
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನಾಳೆ (ಫೆ.19) ಚಾಲನೆ ಸಿಗಲಿದೆ. 8 ತಂಡಗಳ ನಡುವಣ ಈ ಕದನವು ಏಕದಿನ ಸ್ವರೂಪದಲ್ಲಿ ನಡೆಯುತ್ತಿರುವುದು ವಿಶೇಷ. ಹೀಗಾಗಿಯೇ ಈ ಟೂರ್ನಿಯನ್ನು ಮಿನಿ ವಿಶ್ವಕಪ್ ಎಂದು ಕರೆಯಲಾಗುತ್ತದೆ. ಇಲ್ಲಿ 8 ತಂಡಗಳು ಕಾಣಿಸಿಕೊಂಡರೂ ಇಡೀ ಟೂರ್ನಿಯಲ್ಲಿ ನಡೆಯುವುದು ಕೇವಲ 15 ಪಂದ್ಯಗಳು ಮಾತ್ರ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿ ಪಂದ್ಯ ನಡೆಯಲಿದೆ. ಅಂದರೆ ಆಯಾ ಗ್ರೂಪ್ನಲ್ಲಿನ ತಂಡಗಳು ಪರಸ್ಪರ ಸೆಣಸಲಿದೆ.
ಮೊದಲ ಹೇಳಿದಂತೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ನಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ. ಇಲ್ಲಿ ಗ್ರೂಪ್-ಎ ನಲ್ಲಿರುವ ಭಾರತ ತಂಡವು ಪಾಕಿಸ್ತಾನ್, ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧ ತಲಾ ಒಂದು ಪಂದ್ಯವಾಡಲಿದೆ. ಅದರಂತೆ ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 3 ಪಂದ್ಯಗಳನ್ನಾಡಲಿದ್ದಾರೆ.
ಇಲ್ಲಿ ಎರಡು ಗ್ರೂಪ್ಗಳಿಗೆ ಬೇರೆ ಬೇರೆ ಅಂಕಪಟ್ಟಿಯಲ್ಲಿ ಇರಲಿದೆ. ಗ್ರೂಪ್-ಎ ಮತ್ತು ಗ್ರೂಪ್-ಬಿ ಪಾಯಿಂಟ್ಸ್ ಟೇಬಲ್ಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತದೆ. ಅಂದರೆ ಲೀಗ್ ಹಂತದಿಂದ ನಾಲ್ಕು ತಂಡಗಳು ಹೊರಬೀಳಲಿದ್ದು, 4 ಟೀಮ್ಗಳು ಮುಂದಿನ ಹಂತಕ್ಕೇರಲಿದೆ.
ಇನ್ನು ಸೆಮಿಫೈನಲ್ನಲ್ಲಿ ಆಯಾ ಗ್ರೂಪ್ನಿಂದ ಅರ್ಹತೆ ಪಡೆದ ತಂಡಗಳು ಪರಸ್ಪರ ವಿರುದ್ಧವಾಗಿ ಸೆಣಸಲಿದೆ. ಅಂದರೆ ಲೀಗ್ ಹಂತದಲ್ಲಿ ಮುಖಾಮುಖಿಯಾದ ತಂಡಗಳು ಸೆಮಿಫೈನಲ್ನಲ್ಲಿ ಮತ್ತೆ ಎದುರು ಬದುರಾಗುವುದಿಲ್ಲ.
ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಮೊದಲ ಮತ್ತು ಎರಡನೇ ಸೆಮಿಫೈನಲ್ಗಳಲ್ಲಿ ಗೆದ್ದ ತಂಡಗಳು ಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲಿ 12 ಪಂದ್ಯಗಳು ಮತ್ತು ನಾಕೌಟ್ ಹಂತದಲ್ಲಿ ಮೂರು ಪಂದ್ಯಗಳು ನಡೆಯಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ
| ದಿನಾಂಕ | ಪಂದ್ಯ | ಸ್ಥಳ | ಸಮಯ (IST) |
|---|---|---|---|
| ಫೆಬ್ರವರಿ 19 | ಪಾಕಿಸ್ತಾನ್ v ನ್ಯೂಝಿಲೆಂಡ್ | ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ | 2:30 PM |
| ಫೆಬ್ರವರಿ 20 | ಬಾಂಗ್ಲಾದೇಶ್ v ಭಾರತ | ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ | 2:30 PM |
| ಫೆಬ್ರವರಿ 21 | ಅಫ್ಘಾನಿಸ್ತಾನ v ಸೌತ್ ಆಫ್ರಿಕಾ | ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ | 2:30 PM |
| 22 ಫೆಬ್ರವರಿ | ಆಸ್ಟ್ರೇಲಿಯಾ v ಇಂಗ್ಲೆಂಡ್ | ಗದ್ದಾಫಿ ಕ್ರೀಡಾಂಗಣ, ಲಾಹೋರ್ | 2:30 PM |
| ಫೆಬ್ರವರಿ 23 | ಪಾಕಿಸ್ತಾನ್ v ಭಾರತ | ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ | 2:30 PM |
| 24 ಫೆಬ್ರವರಿ | ಬಾಂಗ್ಲಾದೇಶ್ v ನ್ಯೂಝಿಲೆಂಡ್ | ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ | 2:30 PM |
| 25 ಫೆಬ್ರವರಿ | ಆಸ್ಟ್ರೇಲಿಯಾ v ಸೌತ್ ಆಫ್ರಿಕಾ | ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ | 2:30 PM |
| ಫೆಬ್ರವರಿ 26 | ಅಫ್ಘಾನಿಸ್ತಾನ್ v ಇಂಗ್ಲೆಂಡ್ | ಗದ್ದಾಫಿ ಕ್ರೀಡಾಂಗಣ, ಲಾಹೋರ್ | 2:30 PM |
| ಫೆಬ್ರವರಿ 27 | ಪಾಕಿಸ್ತಾನ್ v ಬಾಂಗ್ಲಾದೇಶ್ | ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ | 2:30 PM |
| 28 ಫೆಬ್ರವರಿ | ಅಫ್ಘಾನಿಸ್ತಾನ್ v ಆಸ್ಟ್ರೇಲಿಯಾ | ಗದ್ದಾಫಿ ಕ್ರೀಡಾಂಗಣ, ಲಾಹೋರ್ | 2:30 PM |
| ಮಾರ್ಚ್ 1 | ಸೌತ್ ಆಫ್ರಿಕಾ v ಇಂಗ್ಲೆಂಡ್ | ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ | 2:30 PM |
| ಮಾರ್ಚ್ 2 | ನ್ಯೂಝಿಲೆಂಡ್ v ಭಾರತ | ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ | 2:30 PM |
| ಮಾರ್ಚ್ 4 | ಸೆಮಿಫೈನಲ್ 1 | ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ | 2:30 PM |
| ಮಾರ್ಚ್ 5 | ಸೆಮಿಫೈನಲ್ 2 | ಗದ್ದಾಫಿ ಕ್ರೀಡಾಂಗಣ, ಲಾಹೋರ್ | 2:30 PM |
| ಮಾರ್ಚ್ 9 | ಫೈನಲ್ | ಲಾಹೋರ್ ಅಥವಾ ದುಬೈ | 2:30 PM |
Published On - 8:06 am, Tue, 18 February 25