜೀವನದಲ್ಲೇ ತನ್ನ ಅತ್ಯುತ್ತಮ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ (Virat Kohli) ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವನ್ನು (India vs Pakistan) ಗೆಲ್ಲಿಸಿಕೊಟ್ಟರು. ಇವರಿಗೆ ಸಾಥ್ ನೀಡಿದ್ದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. 6.1 ಓವರ್ಗೆ 4 ವಿಕೆಟ್ ಕಳೆದುಕೊಂಡು ಕೇವಲ 31 ರನ್ ಕಲೆಹಾಕಿದ್ದ ಟೀಮ್ ಇಂಡಿಯಾ ಗೆಲುವು ಸಾಧಿಸುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ಇದನ್ನೇ ಹೇಳಿದರು. ಆದರೆ, ಐದನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿ ಕೊನೆಯ ಓವರ್ ವರೆಗೂ ಕ್ರೀಸ್ನಲ್ಲಿದ್ದು ಶತಕದ ಜೊತೆಯಾಟ ಆಡಿದರು.
ಹಾರ್ದಿಕ್ 20ನೇ ಓವರ್ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಹೊಡೆಯಲು ಹೋಗಿ ಔಟಾದರು. 37 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್ನೊಂದಿಗೆ 40 ರನ್ ಕಲೆಹಾಕಿದ ಪಾಂಡ್ಯ ತಂಡದ ಗೆಲುವಿಗೆ ಮುಖ್ಯ ಕೊಡುಗೆ ನೀಡಿದರು. ಭಾರತ ರೋಚಕ ಜಯ ಸಾಧಿಸಿದಾಗ ಮಾತನಾಡಿದ ಹಾರ್ದಿಕ್ ಭಾವುಕರಾದ ಘಟನೆ ನಡೆದಿದೆ. ನನ್ನ ತಂದೆ ಈ ಸಂದರ್ಭ ಇದ್ದಿದ್ದರೆ ಇದನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದರು ಎಂದು ಕಣ್ಣೀರಿಟ್ಟರು.
”ನಾನು ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ನಾನು ಅಳುತ್ತಿರುವುದು ತಂದೆ ಇಲ್ಲ ಎಂಬ ಕಾರಣಕ್ಕೆ ಅಲ್ಲ. ನಾನು ನನ್ನ ಮಗನನ್ನು ತುಂಬಾ ಪ್ರೀತಿಸುತ್ತೇನೆ. ನನಗೆ ನನ್ನ ತಂದೆ ಏನೆಲ್ಲ ಮಾಡಿದರೊ ಅದನ್ನು ನಾನು ನನ್ನ ಮಗನಿಗೆ ಮಾಡುವೆನೋ ಗೊತ್ತಿಲ್ಲ. ಆರುವರೆ ವರ್ಷದ ಹುಡುಗನ ಕನಸಿಗೋಸ್ಕರ ಅವರು ಅಂದು ಸಿಟಿಯನ್ನು ಬಿಟ್ಟು ತೆರಳಿದರು. ಆದರೆ, ನಾನು ಇಂದು ಏನು ಮಾಡುತ್ತಿದ್ದೇನೆ ಅವರಿಗೆ ತಿಳಿದಿಲ್ಲ. ಇಂದಿನ ಈ ಆಟ, ಗೆಲುವು ಅವರಿಗೆ ಅರ್ಪಿಸುತ್ತೇನೆ,” ಎಂದು ಹಾರ್ದಿಕ್ ಹೇಳಿದ್ದಾರೆ.
Hardik Pandya my men! u really played well today….Your father is happy in heaven!?? #INDvPAK #INDvsPAK2022 #HardikPandya #ViratKohli? pic.twitter.com/8zogKPaqZm
— Info Chachaji (@ChachajiInfo) October 23, 2022
ಹಾರ್ದಿಕ್ ಪಾಂಡ್ಯ ದಾಖಲೆ:
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆ ಕೂಡ ಮಾಡಿದ್ದಾರೆ. ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಇದೀಗ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ 1,000 ರನ್ ಗಳಿಸಿದ ಹಾಗೂ 50 ವಿಕೆಟ್ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡರು. ಸದ್ಯ ಹಾರ್ದಿಕ್ ಭಾರತ ಪರ 74 ಟಿ20 ಪಂದ್ಯಗಳಲ್ಲಿ 1029 ರನ್ ಮತ್ತು 50 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಏಳನೇ ಆಟಗಾರನಾಗಿದ್ದಾರೆ.
ಭಾರತದ ಮುಂದಿನ ಪಂದ್ಯ:
ಪಾಕಿಸ್ತಾನ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿದ ಬಳಿಕ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದೀಗ ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ. ಅಕ್ಟೋಬರ್ 27 ರಂದು ಭಾರತ ತಂಡ ನೆದರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆಯೋಜಿಸಲಾಗಿದೆ. ಸದ್ಯ ಭಾರತ ಆಡಿರುವ ಒಂದು ಪಂದ್ಯದಲ್ಲಿ ಅದನ್ನು ಗೆದ್ದು 2 ಅಂಕದೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ಸೋತ ಪಾಕಿಸ್ತಾನ ಕೊನೆಯ ಸ್ಥಾನದಲ್ಲಿದ್ದು, ಅಕ್ಟೋಬರ್ 27 ರಂದು ಜಿಂಬಾಬ್ವೆ ವಿರುದ್ಧ ತನ್ನ ಎರಡನೇ ಪಂದ್ಯ ಆಡಲಿದೆ.
Published On - 8:55 am, Mon, 24 October 22