ಟಿ20 ವಿಶ್ವಕಪ್ನೊಂದಿಗೆ (T20 World Cup 2024) ಭಾರತ ತಂಡ ದೆಹಲಿಗೆ ಆಗಮಿಸಿದೆ. ಬುಧವಾರ ಬಾರ್ಬಡೋಸ್ನಿಂದ ಏರ್ ಇಂಡಿಯಾ ಚಾರ್ಟರ್ಡ್ ವಿಮಾನದಲ್ಲಿ ಹೊರಟಿದ್ದ ಟೀಮ್ ಇಂಡಿಯಾ ಆಟಗಾರರು ಇಂದು (ಜೂ.4) ಮುಂಜಾನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ವಿಮಾನ ನಿಲ್ದಾಣದಿಂದ ವಿಶೇಷ ಬಸ್ನಲ್ಲಿ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ತೆರಳಿದರು. ಈ ವೇಳೆ ವಿಶ್ವ ಚಾಂಪಿಯನ್ನರನ್ನು ಸ್ವಾಗತಿಸಲು ಡೋಲು ಡಂಗುರದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಇತ್ತ ಬಸ್ನಿಂದ ಟೀಮ್ ಇಂಡಿಯಾ ಆಟಗಾರರು ಇಳಿಯುತ್ತಿದ್ದಂತೆ ಡೋಲು ಬಜಾನ ಶುರುವಾಗಿದೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಕುಣಿಯಲಾರಂಭಿಸಿದರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಹಾಗೂ ಯಶಸ್ವಿ ಜೈಸ್ವಾಲ್ ಕೂಡ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದರು.
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಕುಣಿಯುತ್ತಾ ಆಗಮಿಸಿದ್ದು ವಿಶೇಷವಾಗಿತ್ತು. ಹಾಗೆಯೇ ಭಾರತ ತಂಡ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಮೊಹಮ್ಮದ್ ಸಿರಾಜ್ ಕೂಡ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು. ಇದೀಗ ಭಾರತೀಯ ಆಟಗಾರರ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
Virat Kohli smiling and Hardik Pandya dancing when they reach India with the Trophy.🥹
– THIS IS BEAUTIFUL. ❤️ pic.twitter.com/1OONnF3zzJ
— Tanuj Singh (@ImTanujSingh) July 4, 2024
Suryakumar Yadav dancing when he arrives in India with the Trophy. ❤️ pic.twitter.com/7ZtcPx36BS
— Tanuj Singh (@ImTanujSingh) July 4, 2024
Captain Rohit Sharma dancing after reaching India with the Trophy.❤️
– THE HAPPY & PROUD, CAPTAIN RO…!!!! 🏆pic.twitter.com/wbJ0L1GVYO
— Tanuj Singh (@ImTanujSingh) July 4, 2024
VIDEO | Members of #T20WorldCup winning Team India dance to dhol beats at ITC Maurya Hotel in Delhi as they arrive from Barbados.
(Source: Third party)
(Full video available on PTI Videos – https://t.co/n147TvqRQz) pic.twitter.com/4EG0K0RHqw
— Press Trust of India (@PTI_News) July 4, 2024
ಗುರುವಾರ ಸಂಜೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ವಿಜಯೋತ್ಸವ ಆಚರಿಸಲಿದೆ. ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌ನಿಂದ ಮೆರವಣಿಗೆ ಮೂಲಕ ತೆರೆದ ಬಸ್ನಲ್ಲಿ ಟೀಮ್ ಇಂಡಿಯಾ ವಾಂಖೆಡೆ ಸ್ಟೇಡಿಯಂಗೆ ಆಗಮಿಸಲಿದ್ದು, ಈ ಬಳಿಕ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!
ಈ ವಿಜಯೋತ್ಸವದ ಮೆರವಣಿಗೆಯನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲಿ ಈ ಕಾರ್ಯಕ್ರಮವನ್ನು ಲೈವ್ ವೀಕ್ಷಿಸಬಹುದು.
Published On - 9:10 am, Thu, 4 July 24