Shoaib Akhtar: ಕಾಲಿನ ಶೂನಿಂದ ಬಿಯರ್ ಕುಡಿದು ಆಸೀಸ್‌ ಆಟಗಾರರ ಸೆಲೆಬ್ರೇಷನ್ ಕಂಡು ಅಸಹ್ಯ ಎಂದ ಅಖ್ತರ್‌

Shoaib Akhtar: ಕಾಲಿನ ಶೂನಿಂದ ಬಿಯರ್ ಕುಡಿದು ಆಸೀಸ್‌ ಆಟಗಾರರ ಸೆಲೆಬ್ರೇಷನ್ ಕಂಡು ಅಸಹ್ಯ ಎಂದ ಅಖ್ತರ್‌
Australian players drinking beer and Shoaib Akhtar

Drinking beer from Shoe: ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್‌ ರೂಂನಲ್ಲೂ ಆಸೀಸ್‌ ಆಟಗಾರರು ತಮ್ಮ ಶೂಗಳಲ್ಲಿ ಬಿಯರ್ ಹಾಕಿಕೊಂಡು ಕುಡಿದುಬಿಟ್ಟರು. ಶೋಯೆಬ್ ಅಖ್ತರ್ ಟಿ20 ವಿಶ್ವಕಪ್ ವಿಜಯವನ್ನು ಆಚರಿಸುವ ಆಸ್ಟ್ರೇಲಿಯಾದ ವಿಧಾನವನ್ನು ಅಸಹ್ಯಕರ ಎಂದು ಬಣ್ಣಿಸಿದ್ದಾರೆ.

TV9kannada Web Team

| Edited By: Vinay Bhat

Nov 16, 2021 | 8:14 AM

ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand vs Australiaa) ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿಯಾಗಿದೆ. ಐಸಿಸಿ ಟೋಫ್ರಿಗಳನ್ನೆಲ್ಲಾ ಬಾಜಿಕೊಂಡಿದ್ದ ಕಾಂಗರೂ ರಾಷ್ಟ್ರಕ್ಕೆ ಟಿ20 ವಿಶ್ವಕಪ್ ಟ್ರೋಫಿ ಮಾತ್ರ ಇದುವರೆಗೂ ದಕ್ಕಿರಲಿಲ್ಲ. ಆದರೆ ಕಡೆಗೂ ಆ್ಯರೋನ್ ಫಿಂಚ್ (Aaron Finch) ನೇತೃತ್ವದ ತಂಡವು ಟಿ20 ವಿಶ್ವಕಪ್ ಗೆದ್ದುಬೀಗಿತು. ಆಸ್ಟ್ರೇಲಿಯಾ ಈ ಕಪ್ ಗೆಲ್ಲುವ ಮೂಲಕ ಬರೋಬ್ಬರಿ ಎಂಟನೆಯ ಐಸಿಸಿ ಟ್ರೋಫಿಯನ್ನ ತನ್ನದಾಗಿಸಿಕೊಂಡಿತು. ಚೊಚ್ಚಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಎತ್ತಿಹಿಡಿದು (Australia the new T20 World Cup champions) ಐತಿಹಾಸಿಕ ಸಾಧನೆ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು ರಾತ್ರಿಯಿಡೀ ಭರ್ಜರಿ ಪಾರ್ಟಿ ಮಾಡಿದ್ದಾರೆ. ಗೆದ್ದ ಖುಷಿಯಲ್ಲಿದ್ದ ಆಟಗಾರರು ಶೂನಿಂದ ಬಿಯರ್ ಕುಡಿದು (Drinking beer from Shoe) ಮಜಾ ಮಾಡಿದ್ದಾರೆ. ಈ ದೃಶ್ಯಗಳ ವಿಡಿಯೋವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC- ಐಸಿಸಿ) ಇಂದು ಸೋಮವಾರ ತನ್ನ ಸೋಲಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್‌ ರೂಂನಲ್ಲೂ ಆಸೀಸ್‌ ಆಟಗಾರರು ಹಾಡನ್ನು ಹೇಳುತ್ತಾ, ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಈ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಮತ್ತು ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್ ಸಂಭ್ರಮಾಚರಣೆ ಒಂದು ಹಂತವನ್ನು ಮೀರಿದ್ದು, ನೋಡುಗರನ್ನ ಅಚ್ಚರಿಗೊಳಿಸಿತು. ಇವರಿಬ್ಬರು ತಮ್ಮದೇ ಶೂಗಳಲ್ಲಿ ಬಿಯರ್ ಹಾಕಿಕೊಂಡು ಕುಡಿದುಬಿಟ್ಟರು. ಇದು ನೋಡುಗರಿಗೆ ಆಶ್ಚರ್ಯ ಮೂಡಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರ ತೀವ್ರ ಟೀಕೆಗೆ ಗುರಿಯಾಯಿತು.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಟಿ20 ವಿಶ್ವಕಪ್ ವಿಜಯವನ್ನು ಆಚರಿಸುವ ಆಸ್ಟ್ರೇಲಿಯಾದ ವಿಧಾನವನ್ನು ಸ್ವಲ್ಪ ಅಸಹ್ಯಕರ ಎಂದು ಬಣ್ಣಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆ ಮೂಲಕ ಹಂಚಿಕೊಂಡಿರುವ ಅಖ್ತರ್‌, “ಈ ರೀತಿಯ ಸಂಭ್ರಮ ಅತ್ಯಂತ ಅಸಹ್ಯಕರವಾದದ್ದು ಅಲ್ಲವೆ?” ಎಂದು ತಮ್ಮ ಟ್ವಿಟರ್‌ ಗೋಡೆಯ ಮೇಲೆ ಬರೆದಿದ್ದಾರೆ.

ಅಷ್ಟಕ್ಕು ಶೂನಿಂದ ಡ್ರಿಂಕ್ಸ್ ಕುಡಿಯುವುದು ಆಸ್ಟ್ರೇಲಿಯಾದ ಸಂಪ್ರದಾಯವಾಗಿದೆ. ಯಾವುದೇ ದೊಡ್ಡ ಪಾರ್ಟಿ ಇದ್ದರೆ ಆಸ್ಟ್ರೇಲಿಯಾದಲ್ಲಿ ಈ ರೀತಿ ಶೂನಿಂದ ಡ್ರಿಂಕ್ಸ್ ಕುಡಿಯುವುದು ಸಂಪ್ರದಾಯವಾಗಿ ಬಂದುಬಿಟ್ಟಿದೆ. ಇದರಿಂದ ಸಂಪತ್ತು, ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ Shoey ಎಂದು ಬಣ್ಣಿಸುತ್ತಾರೆ.

ಅಂದಹಾಗೆ ವಿಶ್ವಕಪ್‌ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡ ಆಡಿದ್ದ 5 ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿಗಳಲ್ಲಿ ಸೋತು ಸುಣ್ಣವಾಗಿತ್ತು. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುತ್ತದೆ ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಆಸೀಸ್‌, ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿತು.

IND vs NZ: ಪ್ರತಿಯೊಬ್ಬ ಆಟಗಾರನನ್ನು ಚಾಂಪಿಯನ್ ಮಾಡುವ ಕಲೆ ಗುರು ದ್ರಾವಿಡ್ ಬಳಿ ಇದೆ: ಕೆಎಲ್ ರಾಹುಲ್

(Shoaib Akhtar react Australian players drinking beer from shoes after win T20 World Cup Trophy)

Follow us on

Related Stories

Most Read Stories

Click on your DTH Provider to Add TV9 Kannada