
ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಸಾಧ್ಯವೇ? ಇಂಗ್ಲೆಂಡ್ ತಂಡವನ್ನು ಆಂಗ್ಲರ ಮಣ್ಣಿಸಲು ಸಾಧ್ಯವೇ? ಈ ಎರಡು ಪ್ರಶ್ನೆಗಳಿಗೆ ಸಾಧ್ಯ ಎಂಬ ಸಾಧನೆಯ ಉತ್ತರ ನೀಡಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್. ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 160 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಐತಿಹಾಸಿಕ ಸರಣಿ ಗೆದ್ದುಕೊಂಡಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಸ್ಪಿನ್ ಪಿಚ್‌ಗಳನ್ನು ಎದುರಿಸುವುದು ಮತ್ತು ಇಂಗ್ಲೆಂಡ್‌ನಲ್ಲಿ ಸ್ವಿಂಗ್ ಆಗುವ ಪಿಚ್‌ಗಳನ್ನು ಜಯಿಸುವುದು ಅತ್ಯಂತ ಕಠಿಣ ಸವಾಲು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡೂ ಸವಾಲುಗಳನ್ನು ಕಿವೀಸ್ ಪಡೆ ಅದ್ಭುತವಾಗಿ ಮೆಟ್ಟಿ ನಿಂತಿದ್ದಾರೆ. ಅದು ಸಹ ನೂತನ ನಾಯಕ ಟಾಮ್ ಲ್ಯಾಥಮ್ ಸಾರಥ್ಯದಲ್ಲಿ ಎಂಬುದು ವಿಶೇಷ.
ದಿಗ್ಗಜರ ಸಾಲಿಗೆ ಸೇರಿದ ಲ್ಯಾಥಮ್:
ಭಾರತ ಮತ್ತು ಇಂಗ್ಲೆಂಡ್ ಎರಡೂ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಎಷ್ಟು ಅಪರೂಪ ಎಂದರೆ, ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿರುವುದು ಬೆರಳೆಣಿಕೆಯಷ್ಟೇ ನಾಯಕರುಗಳು ಮಾತ್ರ. ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಗಣ್ಯ ನಾಯಕರುಗಳ ಪಟ್ಟಿ ಈ ಕೆಳಗಿನಂತಿದೆ.
ಇದನ್ನೂ ಓದಿ: ರಣರೋಚಕ ಪಂದ್ಯ… ಅಂತಿಮ ನಿಮಿಷದಲ್ಲಿ ಗೆದ್ದ ಬ್ರೆಝಿಲ್
ಈ ಗೆಲುವಿನೊಂದಿಗೆ ಟಾಮ್ ಲ್ಯಾಥಮ್ ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೆ, ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ರಣತಂತ್ರ ರೂಪಿಸುವ ಚತುರ ಕಪ್ತಾನನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿ ಕಾಡದಂತೆ ನ್ಯೂಝಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
Published On - 7:54 am, Tue, 30 June 26