ಆಗಸ್ಟ್ 15 ಭಾರತದ ಸ್ವಾತಂತ್ರ್ಯದ ದಿನ. ಭಾರತ ಮೊದಲ ಬಾರಿಗೆ ಮುಕ್ತ ಗಾಳಿಯನ್ನು ಉಸಿರಾಡಿದ ದಿನ. 1947 ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದು, ಇಡೀ ದೇಶವೇ ಹಬ್ಬದಂತೆ ಆಚರಿಸುತ್ತಿದೆ. ಭಾರತದಲ್ಲಿ ಮತ್ತು ಭಾರತದ ಹೊರಗೆ ಎಲ್ಲೆಲ್ಲಿ ಭಾರತೀಯರು ಇದ್ದಾರೋ ಅವರೆಲ್ಲರು ದೇಶದ ಸ್ವಾತಂತ್ರ್ಯದ ಈ ವೈಭವದ 75 ವರ್ಷಗಳ ತ್ರಿವರ್ಣ ಧ್ವಜದೊಂದಿಗೆ ಆಚರಿಸಿದರು. ಹೀಗಿರುವಾಗ ಜಿಂಬಾಬ್ವೆಯಲ್ಲಿರುವ ಟೀಂ ಇಂಡಿಯಾ (Indian cricket team) ಕೂಡ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಿಕೊಂದಿದೆ.
ಹರಾರೆಯಲ್ಲೂ ಹಾರಿತು ಭಾರತದ ತ್ರಿವರ್ಣ ಧ್ವಜ
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡ ಜಿಂಬಾಬ್ವೆ ಪ್ರವಾಸದಲ್ಲಿದೆ. ಪ್ರಸ್ತುತ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಅವರಂತಹ ದೊಡ್ಡ ಹೆಸರುಗಳಿಲ್ಲದಿದ್ದರೂ, ಕೆಎಲ್ ರಾಹುಲ್, ಶಿಖರ್ ಧವನ್ ಅವರಂತಹ ದಿಗ್ಗಜರು ಈ ತಂಡದ ಭಾಗವಾಗಿದ್ದಾರೆ. ಆಗಸ್ಟ್ 18 ರಿಂದಲೇ ಟೀಂ ಇಂಡಿಯಾ ಮೈದಾನದಲ್ಲಿ ತನ್ನ ಆಟವನ್ನು ತೋರಿಸಲು ಸಜ್ಜಾಗಿದೆ.ಇಂತಹ ಪರಿಸ್ಥಿತಿಯಲ್ಲಿ ತಂಡವು ಅದಕ್ಕೂ ಮುನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಹರಾರೆಯಲ್ಲಿರುವ ಭಾರತೀಯ ತಂಡವು ತಮ್ಮ ಹೋಟೆಲ್‌ನ ಹೊರಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.
?? ??#IndiaAt75 | #TeamIndia | #ZIMvIND pic.twitter.com/W30cYSYvPG
— BCCI (@BCCI) August 15, 2022
ಸ್ವಾತಂತ್ರ್ಯೋತ್ಸವ ಆಚರಿಸಿದ ರೋಹಿತ್-ಕೊಹ್ಲಿ
ಟೀಂ ಇಂಡಿಯಾದ ಹಲವು ಹಿರಿಯ ಹಾಗೂ ಮಾಜಿ ಆಟಗಾರರು ಕೂಡ ತಮ್ಮದೇ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದರು. ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ತ್ರಿವರ್ಣ ಧ್ವಜ ಹಾರಿಸಿ ತಮ್ಮದೇ ರೀತಿಯಲ್ಲಿ ದೇಶಕ್ಕೆ ಶುಭಾಶಯ ಕೋರಿದರು.
ವಿದೇಶಿ ಆಟಗಾರರೂ ಹಿಂದೆ ಬಿದ್ದಿಲ್ಲ
ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಅನೇಕ ವಿದೇಶಿ ಆಟಗಾರರು ಕೂಡ ದೇಶಕ್ಕೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಐಪಿಎಲ್‌ನಿಂದಾಗಿ ಅನೇಕ ವಿದೇಶಿ ಆಟಗಾರರಿಗೆ ಭಾರತ ಎರಡನೇ ತವರು ಮನೆಯಂತ್ತಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಸೂಪರ್‌ಸ್ಟಾರ್ ಡೇವಿಡ್ ವಾರ್ನರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ದೇಶದ ಜನೆತೆಗೆ ಶುಭಹಾರೈಸಿದ್ದಾರೆ.
ಮತ್ತೊಂದೆಡೆ, ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಮತ್ತೊಮ್ಮೆ ಹಿಂದಿಯಲ್ಲಿ ಟ್ವೀಟ್ ಮಾಡಿ ಭಾರತೀಯರಿಗೆ ಶುಭ ಹಾರೈಸಿದ್ದಾರೆ.
75वें स्वतंत्रता दिवस की शुभकामनाएं, भारत। गर्व करो और लंबा खड़े रहो। आप सभी के लिए एक बेहतर कल का निर्माण कर रहे हैं! ❤️ ??
— Kevin Pietersen? (@KP24) August 15, 2022
Published On - 8:33 pm, Mon, 15 August 22