ಐಸಿಸಿ ಸಾಕ್ಸ್​ ನಿಯಮ: ಬಣ್ಣ ಬದಲಿಸಿದ್ರೆ ಬ್ಯಾನ್ ಆಗ್ಬಹುದು..!

ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ, ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಸಾಕ್ಸ್ ಬದಲಿಸಿ ವಿವಾದಕ್ಕೀಡಾಗಿದ್ದರು. ಲೀಡ್ಸ್ ಟೆಸ್ಟ್‌ನ ಎರಡನೇ ದಿನದಂದು ಗಿಲ್ ಕಪ್ಪು ಸಾಕ್ಸ್ ಧರಿಸಿ ಬ್ಯಾಟಿಂಗ್ ಮಾಡಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೇಳೆ ಅಂಪೈರ್ ಎಚ್ಚರಿಕೆ ನೀಡಿದ್ದರಿಂದ ಮರು ದಿನ ಗಿಲ್ ಬಿಳಿ ಸಾಕ್ಸ್ ಧರಿಸಿ ಬ್ಯಾಟಿಂಗ್​ಗೆ ಆಗಮಿಸಿದ್ದರು.

ಐಸಿಸಿ ಸಾಕ್ಸ್​ ನಿಯಮ: ಬಣ್ಣ ಬದಲಿಸಿದ್ರೆ ಬ್ಯಾನ್ ಆಗ್ಬಹುದು..!
Shubman Gill

Updated on: Jan 31, 2026 | 10:54 AM

ಕ್ರಿಕೆಟ್ ಅನ್ನು ಜಂಟಲ್‌ಮ್ಯಾನ್ಸ್ ಗೇಮ್ ಎಂದು ಕರೆಯಲಾಗುತ್ತದೆ. ಈ ಜಂಟಲ್​ಮ್ಯಾನ್ಸ್ ಗೇಮ್​ನಲ್ಲಿ ಜಂಟಲ್​ಮ್ಯಾನ್​ನಂತೆ ಕಾಣಿಸಿಕೊಳ್ಳುವುದು ಕೂಡ ಕಡ್ಡಾಯ. ಇದಕ್ಕಾಗಿಯೇ ಕೆಲ ಡ್ರೆಸ್ ಕೋಡ್​ಗಳನ್ನು ಸಹ ರೂಪಿಸಲಾಗಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಐಸಿಸಿಯ ಉಡುಪು ಮತ್ತು ಸಲಕರಣೆ ನಿಯಮಗಳ ಅಡಿಯಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ವೈಟ್ ಸಾಕ್ಸ್​ ಧರಿಸಿ ಕಣಕ್ಕಿಳಿಯಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಆಟಗಾರನು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಐಸಿಸಿ ಸಾಕ್ಸ್ ನಿಯಮ:

  • ಐಸಿಸಿ ನಿಯಮಗಳ 19.45 ನೇ ವಿಧಿಯ ಪ್ರಕಾರ, ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ ಬಣ್ಣದ ಸಾಕ್ಸ್ ಧರಿಸಬೇಕು. ಬಿಳಿ ಬಣ್ಣದ ಸಾಕ್ಸ್ ಇಲ್ಲದಿದ್ದರೆ ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಧರಿಸಬಹುದು.
  • ಬಿಳಿ, ಕ್ರೀಮ್ ಅಥವಾ ತಿಳಿ ಬೂದು ಬಣ್ಣಗಳ ಸಾಕ್ಸ್​ ಅನ್ನು ಹೊರತುಪಡಿಸಿ ಇತರೆ ಯಾವುದೇ ಬಣ್ಣದ ಸಾಕ್ಸ್ ಧರಿಸಲು ಅವಕಾಶವಿಲ್ಲ.
  • ಕಪ್ಪು, ನೀಲಿ ಅಥವಾ ಕೆಂಪು ಸಾಕ್ಸ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಸಾಕ್ಸ್‌ಗಳ ಮೇಲಿನ ಲೋಗೋಗಳ ಮೇಲೂ ನಿರ್ಬಂಧಗಳಿವೆ. ಈ ಲೋಗೋಗಳು ಗರಿಷ್ಠ 2 ಚದರ ಇಂಚುಗಳಿಗೆ (12.9 ಸೆಂ.ಮೀ²) ಸೀಮಿತವಾಗಿರಬೇಕು.

ನಿಯಮ ಉಲ್ಲಂಘಿಸಿದರೆ?

ಐಸಿಸಿಯ ಈ ನಿಯಮವು ಟೆಸ್ಟ್ ಆಡುವ ಎಲ್ಲಾ ತಂಡಗಳಿಗೂ ಮತ್ತು ಆಟಗಾರರಿಗೂ ಅನ್ವಯಿಸುತ್ತದೆ. ಒಂದು ವೇಳೆ ಆಟಗಾರನು ನಿಯಮ ಮೀರಿ ಬೇರೆ ಬಣ್ಣದ ಸಾಕ್ಸ್ ಧರಿಸಿದರೆ, ಮ್ಯಾಚ್ ರೆಫರಿ ಅಥವಾ ಅಂಪೈರ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಬಹುದು. ಅಷ್ಟೇ ಅಲ್ಲದೆ  ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಶಿಕ್ಷೆಗೆ ಗುರಿಯಾಗಿಸಬಹುದು.

ಐಸಿಸಿ ನಿಯಮದ ಪ್ರಕಾರ, ಇತರೆ ಬಣ್ಣದ ಸಾಕ್ಸ್ ಧರಿಸಿ ಕಣಕ್ಕಿಳಿಯುವುದನ್ನು ಲೆವೆಲ್ 1 ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದರಂತೆ ಆಟಗಾರನಿಗೆ ಅವರ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಬಹುದು ಮತ್ತು ಡಿಮೆರಿಟ್ ಅಂಕಗಳನ್ನು ನೀಡಬಹುದು.

ಆದಾಗ್ಯೂ, ಮೊದಲ ಬಾರಿಗೆ ಅಪರಾಧವಾಗಿದ್ದರೆ, ಅಂಪೈರ್ ಎಚ್ಚರಿಕೆ ನೀಡಬಹುದು. ಈ ಎಚ್ಚರಿಕೆಯ ಹೊರತಾಗಿಯೂ, ಉದ್ದೇಶಪೂರ್ವಕ ಅಥವಾ ಪುನರಾವರ್ತಿತ ಅಪರಾಧಗಳಿಗೆ ಪಂದ್ಯ ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಇದಾಗ್ಯೂ ಆಟಗಾರನು ಮತ್ತದೇ ತಪ್ಪನ್ನು ಪುನರಾವರ್ತಿಸಿದರೆ ಪಂದ್ಯದಿಂದ ನಿಷೇಧಿಸಬಹುದು.

ಗಿಲ್ ಸಾಕ್ಸ್ ಮತ್ತು ವಿವಾದ:

ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ, ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಸಾಕ್ಸ್ ಬದಲಿಸಿ ವಿವಾದಕ್ಕೀಡಾಗಿದ್ದರು. ಲೀಡ್ಸ್ ಟೆಸ್ಟ್‌ನ ಎರಡನೇ ದಿನದಂದು ಗಿಲ್ ಕಪ್ಪು ಸಾಕ್ಸ್ ಧರಿಸಿ ಬ್ಯಾಟಿಂಗ್ ಮಾಡಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೇಳೆ ಅಂಪೈರ್ ಎಚ್ಚರಿಕೆ ನೀಡಿದ್ದರಿಂದ ಮರು ದಿನ ಗಿಲ್ ಬಿಳಿ ಸಾಕ್ಸ್ ಧರಿಸಿ ಬ್ಯಾಟಿಂಗ್​ಗೆ ಆಗಮಿಸಿದ್ದರು.

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡದ ವಿಶ್ವ ದಾಖಲೆಯ ಚೇಸಿಂಗ್

ಇದೀಗ ಐಸಿಸಿ ಟೆಸ್ಟ್ ಕ್ರಿಕೆಟ್​ನಲ್ಲಿ ಬಿಳಿ ಅಥವಾ  ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಜಂಟಲ್​​ಮ್ಯಾನ್ಸ್​ ಗೇಮ್​ನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮುಂದಾಗಿದೆ.