Hardik Pandya: 5 ಕೋಟಿ ರೂ. ವಾಚ್ ಏರ್ಪೋರ್ಟ್​ನಲ್ಲಿ ಜಪ್ತಿ: ಟ್ವಿಟ್ಟರ್​ನಲ್ಲಿ ಖಡಕ್ ಆಗಿ ಸ್ಪಷ್ಟನೆ ಕೊಟ್ಟ ಹಾರ್ದಿಕ್ ಪಾಂಡ್ಯ

| Updated By: Vinay Bhat

Updated on: Nov 16, 2021 | 10:19 AM

Hardik Pandya Watch: ಹಾರ್ದಿಕ್ ಪಾಂಡ್ಯ ಅವರಿಂದ 5 ಕೋಟಿ ಮೌಲ್ಯದ 2 ವಾಚ್‌ಗಳನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ಎಂಬೊತ್ತಿಗೆ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Hardik Pandya: 5 ಕೋಟಿ ರೂ. ವಾಚ್ ಏರ್ಪೋರ್ಟ್​ನಲ್ಲಿ ಜಪ್ತಿ: ಟ್ವಿಟ್ಟರ್​ನಲ್ಲಿ ಖಡಕ್ ಆಗಿ ಸ್ಪಷ್ಟನೆ ಕೊಟ್ಟ ಹಾರ್ದಿಕ್ ಪಾಂಡ್ಯ
Hardik Pandya
Follow us on

ಕಳೆದೊಂದು ವರ್ಷಗಳಿಂದ ಫಾರ್ಮ್​ ಸಮಸ್ಯೆ ಎದುರಿಸುತ್ತಿರು ಹಾರ್ದಿಕ್ ಪಾಂಡ್ಯ (Hardik Pandya) ಕ್ರಿಕೆಟ್ ಆಚೆಗೂ ಸಾಕಷ್ಟು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಇಕ್ಕಟ್ಟಿನಲ್ಲಿ ಸಿಲುಕಿರುವ ಟೀಮ್ ಇಂಡಿಯಾ (Team India) ಆಲ್ರೌಂಡರ್ ಐದು ಕೋಟಿ ರೂಪಾಯಿ ಎರಡು ವಾಚನ್ನು (Hardik Pandya Watch) ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು (Customer Department) ವಶಪಡಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಭಾನುವಾರ (ನವೆಂಬರ್ 14) ತಡರಾತ್ರಿ ಪಾಂಡ್ಯ ಭಾರತಕ್ಕೆ ಆಗಮಿಸಿದಾಗ ಕಸ್ಟಮ್ಸ್ ಇಲಾಖೆಯಿಂದ 5 ಕೋಟಿ ಮೌಲ್ಯದ ಎರಡು ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾರ್ದಿಕ್ ಪಾಂಡ್ಯ ಅವರಿಂದ 5 ಕೋಟಿ ಮೌಲ್ಯದ 2 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಅವುಗಳನ್ನು ಜಪ್ತಿ ಮಾಡಿವೆ ಎಂಬ ಸುದ್ದಿ ಕೇಳಿಬಂದಿದೆ.

ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ಎಂಬೊತ್ತಿಗೆ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಕುರಿತು ವಿಚಾರ ಹಂಚಿಕೊಂಡಿರುವ ಪಾಂಡ್ಯ, “ವಾಚ್ ಜಪ್ತಿ ಮಾಡಿಲ್ಲ.ನಾನೇ ಕಸ್ಟಮ್ಸ್ ಆಫೀಸಿಗೆ ತೆರಳಿ ವಾಚ್ ಖರೀದಿಸಿದ ಬಗ್ಗೆ ಮಾಹಿತಿ ನೀಡಿದೆ. ಐದು ಕೋಟಿಯ ವಾಚ್ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದು ಸುಳ್ಳು. ಅಸಲಿಗೆ ವಾಚ್ ಮೌಲ್ಯ ಒಂದೂವರೆ ಕೋಟಿ” ಎಂದು ಪಾಂಡ್ಯ ಬರೆದುಕೊಂಡಿದ್ದಾರೆ. “ನಾನು ಕಾನೂನನ್ನು ಪಾಲಿಸುವ ವ್ಯಕ್ತಿ. ಮುಂಬೈ ಕಸ್ಟಮ್ಸ್ ಇಲಾಖೆಯಿಂದ ನನಗೆ ಎಲ್ಲ ಬೆಂಬಲ ಸಿಕ್ಕಿದೆ. ಈ ವಿಚಾರಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಅವರಿಗೆ ನಾನು ನೀಡುತ್ತೇನೆ” ಎಂದು ಪಾಂಡ್ಯ ಹೇಳಿದ್ದಾರೆ.

 

ಹಾರ್ದಿಕ್ ಪಾಂಡ್ಯ ದುಬಾರಿ ವಾಚ್‌ಗಳನ್ನು ತುಂಬಾ ಇಷ್ಟಪಡುತ್ತಾರೆ. ಐಪಿಎಲ್ 2021 ರ ಸಮಯದಲ್ಲಿ, ಈ ಆಟಗಾರ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ವಾಚ್ ಅನ್ನು ಧರಿಸಿದ್ದರು. ಇದು 50 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ ಎನ್ನಲಾಗಿತ್ತು. ಜಗತ್ತಿನಲ್ಲಿ ಕೆಲವೇ ಜನರು ಇಂತಹ ಗಡಿಯಾರಗಳನ್ನು ಧರಿಸುತ್ತಾರೆ. ಅಂತೆಯೆ 2019 ರಲ್ಲಿ, ಹಾರ್ದಿಕ್ ಪಾಂಡ್ಯ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಮತ್ತು ಕೈಯಲ್ಲಿ ಚಿನ್ನದ ಗಡಿಯಾರವನ್ನು ಹೊಂದಿರುವ ಚಿತ್ರವನ್ನು ಹಂಚಿಕೊಂಡಿದ್ದರು.

ಇನ್ನು ಕಳೆದ ವರ್ಷವಷ್ಟೇ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಕೂಡ ಏರ್‌ಪೋರ್ಟ್‌ನಲ್ಲಿ ತಪಾಸಣೆಗೊಳಪಟ್ಟಿದ್ದರು. ಕೃನಾಲ್ ಕೂಡ ದುಬಾರಿ ವಾಚ್‌ಗಳ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಲಕ್ಷಗಟ್ಟಲೆ ಮೌಲ್ಯದ ವಾಚ್‌ಗಳ ಮಾಹಿತಿಯನ್ನು ಅವರು ಕಸ್ಟಮ್ಸ್ ಇಲಾಖೆಯೊಂದಿಗೆ ಹಂಚಿಕೊಂಡಿಲ್ಲದ ಕಾರಣ ನೀಡಿ ನಂತರ ಅವುಗಳನ್ನು ಜಪ್ತಿ ಮಾಡಲಾಗಿತ್ತು.

Yuzvendra Chahal: ಟಿ20 ವಿಶ್ವಕಪ್​ಗೆ ಆಯ್ಕೆಯಾಗದ ಬಗ್ಗೆ ಮೌನ ಮುರಿದ ಯುಜ್ವೇಂದ್ರ ಚಹಾಲ್: ಏನಂದ್ರು ಗೊತ್ತೇ?

Shoaib Akhtar: ಕಾಲಿನ ಶೂನಿಂದ ಬಿಯರ್ ಕುಡಿದು ಆಸೀಸ್‌ ಆಟಗಾರರ ಸೆಲೆಬ್ರೇಷನ್ ಕಂಡು ಅಸಹ್ಯ ಎಂದ ಅಖ್ತರ್‌

(Hardik Pandya issues statement after wwatches being seized at Mumbai airport)