ಐಸಿಸಿ ಏಕದಿನ ವಿಶ್ವಕಪ್ (ODI World Cup) ರೋಚಕತೆ ಸೃಷ್ಟಿಸುತ್ತಿದೆ. ಇಂದು ನಡೆಯಲಿರುವ ಹದಿನೈದನೇ ಪಂದ್ಯದಲ್ಲಿ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿ ಆಗುತ್ತಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಶ್ರೀಲಂಕಾ ವಿರುದ್ಧ 428 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 311 ರನ್ಗಳ ಬೃಹತ್ ರನ್ ಕಲೆಹಾಕಿದ ಹರಿಣಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕ್ವಿಂಟನ್ ಡಿ ಕಾಕ್ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ರಾಸ್ಸಿ ವ್ಯಾನ್ ಡೆರ್ ಡುಸೆನ್, ಕ್ಲಾಸೆನ್ ಮತ್ತು ಐಡೆನ್ ಮಾರ್ಕ್ರಾಮ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ನಾಯಕ ಬವುಮಾ ಫಾರ್ಮ್ಗೆ ಮರಳಬೇಕು. ಬೌಲಿಂಗ್ನಲ್ಲೂ ಆಫ್ರಿಕಾನ್ನರು ಲಯ ಕಂಡುಕೊಂಡಿದ್ದಾರೆ. ಕಗಿಸೊ ರಬಾಡ, ಎನ್ಗಿಡಿ, ರಬಾಡ, ಮಹರಾಜ್, ಜಾನ್ಸೆನ್ರಂತಹ ಅಪಾಯಕಾರಿ ಬೌಲರ್ಗಳಿದ್ದಾರೆ.
ಒಂದೇ ಓವರ್ನಲ್ಲಿ 20 ರನ್ ನೀಡಿ ಕ್ಯಾಮೆರಾ ಮೇಲೆ ಕೋಪ ತೋರಿದ ಸ್ಯಾಮ್ ಕರನ್; ವಿಡಿಯೋ ನೋಡಿ
ಇತ್ತ ನೆದರ್ಲೆಂಡ್ಸ್ ಆಡಿರುವ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ವಿರುದ್ಧ ಸೋತಿದೆ. ಮೊದ ಗೆಲುವಿನ ನಿರೀಕ್ಷೆಯಲ್ಲಿರುವ ನೆದರ್ಲೆಂಡ್ಸ್ ತಂಡದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಕೂಡ ಇದೆ. ಡಚ್ ಪಡೆಯಲ್ಲಿ ಸಾಕಷ್ಟು ಕೌಶಲ್ಯ ಮತ್ತು ಅನುಭವಿ ಆಟಗಾರರಿದ್ದಾರೆ. ಆದರೆ, ಹೆಚ್ಚಿನವರು ಟಿ20 ಗಳಲ್ಲಿ ಆಡಿವ ಅನುಭವ ಇರುವವರು. ಏಕದಿನ ಸ್ವರೂಪದಲ್ಲಿ ಹೆಚ್ಚು ಕಣಕ್ಕಿಳಿಯಲಿಲ್ಲ. ಆದರೂ ವಿಕ್ರಂಜಿತ್ ಸಿಂಗ್, ಕಾಲಿನ್ ಅಕರ್ಮನ್, ಮ್ಯಾಕ್ಸ್, ಬಾಸ್ ಡಿ ಲೀಡೆ ಅಬ್ಬರಿಸಿದರೆ ತಂಡ ಮೊತ್ತ ಕಲೆಹಾಕಬಹುದು.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣವು ಐಸಿಸಿ ವಿಶ್ವಕಪ್ 2023 ರಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಿದೆ. ಇಲ್ಲಿನ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳ ನಡುವೆ ಕಠಿಣ ಸ್ಪರ್ಧೆಯಲ್ಲು ಒಡ್ಡುತ್ತದೆ. ಇದು ಹಗಲು-ರಾತ್ರಿ (D/N) ಆಟವಾಗಿರುವುದರಿಂದ, ಇಬ್ಬನಿಯ ಅಪಾಯವಿದೆ. ಹೀಗಾಗಿ ಎರಡನೇ ಬೌಲಿಂಗ್ ಮೇಲೆ ಪರಿಣಾಮ ಬೀರಬಹುದು. ಚಿಕ್ಕ ಗ್ರೌಂಡ್ ಆಗಿರುವುದರಿಂದ ಬೌಂಡರಿಗಳು ತುಂಬಾ ಹತ್ತಿರವಿದೆ. ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿದ ಸೀಮಿತ ಸಂಖ್ಯೆಯ ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್ ಮೊತ್ತವು ಕೇವಲ 197 ಆಗಿದೆ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ನೆದರ್ಲೆಂಡ್ಸ್ ತಂಡ: ವಿಕ್ರಂಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗೆಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಿಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವಾನ್ ಮೀಕೆರೆನ್, ವೆಸ್ಲಿ ಬೀಕ್, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ