ವಿಶ್ವ ದಾಖಲೆಯ ಶತಕ ಸಿಡಿಸಿದ ಹೆನ್ರಿಕ್ ಕ್ಲಾಸೆನ್

| Updated By: ಝಾಹಿರ್ ಯೂಸುಫ್

Updated on: Oct 21, 2023 | 6:39 PM

Heinrich Klaasen`Century: ಈ ಪಂದ್ಯದಲ್ಲಿ 67 ಎಸೆತಗಳನ್ನು ಎದುರಿಸಿದ ಹೆನ್ರಿಕ್ ಕ್ಲಾಸೆನ್ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇನ್ನು ಅಂತಿಮ ಹಂತದಲ್ಲಿ ಮಾರ್ಕೊ ಯಾನ್ಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಯಾನ್ಸೆನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು.

ವಿಶ್ವ ದಾಖಲೆಯ ಶತಕ ಸಿಡಿಸಿದ ಹೆನ್ರಿಕ್ ಕ್ಲಾಸೆನ್
Heinrich Klaasen
Follow us on

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ 20ನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಸೌತ್ ಆಫ್ರಿಕಾ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೌತ್ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ (4) ಮೊದಲ ಓವರ್​ನಲ್ಲೇ ವಿಕೆಟ್​ ಒಪ್ಪಿಸಿದರು. ಆ ಬಳಿಕ ಉತ್ತಮ ಜೊತೆಯಾಟವಾಡಿದ ರೀಝ ಹೆಂಡ್ರಿಕ್ಸ್​ (85) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (60) ಅರ್ಧಶತಕ ಬಾರಿಸಿ ಮಿಂಚಿದರು. ನಾಯಕ ಐಡೆನ್ ಮಾರ್ಕ್ರಮ್ 42 ರನ್​ಗಳ ಕೊಡುಗೆ ನೀಡಿದರು.

ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಇನಿಂಗ್ಸ್ ಆಡಿದರು. ಆರಂಭದಿಂದಲೇ ಇಂಗ್ಲೆಂಡ್ ಬೌಲರ್​ಗಳ ಬೆಂಡೆತ್ತಿದ ಕ್ಲಾಸೆನ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೇವಲ 61 ಎಸೆತಗಳಲ್ಲಿ ಭರ್ಜರಿ ಶತಕ ಮೂಡಿಬಂತು.  ಇದರೊಂದಿಗೆ ಏಕದಿನ ವಿಶ್ವಕಪ್​ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಹಾಗೂ ಸೌತ್ ಆಫ್ರಿಕಾದ ಮೂರನೇ ಆಟಗಾರ ಎನಿಸಿಕೊಂಡರು.

ಏಕದಿನ ವಿಶ್ವಕಪ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಸರದಾರರ ಪಟ್ಟಿ ಹೀಗಿದೆ:

ಬ್ಯಾಟರ್​ ಎಸೆತಗಳು ತಂಡ ಎದುರಾಳಿ ತಂಡ ವರ್ಷ ಸ್ಥಳ
ಐಡೆನ್ ಮಾರ್ಕ್ರಾಮ್ 49 ಸೌತ್ ಆಫ್ರಿಕಾ ಶ್ರೀಲಂಕಾ 2023 ದೆಹಲಿ
ಕೆವಿನ್ ಓಬ್ರಿಯನ್ 50 ಐರ್ಲೆಂಡ್ ಇಂಗ್ಲೆಂಡ್ 2011 ಬೆಂಗಳೂರು
ಗ್ಲೆನ್ ಮ್ಯಾಕ್ಸ್​ವೆಲ್ 51 ಆಸ್ಟ್ರೇಲಿಯಾ ಶ್ರೀಲಂಕಾ 2015 ಸಿಡ್ನಿ
ಎಬಿ ಡಿವಿಲಿಯರ್ಸ್​ 52 ಸೌತ್ ಆಫ್ರಿಕಾ ವೆಸ್ಟ್ ಇಂಡೀಸ್ 2015 ಸಿಡ್ನಿ
ಇಯಾನ್ ಮೋರ್ಗನ್ 57 ಇಂಗ್ಲೆಂಡ್ ಅಫ್ಘಾನಿಸ್ತಾನ್ 2019 ಮ್ಯಾಂಚೆಸ್ಟರ್
ಹೆನ್ರಿಕ್ ಕ್ಲಾಸೆನ್ 61 ಸೌತ್ ಆಫ್ರಿಕಾ ಇಂಗ್ಲೆಂಡ್ 2023 ಮುಂಬೈ

ಬೃಹತ್ ಮೊತ್ತ ಪೇರಿಸಿದ ಸೌತ್ ಆಫ್ರಿಕಾ:

ಈ ಪಂದ್ಯದಲ್ಲಿ 67 ಎಸೆತಗಳನ್ನು ಎದುರಿಸಿದ ಹೆನ್ರಿಕ್ ಕ್ಲಾಸೆನ್ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇನ್ನು ಅಂತಿಮ ಹಂತದಲ್ಲಿ ಮಾರ್ಕೊ ಯಾನ್ಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಯಾನ್ಸೆನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತು.

ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ರೀಸ್ ಟೋಪ್ಲಿ.

ಇದನ್ನೂ ಓದಿ: ಚೇಸ್ ಮಾಸ್ಟರ್…ಸಚಿನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ

ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.