AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಬುಮ್ರಾ ವಿಚಾರವನ್ನು ಬಹಿರಂಗಪಡಿಸಿದ್ಯಾಕೆ? ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

India vs England: ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸೋಲುಂಡಿದ್ದು, ಕೆಳ ಕ್ರಮಾಂಕದ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ದೌರ್ಬಲ್ಯಗಳಿಂದಾಗಿ. ಜಸ್ಪ್ರೀತ್ ಬುಮ್ರಾ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡುವುದಾಗಿ ಮುಂಚೆಯೇ ಹೇಳಿದ್ದರು ಎಂಬುದು ಆಕಾಶ್ ಚೋಪ್ರಾ ಅವರ ಪ್ರಶ್ನೆ. ಹೊಸ ತಲೆಮಾರಿನ ಬೌಲರ್‌ಗಳ ಅಭಿವೃದ್ಧಿ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ. ಶಮಿ ಮತ್ತು ಸಿರಾಜ್ ಅವರನ್ನು ಬುಮ್ರಾ ಅವರ ಬದಲಿ ಎಂದು ಪರಿಗಣಿಸುವುದು ಕಷ್ಟ ಎನ್ನುತ್ತಾರೆ.

IND vs ENG: ಬುಮ್ರಾ ವಿಚಾರವನ್ನು ಬಹಿರಂಗಪಡಿಸಿದ್ಯಾಕೆ? ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ
Jasprit Bumrah
ಪೃಥ್ವಿಶಂಕರ
|

Updated on:Jun 26, 2025 | 8:13 PM

Share

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾವನ್ನು (Team India) ಎಲ್ಲಾ ಕಡೆಯಿಂದ ಟೀಕಿಸಲಾಗುತ್ತಿದೆ. ಇದಕ್ಕೆ ಕಾರಣವೂ ಇದ್ದು, ತಂಡದಿಂದ ಐದು ಶತಕ ಸಿಡಿದರೂ, ಮೊದಲ ಇನ್ನಿಂಗ್ಸ್​ನಲ್ಲಿ ಬುಮ್ರಾ (Jasprit Bumrah) 5 ವಿಕೆಟ್ ಪಡೆದರೂ ತಂಡ ಸೋಲಬೇಕಾಯಿತು. ಇದಕ್ಕೆ ಪ್ರಮುಖ ಕಾರಣ, ಕೆಳ ಕ್ರಮಾಂಕದ ಕಳಪೆ ಬ್ಯಾಟಿಂಗ್ ಹಾಗೂ ಕಳಪೆ ಫೀಲ್ಡಿಂಗ್‌. ಇವೆರಡು ನ್ಯೂನತೆಗಳಿಂದ ಟೀಂ ಇಂಡಿಯಾ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು ಎಂಬುದು ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್ ಪಂಡಿತರ ವಾದವಾಗಿದೆ. ಏತನ್ಮಧ್ಯೆ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ವಿಭಿನ್ನ ವಿಷಯವನ್ನು ಮುನ್ನಲೆಗೆ ತಂದಿದ್ದು, ಜಸ್ಪ್ರೀತ್ ಬುಮ್ರಾ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ ಎಂಬ ಗೌಪ್ಯ ವಿಚಾರವನ್ನು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಬಹಿರಂಗಪಡಿಸಿದ್ಯಾಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಆಕಾಶ್ ಚೋಪ್ರಾ ಪ್ರಶ್ನೆ ಏನು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಆಕಾಶ್ ಚೋಪ್ರಾ, ‘ಬುಮ್ರಾ ಒಂದು ಸಂದರ್ಶನದಲ್ಲಿ ತಾನು ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡುತ್ತೇನೆ ಎಂದು ಹೇಳಿದರು. ಈಗ ಇದನ್ನು ಸಾರ್ವಜನಿಕಗೊಳಿಸುವ ಅಗತ್ಯ ನಿಜವಾಗಿಯೂ ಇತ್ತ ಎಂಬುದು ನನ್ನ ಪ್ರಶ್ನೆ. ಇದನ್ನು ಏಕೆ ರಹಸ್ಯವಾಗಿಡಲಿಲ್ಲ? ನಾವು ನಮ್ಮ ಆಡುವ ಹನ್ನೊಂದರ ಬಳಗವನ್ನು ಸರಣಿ ಆರಂಭಕ್ಕೂ ಮುನ್ನವೇ ಘೋಷಿಸಿರಲಿಲ್ಲ.

ಹಾಗಿದ್ದಾಗ, ಈ ಸರಣಿಯ ಆರಂಭಕ್ಕೂ ಮೊದಲು, ಬುಮ್ರಾ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡುತ್ತಾರೆ ಎಂದು ಪದೇ ಪದೇ ಹೇಳುವ ಅಗತ್ಯ ಏಕೆ ಇತ್ತು?. ಈ ಹಿಂದಿನ ವರದಿಯ ಪ್ರಕಾರ, ಬುಮ್ರಾ ಎಡ್ಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಿದರೆ, ಉಳಿದ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಆಡುತ್ತಾರೆ. ಆದ್ದರಿಂದ ಇಂಗ್ಲೆಂಡ್‌ಗೆ ಸರಣಿಯ ಇತರ ಪಂದ್ಯಗಳಿಗೆ ಪಿಚ್ ಸಿದ್ಧಪಡಿಸುವ ಅವಕಾಶ ಸಿಗುತ್ತದೆ ಎಂದು ಗಮನಿಸಬೇಕಾದ ವಿಷಯವನ್ನು ಚರ್ಚೆಗೆ ಹಚ್ಚಿದ್ದಾರೆ.

IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್

ಬೌಲಿಂಗ್ ವಿಭಾಗ ಬದಲಾಗಬೇಕು

ಮುಂದುವರೆದು ಮಾತನಾಡಿರುವ ಅವರು, ‘ಮತ್ತೊಂದೆಡೆ, ಹೊಸ ತಲೆಮಾರಿನ ಬೌಲರ್‌ಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆ. ಇದು ಗಂಭೀರ ವಿಷಯ. ವಿದೇಶದಲ್ಲಿ ಟೆಸ್ಟ್ ಗೆಲ್ಲಲು, ನೀವು 20 ವಿಕೆಟ್‌ಗಳನ್ನು ಪಡೆಯಬೇಕು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಸೂಕ್ತರು. ಮೊಹಮ್ಮದ್ ಶಮಿ ಇನ್ನೂ ಆಡುತ್ತಿದ್ದಾರೆ, ಆದರೆ ಅವರು ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಒಳ್ಳೇಯ ಬೌಲರ್. ಆದರೆ ಅವರು ಬುಮ್ರಾ ಮತ್ತು ಶಮಿ ಅವರ ಮಟ್ಟವನ್ನು ತಲುಪುವುದು ಕಷ್ಟ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Thu, 26 June 25