AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಕ್ರಿಕೆಟ್ ಎಂದರೆ ಕೇವಲ ಟೆಸ್ಟ್, ಒನ್‌ಡೇ ಅಥವಾ ಟಿ20 ಮಾತ್ರವಲ್ಲ! ಗಲ್ಲಿ ಕ್ರಿಕೆಟ್‌ನ ಮಜಾವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರೆ ಹೇಗಿರುತ್ತದೆ? ಅದಕ್ಕೆ ಅತ್ಯುತ್ತಮ ಉದಾಹರಣೆಯೇ 'ಹಾಂಗ್ ಕಾಂಗ್ ಸಿಕ್ಸಸ್' ಟೂರ್ನಿ. ಇಂಟರ್​ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್ ಮಾನ್ಯತೆ ಹೊಂದಿರುವ, ಕೇವಲ 6 ಓವರ್‌ಗಳ ಈ ಚುಟುಕು ಕ್ರಿಕೆಟ್ ಹಬ್ಬದ ಆರಂಭಕ್ಕೆ ಈಗ ಕೌಂಟ್ ಡೌನ್ ಶುರುವಾಗಿದೆ.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Team IndiaImage Credit source: FC
ಝಾಹಿರ್ ಯೂಸುಫ್
|

Updated on: Oct 29, 2026 | 7:35 AM

Share

ಕ್ರಿಕೆಟ್ ಜಗತ್ತಿನ ಅತ್ಯಂತ ವೇಗದ ಪಂದ್ಯಾವಳಿ ಎಂದೇ ಪ್ರಸಿದ್ಧಿಯಾಗಿರುವ ‘ಹಾಂಗ್ ಕಾಂಗ್ ಸಿಕ್ಸಸ್ 2026‘ ಟೂರ್ನಿಯು ಅಕ್ಟೋಬರ್ 30 ರಿಂದ ಆರಂಭವಾಗಲಿದೆ. ಕೌಲೂನ್‌ನ ಟಿನ್ ಕ್ವಾಂಗ್ ರೋಡ್ ರಿಕ್ರೀಯೇಷನ್ ಮೈದಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 12 ಬಲಿಷ್ಠ ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ ಮೂರು ತಂಡಗಳಂತೆ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

  • ಗ್ರೂಪ್ A: ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಂಗ್ ಕಾಂಗ್
  •  ಗ್ರೂಪ್ B: ಶ್ರೀಲಂಕಾ, ಬಾಂಗ್ಲಾದೇಶ್, ಸ್ಕಾಟ್‌ಲ್ಯಾಂಡ್
  • ಗ್ರೂಪ್ C: ಭಾರತ, ಪಾಕಿಸ್ತಾನ್, ಯುಎಇ
  •  ಗ್ರೂಪ್ D: ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್, ಒಮಾನ್

ಈ 12 ಬಲಿಷ್ಠ ತಂಡಗಳ ನಡುವೆ ಮೂರು ದಿನಗಳ ಕಾಲ ಒಟ್ಟು 25 ರೋಮಾಂಚಕ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಶುಕ್ರವಾರ, 30 ಅಕ್ಟೋಬರ್ 2026:

ಪಂದ್ಯದ ಸಮಯ (IST) ಮುಖಾಮುಖಿ ತಂಡಗಳು ಗುಂಪು
ಬೆಳಿಗ್ಗೆ 06:15 ಆಸ್ಟ್ರೇಲಿಯಾ vs ಹಾಂಗ್ ಕಾಂಗ್ ಗ್ರೂಪ್ A
ಬೆಳಿಗ್ಗೆ 07:10 ಬಾಂಗ್ಲಾದೇಶ್ vs ಸ್ಕಾಟ್‌ಲ್ಯಾಂಡ್ ಗ್ರೂಪ್ B
ಬೆಳಿಗ್ಗೆ 08:05 ಪಾಕಿಸ್ತಾನ್ vs ಯುಎಇ ಗ್ರೂಪ್ C
ಬೆಳಿಗ್ಗೆ 09:00 ಸೌತ್ ಆಫ್ರಿಕಾ vs ಒಮಾನ್ ಗ್ರೂಪ್ D
ಬೆಳಿಗ್ಗೆ 09:55 ಹಾಂಗ್ ಕಾಂಗ್ vs ಇಂಗ್ಲೆಂಡ್ ಗ್ರೂಪ್ A
ಬೆಳಿಗ್ಗೆ 10:50 ಬಾಂಗ್ಲಾದೇಶ್ vs ಶ್ರೀಲಂಕಾ ಗ್ರೂಪ್ B
ಮಧ್ಯಾಹ್ನ 11:45 ಭಾರತ vs ಪಾಕಿಸ್ತಾನ್ ಗ್ರೂಪ್ C
ಮಧ್ಯಾಹ್ನ 12:40 ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ ಗ್ರೂಪ್ D
ಮಧ್ಯಾಹ್ನ 01:35 ಇಂಗ್ಲೆಂಡ್ vs ಆಸ್ಟ್ರೇಲಿಯಾ ಗ್ರೂಪ್ A

ಶನಿವಾರ, 31 ಅಕ್ಟೋಬರ್ 2026:

ಪಂದ್ಯದ ಸಮಯ (IST) ಮುಖಾಮುಖಿ ತಂಡಗಳು ಗುಂಪು 
ಬೆಳಿಗ್ಗೆ 06:15 ಒಮಾನ್ vs ಅಫ್ಘಾನಿಸ್ತಾನ್ ಗ್ರೂಪ್ D
ಬೆಳಿಗ್ಗೆ 07:10 ಸ್ಕಾಟ್‌ಲ್ಯಾಂಡ್ vs ಶ್ರೀಲಂಕಾ ಗ್ರೂಪ್ B
ಬೆಳಿಗ್ಗೆ 08:05 ಯುಎಇ vs ಭಾರತ ಗ್ರೂಪ್ C
ಬೆಳಿಗ್ಗೆ 09:00 ಬೌಲ್ ಸೆಮಿಫೈನಲ್ 1 (B3 vs D3) ನಾಕೌಟ್
ಬೆಳಿಗ್ಗೆ 09:55 ಬೌಲ್ ಸೆಮಿಫೈನಲ್ 2 (A3 vs C3) ನಾಕೌಟ್
ಬೆಳಿಗ್ಗೆ 10:50 ಪ್ಲೇಟ್ ಸೆಮಿಫೈನಲ್ 1 (B2 vs D2) ನಾಕೌಟ್
ಮಧ್ಯಾಹ್ನ 11:45 ಪ್ಲೇಟ್ ಸೆಮಿಫೈನಲ್ 2 (A2 vs C2) ನಾಕೌಟ್
ಮಧ್ಯಾಹ್ನ 12:40 ಕಪ್ ಸೆಮಿಫೈನಲ್ 1 (A1 vs C1) ನಾಕೌಟ್
ಮಧ್ಯಾಹ್ನ 01:35 ಕಪ್ ಸೆಮಿಫೈನಲ್ 2 (B1 vs D1) ನಾಕೌಟ್

ಭಾನುವಾರ, 1 ನವೆಂಬರ್ 2026:

ಪಂದ್ಯದ ಸಮಯ (IST) ಪಂದ್ಯದ ವಿವರಗಳು ಸ್ಥಾನದ ನಿರ್ಣಯ
ಬೆಳಿಗ್ಗೆ 07:10 ಬೌಲ್ ಪ್ಲೇ-ಆಫ್ 11 ಮತ್ತು 12ನೇ ಸ್ಥಾನಕ್ಕಾಗಿ
ಬೆಳಿಗ್ಗೆ 08:05 ಪ್ಲೇಟ್ ಪ್ಲೇ-ಆಫ್ 7 ಮತ್ತು 8ನೇ ಸ್ಥಾನಕ್ಕಾಗಿ
ಬೆಳಿಗ್ಗೆ 09:00 ಕಪ್ ಪ್ಲೇ-ಆಫ್ 3 ಮತ್ತು 4ನೇ ಸ್ಥಾನಕ್ಕಾಗಿ
ಬೆಳಿಗ್ಗೆ 09:55 ಮಹಿಳಾ ಪ್ರದರ್ಶನ ಪಂದ್ಯ (ಹಾಂಗ್ ಕಾಂಗ್ vs ಚೀನಾ) ಪ್ರದರ್ಶನ ಪಂದ್ಯ
ಬೆಳಿಗ್ಗೆ 10:50 ಬೌಲ್ ಫೈನಲ್  9 ಮತ್ತು 10ನೇ ಸ್ಥಾನಕ್ಕಾಗಿ
ಮಧ್ಯಾಹ್ನ 11:45 ಪ್ಲೇಟ್ ಫೈನಲ್  5 ಮತ್ತು 6ನೇ ಸ್ಥಾನಕ್ಕಾಗಿ
ಮಧ್ಯಾಹ್ನ 12:40 ಫೈನಲ್  ಚಾಂಪಿಯನ್ಸ್ ಪಟ್ಟಕ್ಕಾಗಿ

ಇದನ್ನೂ ಓದಿ: ಕನ್ನಡತಿ ಸೇರಿ RCB ತಂಡಕ್ಕೆ ನಾಲ್ವರು ಎಂಟ್ರಿ!

  • ಭಾರತ ತಂಡ
  • ಕೃಣಾಲ್ ಪಾಂಡ್ಯ (ನಾಯಕ)
  •  ಟಿ. ನಟರಾಜನ್
  •  ನಿತೀಶ್ ರಾಣಾ
  • ಶಶಾಂಕ್ ಸಿಂಗ್
  • ರಾಹುಲ್ ತೇವಾಟಿಯಾ
  •  ರಾಹುಲ್ ತ್ರಿಪಾಠಿ
  •  ಕುಲ್ವಂತ್ ಖೇಜ್ರೋಲಿಯಾ

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More