Dinesh Karthik: ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಅವಮಾನ: ಅದು ಭಾರತೀಯ ಪ್ಲೇಯರ್​ನಿಂದಲೆ

| Updated By: Vinay Bhat

Updated on: Jun 10, 2022 | 11:11 AM

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮರಳಿದರೆ, ಕಾರ್ತಿಕ್ ಮೂರು ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಆದರೆ, ಕಾರ್ತಿಕ್​ಗೆ ಮೊದಲ ಪಂದ್ಯದಲ್ಲೇ ಅವಮಾನವಾಯಿತು. ಅದುಕೂಡ ಭಾರತೀಯ ಆಟಗಾರನಿಂದಲೇ.

Dinesh Karthik: ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಅವಮಾನ: ಅದು ಭಾರತೀಯ ಪ್ಲೇಯರ್​ನಿಂದಲೆ
Hardik Pandya and Karthik IND vs SA
Follow us on

ಗುರುವಾರ ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಭಾರತ (India vs South Africa) ತಂಡ ದೊಡ್ಡ ಮೊತ್ತ ಕಲೆಹಾಕಿಯೂ ಸೋಲು ಕಂಡಿತು. ಬ್ಯಾಟರ್​ಗಳು ನಿರೀಕ್ಷೆಗೆ ತಕ್ಕಂತೆ ಆಡಿ ಬಿಗ್ ಟಾರ್ಗೆಟ್ ನೀಡಿದರೂ, ಬೌಲರ್​ಗಳು ಎದುರಾಳಿ ಬ್ಯಾಟರ್​ಗಳನ್ನು ಕಟ್ಟಿ ಹಾಕಲು ಸಂಪೂರ್ಣ ವಿಫಲರಾದರು. ಭಾರತೀಯ ಬೌಲಿಂಗ್ ಪಡೆ ಅನೇಕರ ಕೆಂಗಣ್ಣಿಗೆ ಗುರಿಯಾದರೂ ಬ್ಯಾಟರ್​ಗಳು ನೀಡಿದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಅನುಭವಿ ಹಿರಿಯ ಆಟಗಾರರ ಅಲಭ್ಯತೆ ನಡುವೆ ಹರಿಣಗಳ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದರು. ಈ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ಕೂಡ ಟೀಮ್ ಇಂಡಿಯಾಕ್ಕೆ ಮತ್ತೆ ಕಮ್​ಬ್ಯಾಕ್ ಮಾಡಿದರು. ಆದರೆ, ಕಾರ್ತಿಕ್​ಗೆ ಮೊದಲ ಪಂದ್ಯದಲ್ಲೇ ಅವಮಾನವಾಯಿತು. ಅದುಕೂಡ ಭಾರತೀಯ ಆಟಗಾರನಿಂದಲೇ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಹೌದು, ಈ ಪಂದ್ಯದ ಮೂಲಕ ಹಾರ್ದಿಕ್ ಟಿ20 ವಿಶ್ವಕಪ್ ಬಳಿಕ ಭಾರತ ತಂಡಕ್ಕೆ ಮರಳಿದರೆ, ಕಾರ್ತಿಕ್ ಮೂರು ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಐಪಿಎಲ್​ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದ ಇವರಿಬ್ಬರಿಗೆ ಈ ಅವಕಾಶ ಬಂದೊದಗಿತು. ಭಾರತ ಈ ಪಂದ್ಯದಲ್ಲಿ 20 ಓವರ್​ಗೆ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಕೇವಲ 12 ಎಸೆತಗಳಲ್ಲಿ ಅಜೇಯ 31 ರನ್ ಚಚ್ಚಿದರು. ಕಾರ್ತಿಕ್ ಅವರು ಕೊನೆಯ ಓವರ್​ನಲ್ಲಿ ಕ್ರೀಸ್​ಗೆ ಬಂದರು. ಇದು ಕಾರ್ತಿಕ್ ಅವರಿಗೆ ಹೇಳಿ ಮಾಡಿದ ಓವರ್. ಆದರೆ, ಪಾಂಡ್ಯ ನಡೆದುಕೊಂಡ ರೀತಿ ಇದೀಗ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ
Exclusive: ಇದು ಭಾರತೀಯ ಕ್ರಿಕೆಟ್ ತಲೆತಗ್ಗಿಸುವಂತಹ ಸುದ್ದಿ: ಇಲ್ಲಿದೆ ಉತ್ತರಖಂಡ ಕ್ರಿಕೆಟ್​ನ ಕರ್ಮಕಾಂಡ
IND vs SA: ವಿಶ್ವದ ದಾಖಲೆ ನಿರ್ಮಿಸುವ ಟೀಮ್ ಇಂಡಿಯಾ ಕನಸು ನುಚ್ಚುನೂರು ಮಾಡಿದ ಆಫ್ರಿಕಾನ್ನರು
IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!
Virat Kohli: ಲಯ ತಪ್ಪಿದ ಕೊಹ್ಲಿಯ ಮುಂದೆ ಬಾಬರ್​ನ ಆರ್ಭಟ..!

 

20ನೇ ಓವರ್​ನ ಆನ್ರಿಚ್ ನಾರ್ಟ್ಜೆ ಅವರ ಮೂರನೇ ಎಸೆತದಲ್ಲಿ ಕಾರ್ತಿಕ್ ಸಿಂಗಲ್ ತೆಗೆದು, ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಸಿಕ್ಸ್ ಸಿಡಿಸಿದರು. ಐದನೇ ಎಸೆತದಲ್ಲಿ ಪಾಂಡ್ಯ ಸಿಕ್ಸ್ ಸಿಡಿಸಲು ಸಾಧ್ಯವಾಗದೆ ಡೀಪ್ ಮಿಡ್ ವಿಕೆಟ್ ಕಡೆ ಚೆಂಡನ್ನು ಅಟ್ಟಿದರು. ಆದರೆ, ಈ ಬಾಲ್​ನಲ್ಲಿ ಅವರು ಸಿಂಗಲ್ ರನ್ ಕೂಡ ಪಡೆದುಕೊಳ್ಳಲಿಲ್ಲ. ಕಾರ್ತಿಕ್ ಅತ್ತ ಕಡೆಯಿಂದ ರನ್​ಗೆಂದು ಓಡಿ ಬಂದರೂ ಪಾಂಡ್ಯ ಬೇಡ ಎಂದು ತಡೆದರು. ಹಾರ್ದಿಕ್​ಗಿಂತ ಅಪಾರ ಅನುಭವ ಹೊಂದಿರುವ ಕಾರ್ತಿಕ್​ ಅವರಿಗೆ ಸ್ಟ್ರೈಕ್​ ಕೊಡದೆ ತಾನೇ ಬ್ಯಾಟಿಂಗ್ ಮಾಡುತ್ತೇನೆ ಎಂದು ಹಾರ್ದಿಕ್ ವರ್ತಿಸಿದ್ದು ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ಕೂಡ ಮಾತನಾಡಿದ್ದು ಹಾರ್ದಿಕ್ ನಡೆಯನ್ನು ಕಂಡಿಸಿದ್ದಾರೆ. “ನಾನ್ ಸ್ಟ್ರೈಕರ್​​ನಲ್ಲಿ ಇದ್ದಿದ್ದು ನಾನಲ್ಲ, ಅಲ್ಲಿ ಇದ್ದಿದ್ದು ದಿನೇಶ್ ಕಾರ್ತಿಕ್. ಅವರು ಸಿಂಗಲ್ ರನ್ ಗಳಿಸಬಹುದಿತ್ತು,” ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸಿ ವನ್ ಡರ್ ಡುಸೆನ್ (75*ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (64*ರನ್, 31ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಶರಣಾಯಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಸತತ 13ನೇ ಜಯದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ದೊಡ್ಡ ಆಘಾತ ಉಂಟಾಯಿತು. ಎರಡನೇ ಟಿ20 ಪಂದ್ಯ ಜೂ. 12 ಭಾನುವಾರದಂದು ನಡೆಯಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:11 am, Fri, 10 June 22