ಹ್ಯಾಟ್ರಿಕ್ ಗೆಲುವಿನ ಬಳಿಕ ಸೋಲಿನ ರುಚಿ ಕಂಡಿರುವ ಫಾಪ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಇಂದು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC vs RCB) ಅನ್ನು ಎದುರಿಸಲಿದೆ. ಈಗಾಗಲೇ ಆಡಿರುವ ಐದು ಪಂದ್ಯಗಳ ಪೈಕಿ ಆರ್‌ಸಿಬಿ ಚೊಚ್ಚಲ ಪಂದ್ಯದಲ್ಲಿ ಸೋಲುಂಡರೆ ಬಳಿಕ ಮೂರು ಪಂದ್ಯದಲ್ಲಿ ಜಯ ಸಾಧಿಸಿತ್ತು. ಸಿಎಸ್ಕೆ ವಿರುದ್ಧ ಆಡಿದ ಹಿಂದಿನ ಪಂದ್ಯದಲ್ಲಿ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಈ ಮ್ಯಾಚ್ನಲ್ಲಿ ಆರ್‌ಸಿಬಿ ಬೌಲರ್ಗಳು ಸಂಪೂರ್ಣ ವಿಫಲರಾದರು. ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಡುಪ್ಲೆಸಿಸ್ ಪಡೆಯ ಬೌಲರ್‌ಗಳ ಎದುರು ಸ್ಫೋಟಿಸಿದ್ದರು. ಆರ್‌ಸಿಬಿಯ ಆಪತ್ಬಾಂದವ ಹರ್ಷಲ್ ಪಟೇಲ್ (Harshal Patel) ಅನುಪಸ್ಥಿತಿ ಎದ್ದು ಕಂಡಿತು. ಸಹೋದರಿ ನಿಧನದಿಂದಾಗಿ ಕಳೆದ ಪಂದ್ಯದಲ್ಲಿ ಹರ್ಷಲ್ ಕಣಕ್ಕಿಳಿಯಲಿಲ್ಲ. ಇದೀಗ ಇವರು ತಂಡಕ್ಕೆ ಮರಳಿದ್ದಾರೆಯಾದರೂ ಇಂದು ಆಡುವುದು ಅನುಮಾನ.
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಅನುಪಸ್ಥಿತಿ ತಂಡದ ಬೌಲಿಂಗ್ ವಿಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಆರಂಭದಲ್ಲಿ ಆರ್‌ಸಿಬಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಮಧ್ಯಮ ಓವರ್ನಲ್ಲಿ ಸಾಕಷ್ಟು ರನ್ ಹರಿಬಿಟ್ಟಿತು. ಪ್ರತಿಬಾರಿ 10 ಓವರ್ ಬಳಿಕ ಬೌಲಿಂಗ್ ಮಾಡಲು ಬರುತ್ತಿದ್ದ ಹರ್ಷಲ್ ಎದುರಾಳಿಗರ ರನ್ಗೆ ಕಡಿವಾಣ ಹಾಕುತ್ತಿದ್ದರು. ಈ ಬಗ್ಗೆ ಚೆನ್ನೈ ವಿರುದ್ಧದ ಪಂದ್ಯ ಮುಗಿದ ಬಳಿಕ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಹೇಳಿದ್ದರು. ಹರ್ಷಲ್ ಪಟೇಲ್ ಅಲಭ್ಯತೆ ನಮಗೆ ದೊಡ್ಡ ಹೊಡೆತ ಬಿದ್ದಿತು ಎಂಬ ಮಾತಾಡಿದ್ದರು.
ಇದೀಗ ಡೆಲ್ಲಿ ವಿರುದ್ಧವೂ ಹರ್ಷಲ್ ಆಡುತ್ತಿಲ್ಲ ಎಂಬುದು ಆರ್‌ಸಿಬಿ ಪಾಲಿಗೆ ಮತ್ತೆ ಹಿನ್ನಡೆ ಎಂಬುದರಲ್ಲಿ ಅನುಮಾನವಿಲ್ಲ. ಇವರ ಕ್ವಾಂರೈಟನ್ ನಿಯಮ ಮುಗಿದಿಲ್ಲ ಎಂಬ ಮಾಹಿತಿಯಿದ್ದು ಇಂದು ಆಡುವುದು ಅನುಮಾನ ಎನ್ನಲಾಗುತ್ತಿದೆ. ಇವರ ಜಾಗದಲ್ಲಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಸುಯೇಶ್ ಪ್ರಭುದೇಸಾಯಿ ಭರವಸೆ ಮೂಡಿಸಿದ್ದಾರೆ. ಬ್ಯಾಟಿಂಗ್ನಲ್ಲಿ ದೊಡ್ಡ ಹೊಡೆತ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರು ಬೌಲಿಂಗ್ ಕೂಡ ಮಾಡಬಲ್ಲರು. ಆದರೆ, ಕಳೆದ ಪಂದ್ಯದಲ್ಲಿ ಫಾಫ್ ಬೌಲಿಂಗ್ ಅವಕಾಶ ನೀಡರಲಿಲ್ಲ. ಹರ್ಷಲ್ ಆಡದಿದ್ದಲ್ಲಿ ಸುಯೇಶ್ ಅವರೇ ಇಂದು ಸ್ಥಾನ ಪಡೆಯಲಿದ್ದಾರೆ.
ಉಳಿದಂತೆ ಲೆಂತ್ನಲ್ಲಿ ಎಡವುತ್ತಿರುವ ಮೊಹಮ್ಮದ್ ಸಿರಾಜ್ ಪ್ರತೀ ಪಂದ್ಯದಲ್ಲೂ ದುಬಾರಿ ಆಗುತ್ತಿದ್ದಾರೆ. ಆಕಾಶ್ ದೀಪ್ ಚೆನ್ನಾಗಿ ದಂಡಿಸಿ ಕೊಂಡಿದ್ದಾರೆ. ಹರ್ಷಲ್ ಆಡಿದರೆ ಆಕಾಶ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಹ್ಯಾಝಲ್‌ವುಡ್ ಇನ್ನಷ್ಟೇ ಅಪಾಯಕಾರಿಯಾಗಿ ಗೋಚರಿಸಬೇಕಿದೆ. ಮ್ಯಾಕ್ಸ್‌ವೆಲ್ ಕೇವಲ ಬದಲಿ ಬೌಲರ್, ಇವರಿಂದ ಮ್ಯಾಜಿಕ್ ನಿರೀಕ್ಷಿಸುವಂತಿಲ್ಲ. ಸ್ಪಿನ್ನರ್‌ಗಳಾದ ಶಬಾಜ್ ಅಹ್ಮದ್ ಮತ್ತು ವನಿಂದು ಹಸರಂಗ ಡೆಲ್ಲಿಗೆ ನಿಯಂತ್ರಣ ಹೇರಬೇಕಾದ ಒತ್ತಡಲ್ಲಿದ್ದಾರೆ. ಒಟ್ಟಾರೆ ಹೇಳುವುದಾದರೆ ಆರ್‌ಸಿಬಿಯ ಬೌಲಿಂಗ್ ವಿಭಾಗ ಇನ್ನಷ್ಟು ಅಪಾಯಕಾರಿ ಆಗಲೇ ಬೇಕಾಗಿದೆ.
ಬ್ಯಾಟಿಂಗ್ನಲ್ಲಿ ನಾಯಕ ಫಾಫ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅನುಜ್ ರಾವತ್ ಅಂದುಕೊಂಡಂತೆ ಆಡುತ್ತಿಲ್ಲ. ಆದರೆ ಹೊಸಬ ಸುಯೇಶ್ ಪ್ರಭುದೇಸಾಯಿ, ಶಹಬಾಸ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಆಟ ಎದುರಾಳಿಯ ನಿದ್ದೆಗೆಡಿಸಿದೆ. ಆರ್‌ಸಿಬಿಯ ಟಾಪ್ ಆರ್ಡನ್ ಬ್ಯಾಟರ್ಗಳು ಕ್ಲಿಕ್ ಆದರೆ ಅಂತಿಮ ಹಂತದಲ್ಲಿ ರನ್ ಮಳೆಯನ್ನೇ ಸುರಿಸಲು ಕಾರ್ತಿಕ್ ತಯಾರಿರುತ್ತಾರೆ. ಹೀಗಾಗಿ ಬೆಂಗಳೂರು ಉತ್ತಮ ಆರಂಭ ಪಡೆದುಕೊಳ್ಳುವುದು ಮುಖ್ಯ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಭಾಝ್ ಅಹ್ಮದ್, ಸುಯಷ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್(ವಿ.ಕೀ), ಜಾಶ್ ಹ್ಯಾಝಲ್‌ವುಡ್, ವಾನಿಂದು ಹಸರಂಗ, ಅಕಾಶ್ ದೀಪ್/ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
David Warner: ವಾರ್ನರ್ ಮೈಮೇಲೆ ವೈಲೆನ್ಸ್ ರಾಕಿ ಭಾಯ್: ಆರ್‌ಸಿಬಿ ತಂಡಕ್ಕೆ ದೊಡ್ಡ ಸಿಗ್ನಲ್ ಕೊಟ್ಟ ಡೇವಿಡ್
DC vs RCB, IPL 2022: ಐಪಿಎಲ್ನಲ್ಲಿ ಡಬಲ್ ಧಮಾಕ: ಗೆಲುವಿನ ಲಯಕ್ಕೆ ಮರಳುತ್ತಾ ಆರ್‌ಸಿಬಿ?