ಮೈದಾನದಲ್ಲೇ ಇಂಗ್ಲೆಂಡ್ vs ಪಾಕ್ ಆಟಗಾರರ ನಡುವೆ ಕಿತ್ತಾಟ!
ಲಾಹೋರ್ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 46.4 ಓವರ್ಗಳಲ್ಲಿ 241 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 47.1 ಓವರ್ಗಳಲ್ಲಿ 243 ರನ್ ಗಳಿಸಿ ಒಂದು ವಿಕೆಟ್‌ನ ರೋಚಕ ಜಯ ಸಾಧಿಸಿದೆ.

ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಏಕದಿನ ಸರಣಿಯ ಪಂದ್ಯವು ರಣರೋಚಕ ಹೋರಾಟಕ್ಕೆ ಮಾತ್ರವಲ್ಲದೆ, ಆಟಗಾರರ ನಡುವಿನ ತೀವ್ರ ವಾಗ್ವಾದಕ್ಕೂ ಸಾಕ್ಷಿಯಾಯಿತು. ಪಾಕಿಸ್ತಾನದ ವೇಗಿ ಹಾರಿಸ್ ರೌಫ್ ಮತ್ತು ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ನಡುವೆ ಮೈದಾನದಲ್ಲೇ ಹೈ-ವೋಲ್ಟೇಜ್ ಜಗಳ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜಗಳಕ್ಕೆ ಕಾರಣವಾಗಿದ್ದು ಏನು?
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 241 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ್ ತಂಡವು ಕೇವಲ 154 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಇದಾಗ್ಯೂ ಪಾಕಿಸ್ತಾನಕ್ಕೆ ಶಾದಾಬ್ ಖಾನ್ (ಅಜೇಯ 113 ರನ್) ಭರ್ಜರಿ ಶತಕ ಸಿಡಿಸುವ ಮೂಲಕ ಜಯದ ಆಸೆ ಚಿಗುರಿಸಿದ್ದರು.
ಇದರ ನಡುವೆ, ಅಂದರೆ 46ನೇ ಓವರ್ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರ್ರನ್ ಬೌನ್ಸರ್ ಎಸೆದರು. ಅತ್ತ ಶಾದಾಬ್ ಖಾನ್ ತಲೆಯ ಮೇಲಿಂದ ಚೆಂಡು ಹೋದರೂ ಅಂಪೈರ್ ವೈಡ್ ನೀಡಿರಲಿಲ್ಲ.
ಇದೇ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಹಾರಿಸ್ ರೌಫ್ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿದ್ದರು. ಈ ವೇಳೆ ಇಂಗ್ಲೆಂಡ್‌ನ ವಿಲ್ ಜಾಕ್ಸ್ ಅದೇನೋ ಹೇಳಿದ್ದಾರೆ. ಇದರಿಂದ ಕೋಪಗೊಂಡ ರೌಫ್ ಬ್ಯಾಟ್ ತೋರಿಸುತ್ತಾ, ಜಾಕ್ಸ್ ಜೊತೆ ಮಾತಿನ ಚಕಮಕಿಗೆ ಇಳಿದರು.
ಶಾಂತಗೊಳಿಸಿದ ಜೋ ರೂಟ್:
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ತಕ್ಷಣ ಆನ್-ಫೀಲ್ಡ್ ಅಂಪೈರ್ ಇಬ್ಬರ ಮಧ್ಯೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ಇದೇ ವೇಳೆ ಇಂಗ್ಲೆಂಡ್‌ನ ಹಿರಿಯ ಆಟಗಾರ ಜೋ ರೂಟ್ ಓಡಿ ಬಂದು ಹಾರಿಸ್ ರೌಫ್ ಅವರನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಿ ಸಮಾಧಾನಪಡಿಸುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದರು.
Sam Curran bowls a BOUNCER! Shadab Khan wants a WIDE as Umpire says NO! @TheRealPCB Haris Rauf has a verbal FIGHT with @englandcricket Will Jacks as Joe Root is the peacemaker😂 Drama in #PakistanCricket #PAKvENG https://t.co/lajM8FGfdf
— Chacha Abdul Shakoor (@ChachaAbdulSh10) October 25, 2026
ಪಂದ್ಯ ಮುಗಿದ ಮೇಲೂ ಮುಂದುವರಿದ ವಾಕ್ಸಮರ:
ಈ ಗಲಾಟೆಯ ಬೆನ್ನಲ್ಲೇ ಹಾರಿಸ್ ರೌಫ್ ನಿರ್ಣಾಯಕ ಬೌಂಡರಿ ಬಾರಿಸಿ ಪಾಕಿಸ್ತಾನ ತಂಡಕ್ಕೆ 1 ವಿಕೆಟ್‌ನ ಐತಿಹಾಸಿಕ ಜಯ ತಂದುಕೊಟ್ಟರು. ಆದರೆ, ಪಂದ್ಯ ಮುಗಿದ ನಂತರ ಇತ್ತಂಡಗಳ ಆಟಗಾರರು ಕೈಕುಲುಕುವ ವೇಳೆಯೂ ರೌಫ್ ಹಾಗೂ ವಿಲ್ ಜಾಕ್ಸ್ ನಡುವೆ ಮತ್ತೆ ಮಾತಿನ ಚಕಮಕಿ ನಡೆದು, ಇಬ್ಬರೂ ಕೋಪದಿಂದಲೇ ವಿರುದ್ಧ ದಿಕ್ಕಿನಲ್ಲಿ ನಡೆದುಹೋದರು. ಇದೀಗ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಾರಿಸ್ ರೌಫ್ ನಡೆಗೆ ಐಸಿಸಿ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.




