T20 World Cup 2021: ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಅಂದುಕೊಂಡಷ್ಟು ಸುಲಭವಲ್ಲ

| Updated By: ಝಾಹಿರ್ ಯೂಸುಫ್

Updated on: Nov 06, 2021 | 2:50 PM

India Sem final chances: ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೂ ಕಡಿಮೆ ರನ್​ ಅಂತರದಿಂದ ಗೆಲ್ಲಬೇಕು. ಇದರಿಂದ ಭಾರತ ತಂಡವು ನಮೀಬಿಯಾ ವಿರುದ್ದ ಗೆಲುವು ದಾಖಲಿಸಿದರೂ ಸೆಮಿಫೈನಲ್​ ಪ್ರವೇಶಿಸುವ ಅವಕಾಶ ದೊರೆಯಲಿದೆ.

T20 World Cup 2021: ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಅಂದುಕೊಂಡಷ್ಟು ಸುಲಭವಲ್ಲ
Team India
Follow us on

ಸತತ ಎರಡು ಗೆಲುವು ದಾಖಲಿಸಿ ಟೀಮ್ ಇಂಡಿಯಾ (Team India) ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅದರಲ್ಲೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್​ ರೇಟ್ ಹೆಚ್ಚಿಸಿಕೊಂಡಿದೆ. ಇದೀಗ ಟೀಮ್ ಇಂಡಿಯಾ ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ. ಅತ್ತ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದ್ದು, ಹೀಗಾಗಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್ ಸೋಲಬೇಕು. ಅಂದರೆ ಮಾತ್ರ ಭಾರತಕ್ಕೆ ಸೆಮಿಫೈನಲ್​​ ಚಾನ್ಸ್ ಇರಲಿದೆ. ಇಲ್ಲಿ ಮತ್ತೊಂದು ವಿಷಯ ಎಂದರೆ ಅಫ್ಘಾನಿಸ್ತಾನ್​ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಬಾರದು. ಏಕೆಂದರೆ ಒಂದು ವೇಳೆ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದರೆ ಮತ್ತೆ ಉತ್ತಮ ರನ್​ ರೇಟ್​ನೊಂದಿಗೆ 2ನೇ ಸ್ಥಾನಕ್ಕೆ ಬರಲಿದೆ.

ಪ್ರಸ್ತುತ ಭಾರತದ ನೆಟ್​ ರನ್​ ರೇಟ್​ +1.619 ಪಡೆದು ರನ್ ರೇಟ್​ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್ +1.277 ನೆಟ್ ರನ್​ ರೇಟ್​ ಹೊಂದಿದ್ದರೂ, ಮೂರು ಜಯ ಸಾಧಿಸಿದ ಪರಿಣಾಮ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ 2 ಜಯ ಸಾಧಿಸಿದರೂ ಅತ್ಯುತ್ತಮ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ್ +1.481 ನೆಟ್ ರನ್​ ರೇಟ್ ಹೊಂದಿದೆ. ಅಂದರೆ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿದರೆ ಮತ್ತೆ ಭಾರತ ನೆಟ್​ ರನ್​ ರೇಟ್​ ಅನ್ನು ಹಿಂದಿಕ್ಕಲಿದೆ.

ಇಲ್ಲಿ ಅಫ್ಘಾನ್ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಚಾನ್ಸ್ ಇರಲಿದೆ. ಆದರೆ ಅದು ಭರ್ಜರಿ ಜಯವಾಗಬಾರದು. ಏಕೆಂದರೆ ಅಫ್ಘಾನ್ ಭರ್ಜರಿ ಜಯ ಸಾಧಿಸಿದ್ರೆ, ಟೀಮ್ ಇಂಡಿಯಾಗೆ ನೆಟ್ ರನ್​ ರೇಟ್​ ಮೂಲಕ ಗೆಲ್ಲಬೇಕಾದ ಅನಿವಾರ್ಯತೆ ಬರಲಿದೆ. ಅಂದರೆ ಅಫ್ಘಾನಿಸ್ತಾನ್ ನೆಟ್ ರನ್​ ರೇಟ್​ನಲ್ಲಿ ಭಾರೀ ಅಂತರ ಕಾಣಿಸಿಕೊಂಡರೆ, ಟೀಮ್ ಇಂಡಿಯಾ ಇಂತಿಷ್ಟು ಓವರ್​ನಲ್ಲಿ ಚೇಸ್ ಮಾಡಿ ಮತ್ತೆ​ ನೆಟ್​ ರನ್​ ರೇಟ್ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಕಡಿಮೆ ಅಂತರದಿಂದ ಗೆಲ್ಲಬೇಕು. ಭರ್ಜರಿ ಜಯ ಸಾಧಿಸಿದರೆ ಟೀಮ್ ಇಂಡಿಯಾ ನಮೀಬಿಯಾ ವಿರುದ್ದ ಭಾರೀ ಅಂತರದಿಂದ ಗೆಲ್ಲಬೇಕಾಗುತ್ತದೆ.

ಹಾಗಾಗಿ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೂ ಕಡಿಮೆ ರನ್​ ಅಂತರದಿಂದ ಗೆಲ್ಲಬೇಕು. ಇದರಿಂದ ಭಾರತ ತಂಡವು ನಮೀಬಿಯಾ ವಿರುದ್ದ ಗೆಲುವು ದಾಖಲಿಸಿದರೂ ಸೆಮಿಫೈನಲ್​ ಪ್ರವೇಶಿಸುವ ಅವಕಾಶ ದೊರೆಯಲಿದೆ. ಈ ಎಲ್ಲಾ ಕಾರಣದಿಂದಾಗಿ ಇದೀಗ ಅಫ್ಘಾನಿಸ್ತಾನ್ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(how India can still reach the semi-finals in T20 World Cup 2021)