AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI: ವರ್ಷದಲ್ಲಿ 9741 ಕೋಟಿ ಆದಾಯ ಗಳಿಸಿದ ಬಿಸಿಸಿಐ; ಇದರಲ್ಲಿ ಐಪಿಎಲ್ ಪಾಲು ಎಷ್ಟು?

BCCI Revenue 2023-24: 2023-24ನೇ ಸಾಲಿನಲ್ಲಿ ಬಿಸಿಸಿಐ 9741.7 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದರಲ್ಲಿ ಐಪಿಎಲ್ ಒಂದೇ 5761 ಕೋಟಿ ರೂಪಾಯಿಗಳನ್ನು ಗಳಿಸಿದೆ. WPL 378 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅಂತಾರಾಷ್ಟ್ರೀಯ ಪಂದ್ಯಾವಳಿಗಳು ಮತ್ತು ಇತರ ಮೂಲಗಳಿಂದಲೂ ಗಣನೀಯ ಆದಾಯ ಬಂದಿದೆ. ಐಪಿಎಲ್ ಬಿಸಿಸಿಐನ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸ್ಪಷ್ಟವಾಗಿದೆ.

BCCI: ವರ್ಷದಲ್ಲಿ 9741 ಕೋಟಿ ಆದಾಯ ಗಳಿಸಿದ ಬಿಸಿಸಿಐ; ಇದರಲ್ಲಿ ಐಪಿಎಲ್ ಪಾಲು ಎಷ್ಟು?
Bcci
ಪೃಥ್ವಿಶಂಕರ
|

Updated on:Jul 18, 2025 | 2:50 PM

Share

ವಿಶ್ವ ಕ್ರಿಕೆಟ್​ನ ಅಕ್ಷರಶಃ ಆಳುತ್ತಿರುವ ಮಂಡಳಿಯೆಂದರೆ ಅದು ಬಿಸಿಸಿಐ (BCCI) ಎಂದರೆ ತಪ್ಪಾಗಲಾರದು. ತನ್ನ ಹಣ ಬಲ ಮತ್ತು ಜಾಣ್ಮೆಯಿಂದ ಕ್ರಿಕೆಟ್ ಲೋಕದ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐ, ಕ್ರಿಕೆಟ್​ ಮೇಲೆ ತನ್ನ ಹಿಡಿತವನ್ನು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಿಗಿಗೊಳಿಸುತ್ತಿದೆ. ಕ್ರಿಕೆಟ್​​ನಲ್ಲಿ ಬಿಸಿಸಿಐಗೆ ಇಷ್ಟೊಂದು ಮನ್ನಣೆ ಸಿಗಲು ಪ್ರಮುಖ ಕಾರಣ ಕಾಜಾಣ. ವರ್ಷದಿಂದ ವರ್ಷಕ್ಕೆ ತನ್ನ ಆದಾಯದಲ್ಲಿ ಭಾರಿ ಹೆಚ್ಚಳವನ್ನು ಕಾಣುತ್ತಿರುವ ಬಿಸಿಸಿಐಗೆ 2023-24 ರ ಆರ್ಥಿಕ ವರ್ಷದಲ್ಲಿ ಸರಿಸುಮಾರು ಹತ್ತು ಸಾವಿರ ಕೋಟಿ ಆದಾಯ ಹರಿದುಬಂದಿದೆ. ಇದರಲ್ಲಿ ಐಪಿಎಲ್​ನದ್ದೇ (IPL) ಸಿಂಹಪಾಲಿದ್ದು, ಈ ಮಿಲಿಯನ್ ಡಾಲರ್ ಟೂರ್ನಿ ಒಂದರಿಂದಲೇ ಬಿಸಿಸಿಐ, 5761 ಕೋಟಿ ಆದಾಯ ಗಳಿಸಿದೆ. ಅಂದರೆ ಒಂದು ಆರ್ಥಿಕ ವರ್ಷದಲ್ಲಿ ಬಿಸಿಸಿಐ ಗಳಿಸಿರುವ ಆದಾಯದಲ್ಲಿ ಐಪಿಎಲ್​ನದ್ದೇ 59 ಪ್ರತಿಶತದಷ್ಟು ಕೊಡುಗೆ ಇದೆ.

ಹಣದ ಹೊಳೆ ಹರಿಸುತ್ತಿರುವ ಐಪಿಎಲ್

ದಿ ಹಿಂದೂ ಬಿಸಿನೆಸ್ ಲೈನ್ ವರದಿಯ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ 9741.7 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಐಪಿಎಲ್ ಒಂದರಿಂದಲೇ 5761 ಕೋಟಿ ರೂ. ಸಂಪಾಧನೆಯಾಗಿದೆ. ವರದಿಯ ಪ್ರಕಾರ, ಅಂತರರಾಷ್ಟ್ರೀಯ ಪಂದ್ಯಾವಳಿಗಳ ಪ್ರಸಾರ ಹಕ್ಕುಗಳು ಸೇರಿದಂತೆ ಐಪಿಎಲ್ ಅಲ್ಲದ ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐ 361 ಕೋಟಿ ರೂ. ಗಳಿಸಿದೆ.

ಇಷ್ಟೇ ಅಲ್ಲ, ಕಳೆದ ಹಣಕಾಸು ವರ್ಷದಲ್ಲಿ ಮಂಡಳಿಯು ಬಡ್ಡಿಯಿಂದಲೇ 987 ಕೋಟಿ ರೂ. ಆದಾಯ ಗಳಿಸಿದೆ. ಈ ಅವಧಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ ಪಂದ್ಯಾವಳಿಗಳ ಆದಾಯದ ಪಾಲು) ವಿತರಣೆಯಿಂದ 1,042 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಐಪಿಎಲ್ ಜೊತೆಗೆ, ಆದಾಯವನ್ನು ಹೆಚ್ಚಿಸಲು ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಅಥವಾ ಸಿಕೆ ನಾಯುಡು ಟ್ರೋಫಿಯಂತಹ ದೊಡ್ಡ ಪಂದ್ಯಾವಳಿಗಳನ್ನು ಆಯೋಜಿಸುವುದರಿಂದಲೂ ಬಿಸಿಸಿಐಗೆ ಆದಾಯ ಹರಿದಬರುತ್ತಿದೆ.

IND vs ENG: ಬುಮ್ರಾ ವಿಚಾರವನ್ನು ಬಹಿರಂಗಪಡಿಸಿದ್ಯಾಕೆ? ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

WPL ನಿಂದಲೂ ಆದಾಯ

ಐಪಿಎಲ್ ಯಶಸ್ಸಿನ ನಂತರ ಬಿಸಿಸಿಐ, ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಸಹ ಪ್ರಾರಂಭಿಸಿತು. ಇದುವರೆಗೆ ಮೂರು ಆವೃತ್ತಿಗಳನ್ನು ಕಂಡಿರುವ ಈ ಲೀಗ್​ನಿಂದ 2023-24 ರ ಆರ್ಥಿಕ ವರ್ಷದಲ್ಲಿ 378 ಕೋಟಿ ರೂ. ಆದಾಯ ಬಂದಿದೆ. ಇದಲ್ಲದೆ, ಭಾರತ ತಂಡವು ಇತರ ದೇಶಗಳಲ್ಲಿ ಕ್ರಿಕೆಟ್ ಆಡಲು ಹೋದಾಗಲೂ ಮಂಡಳಿಗೆ ಆದಾಯ ಹರಿದುಬರುತ್ತದೆ. ಅದರಂತೆ ಆರ್ಥಿಕ ವರ್ಷದಲ್ಲಿ ಪುರುಷರ ಕ್ರಿಕೆಟ್ ತಂಡದ ಪ್ರವಾಸದಿಂದ ಮಂಡಳಿಗೆ 361 ಕೋಟಿ ರೂ. ಸಂಪಾಧನೆಯಾಗಿದೆ. ಇದು ಮಾತ್ರವಲ್ಲದೆ, 2023-24 ರಲ್ಲಿ ಬಿಸಿಸಿಐ ಇತರ ಮೂಲಗಳಿಂದ 400 ಕೋಟಿ ರೂ. ಗಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Fri, 18 July 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!