AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DPL 2025: ವೇಗಿ ಹರ್ಷಿತ್ ರಾಣಾಗೆ ಒಲಿದ ಟಿ20 ತಂಡದ ನಾಯಕತ್ವ

Harshith Rana: ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಯುವ ವೇಗಿ ಹರ್ಷಿತ್ ರಾಣಾ ಅವರು ಈಗ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡದಲ್ಲಿ ಅವರಿಗೆ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, ಈ ನಾಯಕತ್ವದ ಜವಾಬ್ದಾರಿ ಅವರ ವೃತ್ತಿಜೀವನಕ್ಕೆ ಹೊಸ ಅಧ್ಯಾಯವಾಗಿದೆ. 21 ಲಕ್ಷ ರೂಪಾಯಿಗಳಿಗೆ ಖರೀದಿಸಲ್ಪಟ್ಟ ಹರ್ಷಿತ್ ರಾಣಾ ಅವರ ನಾಯಕತ್ವದಲ್ಲಿ ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡದ ಯಶಸ್ಸು ಕುರಿತು ನಿರೀಕ್ಷೆ ಹೆಚ್ಚಾಗಿದೆ.

DPL 2025: ವೇಗಿ ಹರ್ಷಿತ್ ರಾಣಾಗೆ ಒಲಿದ ಟಿ20 ತಂಡದ ನಾಯಕತ್ವ
Harshit Rana
ಪೃಥ್ವಿಶಂಕರ
|

Updated on: Jul 21, 2025 | 5:39 PM

Share

2024 ರ ಐಪಿಎಲ್ (IPL) ವೇಳೆ ತನ್ನ ವಿಭಿನ್ನ ಸಂಭ್ರಮಾಚರಣೆಯ ಜೊತೆಗೆ ತನ್ನ ಬೌಲಿಂಗ್ ಮೂಲಕವೂ ಸಾಕಷ್ಟು ಸದ್ದು ಮಾಡಿದ್ದ ಯುವ ವೇಗಿ ಹರ್ಷಿತ್ ರಾಣಾ (Harshith Rana) ಈಗಾಗಲೇ ಭಾರತ ತಂಡದ ಪರ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಆದಾಗ್ಯೂ ಟೀಂ ಇಂಡಿಯಾದಲ್ಲಿ ಹರ್ಷಿತ್​ ರಾಣಾಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಪ್ರಸ್ತುತ ತಂಡದಿಂದ ಹೊರಗಿರುವ ಹರ್ಷಿತ್ ರಾಣಾಗೆ ಇದೀಗ ಟಿ20 ತಂಡದ ನಾಯಕತ್ವ ಸಿಕ್ಕಿದೆ. ವಾಸ್ತವವಾಗಿ ಹರ್ಷಿತ್ ರಾಣಾ ಅವರನ್ನು ದೆಹಲಿ ಪ್ರೀಮಿಯರ್ ಲೀಗ್ 2025 ರಲ್ಲಿ (DPL 2025) ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಹರ್ಷಿತ್ ರಾಣಾ ಮೊದಲ ಬಾರಿಗೆ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹರ್ಷಿತ್​ಗೆ ಚೊಚ್ಚಲ ನಾಯಕತ್ವ

ಹರ್ಷಿತ್ ರಾಣಾ ಈ ಮೊದಲು ನಾಯಕತ್ವ ವಹಿಸಿಲ್ಲ ಆದರೆ ಈಗ ಅವರಿಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಈ ಮೊದಲು ಹರ್ಷಿತ್ ರಾಣಾ ಭಾರತ ಎ ಪರ ಒಂದು ಪಂದ್ಯ ಆಡಿದ್ದರು. ಇದಾದ ನಂತರ ಅವರನ್ನು ಟೀಂ ಇಂಡಿಯಾಕ್ಕೂ ಆಯ್ಕೆ ಮಾಡಲಾಗಿತ್ತು. ಆದರೆ ಮೊದಲ ಟೆಸ್ಟ್ ನಂತರ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಯಿತು. ಭಾರತಕ್ಕೆ ಬಂದಿರುವ ಹರ್ಷಿತ್​ಗೆ ಈಗ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ನಾಯಕತ್ವ ಸಿಕ್ಕಿದೆ. ನಾರ್ತ್ ದೆಹಲಿ ಸ್ಟ್ರೈಕರ್ಸ್​ ತಂಡ ಅವರನ್ನು 21 ಲಕ್ಷ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.

IND vs ENG: ಚೊಚ್ಚಲ ಏಕದಿನ ಪಂದ್ಯದಲ್ಲಿ ಅಗತ್ಯ- ಅನಗತ್ಯ ದಾಖಲೆ ಬರೆದ ಹರ್ಷಿತ್ ರಾಣಾ

ಅತ್ಯಂತ ದುಬಾರಿ ಆಟಗಾರರಿವರು

ದೆಹಲಿ ಪ್ರೀಮಿಯರ್ ಲೀಗ್ 2025 ರ ಅತ್ಯಂತ ದುಬಾರಿ ಆಟಗಾರ ಸಿಮರ್ಜೀತ್ ಸಿಂಗ್. ಈ ಬಲಗೈ ವೇಗದ ಬೌಲರ್ ಅನ್ನು 39 ಲಕ್ಷ ರೂ.ಗೆ ಸೆಂಟ್ರಲ್ ದೆಹಲಿ ಕಿಂಗ್ ತಂಡ ಖರೀದಿಸಿದೆ. ದಿಗ್ವೇಶ್ ರಾಥಿ ಅವರನ್ನು ಓಲ್ಡ್ ದೆಹಲಿ ತಂಡ 38 ಲಕ್ಷ ರೂ.ಗೆ ಖರೀದಿಸಿದೆ. ಅದೇ ಸಮಯದಲ್ಲಿ, ನಿತೀಶ್ ರಾಣಾ ಅವರನ್ನು ವೆಸ್ಟ್ ದೆಹಲಿ ಲಯನ್ಸ್ ತಂಡ 34 ಲಕ್ಷ ರೂ. ನೀಡಿ ಸೇರಿಸಿಕೊಂಡಿದೆ. ಸೆಹ್ವಾಗ್ ಅವರ ಮಗ ಆರ್ಯವೀರ್ ಕೂಡ ಈ ವರ್ಷ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಇವರ ಜೊತೆಗೆ ವಿರಾಟ್ ಕೊಹ್ಲಿ ಅವರ ಸೋದರನ ಮಗ ಆರ್ಯವೀರ್ ಕೊಹ್ಲಿ ಕೂಡ ಆಡುವುದನ್ನು ಕಾಣಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ