AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

438 ರನ್ ಗಳಿಸಿಯೂ ಹೀನಾಯ ದಾಖಲೆ ಬರೆದ ನ್ಯೂಝಿಲೆಂಡ್

England vs New Zealand, 3rd Test: ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 438 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 223 ರನ್​ ಗಳಿಸಿದೆ.

438 ರನ್ ಗಳಿಸಿಯೂ ಹೀನಾಯ ದಾಖಲೆ ಬರೆದ ನ್ಯೂಝಿಲೆಂಡ್
New ZealandImage Credit source: GettyImages
ಝಾಹಿರ್ ಯೂಸುಫ್
|

Updated on: Jun 27, 2026 | 1:27 PM

Share

ಕ್ರಿಕೆಟ್ ಎಂಬುದು ಅನಿಶ್ಚಿತತೆಗಳ ಆಟ ಎಂಬುದಕ್ಕೆ ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್​ ತಾಜಾ ಉದಾಹರಣೆ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಟಾಮ್ ಲ್ಯಾಥಮ್ ಹಾಗೂ ಡೆವೊನ್ ಕಾನ್ವೆ ಅದ್ಭುತ ಆರಂಭ ಒದಗಿಸಿದ್ದರು. ಈ ಆರಂಭದೊಂದಿಗೆ ಈ ಜೋಡಿಯು ಮೊದಲ ವಿಕೆಟ್​ಗೆ ಕಲೆಹಾಕಿದ್ದು ಬರೋಬ್ಬರಿ 317 ರನ್​ಗಳು.

  • ಡೆವೊನ್ ಕಾನ್ವೆ 224 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್​ಗಳೊಂದಿಗೆ 157 ರನ್ ಬಾರಿಸಿದ್ದರು
  • ಟಾಮ್ ಲ್ಯಾಥಮ್ 214 ಎಸೆತಗಳಲ್ಲಿ 15 ಫೋರ್ ನೆರವಿನೊಂದಿಗೆ 151 ರನ್ ಗಳಿಸಿದ್ದರು.

ಮೊದಲ ವಿಕೆಟ್‌ಗೆ 317 ರನ್‌ಗಳ ಜೊತೆಯಾಟವಾಡಿದ ಕಿವೀಸ್ ಪಡೆ, ಆನಂತರ ಕೇವಲ 121 ರನ್‌ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 438 ರನ್​ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದೆ. ಈ ದಿಢೀರ್ ಕುಸಿತದೊಂದಿಗೆ ನ್ಯೂಝಿಲೆಂಡ್ ತಂಡವು ಟೆಸ್ಟ್ ಕ್ರಿಕೆಟ್​ನಲ್ಲಿ  ಅನಪೇಕ್ಷಿತ ದಾಖಲೆಯೊಂದನ್ನು ನಿರ್ಮಿಸಿದೆ.

ಕಿವೀಸ್ ಪಡೆಯ ಅನಪೇಕ್ಷಿತ ದಾಖಲೆ:

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟದ ಬಳಿಕ ತಂಡವೊಂದು ಇಷ್ಟು ಕಡಿಮೆ ಮೊತ್ತಕ್ಕೆ ಆಲ್-ಔಟ್ ಆಗಿರುವುದು ಇದೇ ಮೊದಲು. ಇದಕ್ಕೂ ಮುನ್ನ 1912 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 323 ರನ್‌ಗಳ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಳಿಕ 589 ರನ್‌ಗಳಿಗೆ ಆಲ್-ಔಟ್ ಆಗಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು.

ಆದರೆ ಈ ಬಾರಿ ನ್ಯೂಝಿಲೆಂಡ್ ಮೊದಲ ವಿಕೆಟ್​ಗೆ ತ್ರಿಶತಕದ ಜೊತೆಯಾಟವಾಡಿ ಐನೂರು ರನ್​ಗಳಿಸಲು ವಿಫಲವಾಗಿದೆ. ಈ ಮೂಲಕ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ವಿಕೆಟ್​ಗೆ 300 ಕ್ಕೂ ಹೆಚ್ಚು ರನ್​ಗಳಿಸಿ 500 ರನ್​ಗಳಿಸಲಾಗದೇ ಆಲೌಟ್ ಆದ ತಂಡವೆಂಬ ಅಪಕೀರ್ತಿಯೊಂದು ಕಿವೀಸ್ ಪಾಲಾಗಿದೆ.

ಹಾಗೆಯೇ ಟೆಸ್ಟ್ ಇತಿಹಾಸದಲ್ಲೇ ಆರಂಭಿಕ ದಾಂಡಿಗರು 300+ ರನ್​ ಗಳಿಸಿದ ಬಳಿಕ ತಂಡವೊಂದು ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಅನಪೇಕ್ಷಿತ ದಾಖಲೆಗೂ ನ್ಯೂಝಿಲೆಂಡ್ ತಂಡ ಕೊರೊಳೊಡ್ಡಿದೆ.

  • ನ್ಯೂಝಿಲೆಂಡ್ – 438/10 (vs ಇಂಗ್ಲೆಂಡ್, 2026)
  • ಇಂಗ್ಲೆಂಡ್ – 589/10 (vs ಆಸ್ಟ್ರೇಲಿಯಾ, 1912)
  • ಇಂಗ್ಲೆಂಡ್ – 608/10 (vs ದಕ್ಷಿಣ ಆಫ್ರಿಕಾ, 1948)

## 📊 114 ವರ್ಷಗಳ ಕ್ರಿಕೆಟ್ ಇತಿಹಾಸ ಬ್ರೇಕ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟ ಸಿಕ್ಕ ನಂತರ ತಂಡವೊಂದು ಇಷ್ಟು ಕಡಿಮೆ ಮೊತ್ತಕ್ಕೆ ಆಲ್-ಔಟ್ ಆಗಿರುವುದು ಇದೇ ಮೊದಲು. ಈ ಮುಂಚೆ 1912 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 323 ರನ್‌ಗಳ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಳಿಕ 589 ರನ್‌ಗಳಿಗೆ ಆಲ್-ಔಟ್ ಆಗಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು.

* ನ್ಯೂಝಿಲೆಂಡ್ 🇳🇿 — 438/10 (vs ಇಂಗ್ಲೆಂಡ್, 2026) * ಇಂಗ್ಲೆಂಡ್ 🏴󠁧󠁢󠁥󠁮󠁧󠁿 — 589/10 (vs ಆಸ್ಟ್ರೇಲಿಯಾ, 1912) * ಇಂಗ್ಲೆಂಡ್ 🏴󠁧󠁢󠁥󠁮󠁧󠁿 — 608/10 (vs ದಕ್ಷಿಣ ಆಫ್ರಿಕಾ, 1948)

ಇದನ್ನೂ ಓದಿ: ಒಂದೇ ಪಂದ್ಯ, ಮೂರು ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧಾರ!

ಒಟ್ಟಾರೆಯಾಗಿ, ಒಂದೇ ದಿನದಲ್ಲಿ ದಾಖಲೆಯ ಶಿಖರವೇರಿ, ಅಷ್ಟೇ ವೇಗವಾಗಿ ಪ್ರಪಾತಕ್ಕೆ ಕುಸಿದ ನ್ಯೂಝಿಲೆಂಡ್​ ತಂಡದ ಪಾಲಿಗೆ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಮರೆಯಲಾಗದ ಕಹಿ ನೆನಪಾಗಿ ಉಳಿಯಲಿದೆಯಾ? ಅಥವಾ ಈ ಕುಸಿತದ ಹೊರತಾಗಿಯೂ ದ್ವಿತೀಯ ಇನಿಂಗ್ಸ್​ ಮೂಲಕ ಇಂಗ್ಲೆಂಡ್ ವಿರುದ್ಧ ಪಾರುಪತ್ಯ ಮೆರೆದು ಗೆದ್ದು ಬೀಗಲಿದೆಯಾ ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ