David Warner: ವಾರ್ನರ್ ಮೈಮೇಲೆ ವೈಲೆನ್ಸ್ ರಾಕಿ ಭಾಯ್: ಆರ್ಸಿಬಿ ತಂಡಕ್ಕೆ ದೊಡ್ಡ ಸಿಗ್ನಲ್ ಕೊಟ್ಟ ಡೇವಿಡ್
KGF Chapter 2: ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೆಜಿಎಫ್ಚ ಚಾಪ್ಟರ್ 2 ಹವಾ ಭರ್ಜರಿಯಾಗಿದೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಹಂಚಿಕೊಂಡಿರುವ ಒಂದು ವಿಡಿಯೋವೇ ಸಾಕ್ಷಿ.
ಅಂದುಕೊಂಡಿದ್ದಕ್ಕಿಂತ ಒಂದು ಪಟ್ಟು ಹೆಚ್ಚು ಎಂಬಂತೆ ಕೆಜಿಎಫ್ ಚಾಪ್ಟರ್ – 2 (K.G.F: Chapter 2) ಆರ್ಭಟ ಜೋರಾಗಿ ನಡೆಯುತ್ತಿದೆ. ವಿಶ್ವದಾದ್ಯಂತ ಬಿಡುಗಡೆ ಆದ ಕೆಜಿಎಫ್ 2 ಸಿನಿಮಾ ಒಟ್ಟಾರೆಯಾಗಿ ಭಾರತದಲ್ಲಿ 134.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಕೇರಳದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಕೆಜಿಎಫ್ 2 ಅಗ್ರಸ್ಥಾನದಲ್ಲಿದೆ. ಹಿಂದಿ ಅವತರಣಿಕೆಯಲ್ಲಿ ಬರೋಬ್ಬರಿ 54 ಕೋಟಿ ರೂಪಾಯಿ ಬಾಚಿಕೊಂಡಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೆಜಿಎಫ್ ಹವಾ ಭರ್ಜರಿಯಾಗಿದೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಹಂಚಿಕೊಂಡಿರುವ ಒಂದು ವಿಡಿಯೋವೇ ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ವಾರ್ನರ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2022) ಕಾಣಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಇದುವರೆಗೆ ಚಿಕ್ಕ ವಿಡಿಯೋಕ್ಕೆ ಲಿಪ್ಸಿಂಕ್ ಮಾಡಿ ಸುದ್ದಿಯಾಗುತ್ತಿದ್ದ ವಾರ್ನರ್ ಇದೀಗ ರಾಕಿ ಭಾಯ್ ಅವತಾರ ತಾಳಿ ಧೂಳೆಬ್ಬಿಸಿದ್ದಾರೆ.
ಹೌದು, ಕೆಜಿಎಫ್ 2 ಸಿನಿಮಾದ ಫೇಮಸ್ “ವೈಲೆನ್ಸ್ ವೈಲೆನ್ಸ್ ವೈಲೆನ್ಸ್” ಡೈಲಾಗ್ಗೆ ವಾರ್ನರ್ ವಿಡಿಯೋ ಮಾಡಿದ್ದು ವಿಶೇಷವಾಗಿದೆ. ಮೈದಾನದಲ್ಲಿ ಬ್ಯಾಟ್ ಹಿಡಿದು ಮ್ಯೂಸಿಕ್ಗೆ ತಕ್ಕಂತೆ ಕಟ್, ಎಡಿಟ್ ಮಾಡಿ ಬೊಂಬಾಟ್ ಆಗಿ ವಿಡಿಯೋ ಮೂಡಿಬಂದಿದೆ. ಅಲ್ಲದೆ ಇಂದು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ವಾರ್ನರ್ ಅಬ್ಬರಿಸುವ ಬಗ್ಗೆ ಆರ್ಸಿಬಿ ಪಡೆಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟಿದ್ದಾರೆ. ವಾರ್ನರ್ ಈ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಯಶ್ ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
View this post on Instagram
ಸದ್ಯ ಐಪಿಎಲ್ನಲ್ಲಿ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಕೇವಲ ಎರಡು ಪಂದ್ಯಗಳಲ್ಲಿ 65 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಗಳಿಸಲು ವಿಫಲರಾಗಿದ್ದರು. ಆದರೆ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ 61 ರನ್ ಗಳಿಸಿ ಮತ್ತೆ ಫಾರ್ಮ್ ಗೆ ಬಂದಿದ್ದು ಇಂದಿನ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನೋಡಬೇಕಿದೆ.
ಮೊದಲ ದಿನವೇ KGF ದಾಖಲೆ:
ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ತೆರೆ ಕಂಡ ಕೆಜಿಎಫ್- 2 ಚಿತ್ರವು ಮೊದಲ ದಿನವೇ ಭಾರತದಲ್ಲಿ 134.5 ಕೋಟಿ ರೂ ಗಳನ್ನು ಬಾಚಿಕೊಂಡಿದೆ. ತೆರೆಕಂಡ ಐದು ಭಾಷೆಗಳಲ್ಲೂ ಚಿತ್ರವು ಸದ್ದು ಮಾಡುತ್ತಿದೆ. ಭಾರತದಲ್ಲಿ ಮೊದಲ ದಿನದ ಗಳಿಕೆಯ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಅಧಿಕೃತ ಮಾಹಿತಿ ನೀಡಿದೆ. ಭಾರತದಲ್ಲಿ ಮೊದಲ ದಿನ ಒಟ್ಟು 134.5 ಕೋಟಿ ರೂ ಗಳಿಸಿದೆ ಎಂದು ಹೊಂಬಾಳೆ ಫಿಲಂಸ್ ಹೇಳಿಕೊಂಡಿದೆ. ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರ ಮೊದಲ ದಿನ 156 ಕೋಟಿ ಗಳಿಸಿದ್ದರೆ, ಬಾಹುಬಲಿ 2 ಚಿತ್ರ 152 ಕೋಟಿ ರೂ. ಗಳಿಸಿತ್ತು. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಮೂರನೇ ಸ್ಥಾನದಲ್ಲಿದೆ. ಇದೇ ವೇಳೆ ಕೆಜಿಎಫ್ ಚಾಪ್ಟರ್ 2 ಹಿಂದಿ ಅವತರಣಿಕೆಯು ಬಾಲಿವುಡ್ ಚಿತ್ರಗಳಾದ ವಾರ್ ಮತ್ತು ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರಗಳ ದಾಖಲೆ ಮುರಿದಿದೆ. ಹಾಲಿಡೇ ಇರದಿದ್ದರೂ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ಈ ಚಿತ್ರ ಕಲೆಕ್ಷನ್ ಮಾಡಿರುವುದು ಒಂದು ದಾಖಲೆಯೇ ಆಗಿದೆ.
DC vs RCB, IPL 2022: ಐಪಿಎಲ್ನಲ್ಲಿ ಡಬಲ್ ಧಮಾಕ: ಗೆಲುವಿನ ಲಯಕ್ಕೆ ಮರಳುತ್ತಾ ಆರ್ಸಿಬಿ?
‘ಕೆಜಿಎಫ್ 2’ ಬ್ಲಾಕ್ ಬಸ್ಟರ್ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್?