VIDEO: ಪಾಕ್ ಆಟಗಾರನ ಕ್ಯಾಚ್ಗೆ ಕ್ರಿಕೆಟ್ ಪ್ರೇಮಿಗಳು ಮೂಕವಿಸ್ಮಿತ
ಅಂಡರ್-19 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಯುವ ಆಟಗಾರ ಅಹ್ಮದ್ ಹುಸೇನ್ ಹಿಡಿದ ಕ್ಯಾಚ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಬ್ಯಾಟ್ಸ್‌ಮನ್ ಮನು ಸಾರಸ್ವತ್, ಪಾಕ್ ಬೌಲರ್ ಮೊಹಮ್ಮದ್ ಸಯ್ಯಮ್ ಅವರ ಎಸೆತದಲ್ಲಿ ಲಾಫ್ಟೆಡ್ ಶಾಟ್ ಬಾರಿಸಿದ್ದರು.

ಆದರೆ ಚೆಂಡು ಲಾಂಗ್ ಆಫ್ ಕಡೆಗೆ ಹೋಗುವ ಬದಲು, ಗಾಳಿಯಲ್ಲಿ ಥರ್ಡ್ ಮ್ಯಾನ್ ಕಡೆಗೆ ಹಾರಿತು. ಈ ವೇಳೆ ಶಾರ್ಟ್ ಥರ್ಡ್ ಮ್ಯಾನ್ ಸ್ಥಾನದಲ್ಲಿ ಫೀಲ್ಡಿಂಗ್ನಲ್ಲಿದ್ದ ಅಹ್ಮದ್ ಹುಸೇನ್ ಹಿಂದಕ್ಕೆ ಓಡಿ ಹೋಗಿ ಅದ್ಭುತ ಡೈವಿಂಗ್ ಮೂಲಕ ಚೆಂಡನ್ನು ಹಿಡಿದಿದ್ದಾರೆ. ಇದೀಗ ಈ ಅತ್ಯದ್ಭುತ ಕ್ಯಾಚ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡವು 48.1 ಓವರ್ಗಳಲ್ಲಿ 187 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು 43.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಪಾಕಿಸ್ತಾನ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.