AUS vs SL ICC World Cup 2023: ಶ್ರೀಲಂಕಾ ವಿರುದ್ಧ ಜಯ ಸಾಧಿಸಿದ ಆಸ್ಟ್ರೇಲಿಯಾ
Australia vs Sri Lanka, ICC world Cup 2023 Live Score Updates: ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ 104 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆಸ್ಟ್ರೇಲಿಯಾ ತಂಡ 64 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ ತಂಡ ಕೇವಲ 36 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ನಾಲ್ಕು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು,
ಏಕದಿನ ವಿಶ್ವಕಪ್ನ 14ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 43.3 ಓವರ್ಗಳಲ್ಲಿ 209 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 35.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಚಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್.
LIVE Cricket Score & Updates
-
AUS vs SL ICC World Cup 2023 Live Score: ಆಸ್ಟ್ರೇಲಿಯಾಗೆ ಭರ್ಜರಿ ಜಯ
ದುನಿತ್ ವೆಲ್ಲಲಾಗೆ ಎಸೆದ 36ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿದ ಮಾರ್ಕಸ್ ಸ್ಟೋಯಿನಿಸ್.
ಈ ಸಿಕ್ಸ್ನೊಂದಿಗೆ ಗೆಲುವಿನ ಗುರಿ ಮುಟ್ಟಿದ ಆಸ್ಟ್ರೇಲಿಯಾ.
ಶ್ರೀಲಂಕಾ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಕಾಂಗರೂ ಪಡೆ.
ಶ್ರೀಲಂಕಾ– 209 (43.3)
ಆಸ್ಟ್ರೇಲಿಯಾ– 215/5 (35.2)
-
AUS vs SL ICC World Cup 2023 Live Score: ಆಸ್ಟ್ರೇಲಿಯಾದ 5ನೇ ವಿಕೆಟ್ ಪತನ
ದುನಿತ್ ವೆಲ್ಲಲಾಗೆ ಎಸೆದ 34ನೇ ಓವರ್ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಜೋಶ್ ಇಂಗ್ಲಿಸ್.
59 ಎಸೆತಗಳಲ್ಲಿ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲಿಸ್.
ಕ್ರೀಸ್ನಲ್ಲಿ ಮಾರ್ಕಸ್ ಸ್ಟೋಯಿನಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
AUS 202/5 (34)
-
AUS vs SL ICC World Cup 2023 Live Score: ಮ್ಯಾಕ್ಸ್‌ವೆಲ್ ಮ್ಯಾಕ್ಸಿಮಮ್
ಮಹೀಶ್ ತೀಕ್ಷಣ ಎಸೆದ 32ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಸಿಕ್ಸ್ ಬಾರಿಸಿದ ಮ್ಯಾಕ್ಸಿ.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
AUS 189/4 (32)
AUS vs SL ICC World Cup 2023 Live Score: ಮ್ಯಾಕ್ಸ್‌ವೆಲ್ ಮಾರ್ಕ್
ಮಹೀಶ್ ತೀಕ್ಷಣ ಎಸೆದ 30ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
40 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 163 ರನ್ಗಳು.
AUS 163/4 (30)
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
AUS vs SL ICC World Cup 2023 Live Score: ಆಸ್ಟ್ರೇಲಿಯಾದ 4ನೇ ವಿಕೆಟ್ ಪತನ
ದಿಲ್ಶನ್ ಮಧುಶಂಕ ಎಸೆದ 29ನೇ ಓವರ್ನ 5ನೇ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಮಾರ್ನಸ್ ಲಾಬುಶೇನ್.
60 ಎಸೆತಗಳಲ್ಲಿ 40 ರನ್ ಬಾರಿಸಿ ಔಟಾದ ಮಾರ್ನಸ್.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
AUS 158/4 (29)
AUS vs SL ICC World Cup 2023 Live Score: ಅರ್ಧಶತಕ ಪೂರೈಸಿದ ಇಂಗ್ಲಿಸ್
ಲಹಿರು ಕುಮಾರ ಎಸೆದ 27ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಜೋಶ್ ಇಂಗ್ಲಿಸ್.
ಈ ಫೋರ್ನೊಂದಿಗೆ 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜೋಶ್ ಇಂಗ್ಲಿಸ್.
AUS 153/3 (27)
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
AUS vs SL ICC World Cup 2023 Live Score: 25 ಓವರ್ಗಳು ಮುಕ್ತಾಯ
ಲಹಿರು ಕುಮಾರ ಎಸೆದ 25ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಜೋಶ್ ಇಂಗ್ಲಿಸ್.
25 ಓವರ್ಗಳ ಮುಕ್ತಾಯದ ವೇಳೆಗೆ 141 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ (45) ಹಾಗೂ ಮಾರ್ನಸ್ ಲಾಬುಶೇನ್ (33) ಬ್ಯಾಟಿಂಗ್.
AUS 141/3 (25)
AUS vs SL ICC World Cup 2023 Live Score: ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್
20 ಓವರ್ಗಳ ಮುಕ್ತಾಯದ ವೇಳೆಗೆ 109 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
AUS 109/3 (20)
ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ (52) ಔಟ್.
AUS vs SL ICC World Cup 2023 Live Score: ಆಸ್ಟ್ರೇಲಿಯಾದ 3ನೇ ವಿಕೆಟ್ ಪತನ
14ನೇ ಓವರ್ನಲ್ಲಿ ರನೌಟ್ ಆಗಿ ಹೊರ ನಡೆದ ಮಿಚೆಲ್ ಮಾರ್ಷ್.
51 ಎಸೆತಗಳಲ್ಲಿ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾರ್ಷ್.
15 ಓವರ್ಗಳ ಮುಕ್ತಾಯದ ವೇಳೆಗೆ
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
AUS 89/3 (15)
AUS vs SL ICC World Cup 2023 Live Score: 10 ಓವರ್ ಮುಕ್ತಾಯ
10 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 64 ರನ್ಗಳು.
ಶ್ರೀಲಂಕಾ ಪರ 2 ವಿಕೆಟ್ ಕಬಳಿಸಿದ ದಿಲ್ಶನ್ ಮಧುಶಂಕ.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
AUS 64/2 (10)
AUS vs SL ICC World Cup 2023 Live Score: ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ
8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
AUS 50/2 (8)
ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ (0) ಔಟ್.
AUS vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
5 ಓವರ್ಗಳ ಮುಕ್ತಾಯದ ವೇಳೆಗೆ 35 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರಿಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ (0) ಔಟ್.
AUS 35/2 (5)
AUS vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆದ ಡೇವಿಡ್ ವಾರ್ನರ್.
6 ಎಸೆತಗಳಲ್ಲಿ 11 ರನ್ ಬಾರಿಸಿ ಔಟಾದ ಡೇವಿಡ್ ವಾರ್ನರ್.
ಕೊನೆಯ ಎಸೆತದಲ್ಲಿ ಸ್ವೀವ್ ಸ್ಮಿತ್ (0) ಎಲ್ಬಿಡಬ್ಲ್ಯೂ.
ಒಂದೇ ಓವರ್ನಲ್ಲಿ 2 ವಿಕೆಟ್ ಕಬಳಿಸಿದ ಮಧುಶಂಕ.
AUS 24/2 (4)
AUS vs SL ICC World Cup 2023 Live Score: ಶ್ರೀಲಂಕಾ ಇನಿಂಗ್ಸ್ ಆರಂಭ
ಲಹಿರು ಕುಮಾರ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಫೋರ್ ಬಾರಿಸಿದ ಮಿಚೆಲ್ ಮಾರ್ಷ್.
ಕೊನೆಯ ಎಸೆತದಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್.
ಆಸ್ಟ್ರೇಲಿಯಾ ತಂಡದಿಂದ ಉತ್ತಮ ಆರಂಭ.
AUS 15/0 (1)
AUS vs SL ICC World Cup 2023 Live Score: ಶ್ರೀಲಂಕಾ ಆಲೌಟ್
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 44ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ಚರಿತ್ ಅಸಲಂಕಾ (25). ಇದರೊಂದಿಗೆ ಶ್ರೀಲಂಕಾ ತಂಡ ಆಲೌಟ್.
ಆಸ್ಟ್ರೇಲಿಯಾ ತಂಡಕ್ಕೆ 210 ರನ್ಗಳ ಸುಲಭ ಗುರಿ ನೀಡಿದ ಶ್ರೀಲಂಕಾ.
ಶ್ರೀಲಂಕಾ– 209 (43.3)
AUS vs SL ICC World Cup 2023 Live Score: ಆಸ್ಟ್ರೇಲಿಯಾ ಮಿಂಚಿನ ದಾಳಿ
ಮಿಚೆಲ್ ಸ್ಟಾರ್ಕ್ ಎಸೆದ 41ನೇ ಓವರ್ನ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಲಹಿರು ಕುಮಾರ.
125 ರನ್ಗೆ 1 ವಿಕೆಟ್ ಕಳೆದುಕೊಂಡ ಶ್ರೀಲಂಕಾ 204 ಆಗುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದೆ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ದಿಲ್ಶನ್ ಮಧುಶಂಕ ಬ್ಯಾಟಿಂಗ್.
SL 204/9 (40.5)
AUS vs SL ICC World Cup 2023 Live Score: 40 ಓವರ್ಗಳು ಮುಕ್ತಾಯ
40 ಓವರ್ಗಳ ಮುಕ್ತಾಯದ ವೇಳೆಗೆ 199 ರನ್ ಕಲೆಹಾಕಿದ ಶ್ರೀಲಂಕಾ ತಂಡ.
8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಲಹಿರು ಕುಮಾರ ಬ್ಯಾಟಿಂಗ್.
SL 199/8 (40)
AUS vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಚರಿತ್
ಆ್ಯಡಂ ಝಂಪಾ ಎಸೆದ 38ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಚರಿತ್ ಅಸಲಂಕಾ.
ಕೊನೆಯ ಎಸೆತದಲ್ಲಿ ಚಮಿಕಾ ಕರುಣರತ್ನೆಯನ್ನು ಎಲ್ಬಿಡಬ್ಲ್ಯೂ ಮಾಡಿದ ಆ್ಯಡಂ ಝಂಪಾ.
ಆಸ್ಟ್ರೇಲಿಯಾ ತಂಡಕ್ಕೆ 7ನೇ ಯಶಸ್ಸು.
SL 196/7 (38)
AUS vs SL ICC World Cup 2023 Live Score: ಶ್ರೀಲಂಕಾ ತಂಡದ 6ನೇ ವಿಕೆಟ್ ಪತನ
35ನೇ ಓವರ್ನ 5ನೇ ಎಸೆತದಲ್ಲಿ ರನೌಟ್ ಆಗಿ ಹೊರನಡೆದ ದುನಿತ್ ವೆಲ್ಲಲಾಗೆ.
ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ ಯುವ ಎಡಗೈ ಬ್ಯಾಟರ್.
35 ಓವರ್ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ ತಂಡದ ಸ್ಕೋರ್ 35 ರನ್ಗಳು.
SL 184/6 (35)
AUS vs SL ICC World Cup 2023 Live Score: 33 ಓವರ್ಗಳು ಮುಕ್ತಾಯ
ಮಿಚೆಲ್ ಸ್ಟಾರ್ಕ್ ಎಸೆದ 33ನೇ ಓವರ್ನ 3ನೇ ಎಸೆತದಲ್ಲಿ ಧನಂಜಯ ಡಿಸಿಲ್ವಾ ಕ್ಲೀನ್ ಬೌಲ್ಡ್.
13 ಎಸೆತಗಳಲ್ಲಿ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಧನಂಜಯ ಡಿಸಿಲ್ವಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ದುನಿತ್ ವೆಲ್ಲಲಾಗೆ ಬ್ಯಾಟಿಂಗ್.
SL 180/5 (33)
AUS vs SL ICC World Cup 2023 Live Score: ಮಳೆಯಿಂದಾಗಿ ಪಂದ್ಯ ಸ್ಥಗಿತ
ಲಕ್ನೋದಲ್ಲಿ ತುಂತುರು ಮಳೆಯಾಗುತ್ತಿದ್ದು, ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
SL 178/4 (32.1)
AUS vs SL ICC World Cup 2023 Live Score: ಶ್ರೀಲಂಕಾ 4ನೇ ವಿಕೆಟ್ ಪತನ
ಆ್ಯಡಂ ಝಂಪಾ ಎಸೆದ 30ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆದ ಸದೀರ ಸಮರವಿಕ್ರಮ.
8 ಎಸೆತಗಳಲ್ಲಿ 8 ರನ್ ಬಾರಿಸಿ ನಿರ್ಮಿಸಿದ ಸದೀರ ಸಮರ ವಿಕ್ರಮ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
SL 168/4 (30)
AUS vs SL ICC World Cup 2023 Live Score: ಆಸ್ಟ್ರೇಲಿಯಾ ತಂಡಕ್ಕೆ 3ನೇ ಯಶಸ್ಸು
ಆ್ಯಡಂ ಝಂಪಾ ಎಸೆದ 28ನೇ ಓವರ್ನ ಕೊನೆಯ ಎಸೆತದಲ್ಲಿ ವಾರ್ನರ್ಗೆ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್.
13 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.
SL 166/3 (29)
AUS vs SL ICC World Cup 2023 Live Score: ಶ್ರೀಲಂಕಾ 2ನೇ ವಿಕೆಟ್ ಪತನ
ಪ್ಯಾಟ್ ಕಮಿನ್ಸ್ ಎಸೆದ 27ನೇ ಓವರ್ನ 2ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಕುಸಾಲ್ ಪೆರೇರಾ.
82 ಎಸೆತಗಳಲ್ಲಿ 78 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಪೆರೇರಾ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 157/2 (26.2)
AUS vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಜೋಶ್ ಹ್ಯಾಝಲ್‌ವುಡ್ ಎಸೆದ 23ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕುಸಾಲ್ ಪೆರೇರಾ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 137/1 (23)
AUS vs SL ICC World Cup 2023 Live Score: ಶ್ರೀಲಂಕಾ ಮೊದಲ ವಿಕೆಟ್ ಪತನ
ಪ್ಯಾಟ್ ಕಮಿನ್ಸ್ ಎಸೆದ 22ನೇ ಓವರ್ನ 4ನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಪಾತುಮ್ ನಿಸ್ಸಂಕಾ.
67 ಎಸೆತಗಳಲ್ಲಿ 61 ರನ್ ಬಾರಿಸಿ ನಿರ್ಗಮಿಸಿದ ಪಾತುಮ್ ನಿಸ್ಸಂಕಾ.
ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು.
SL 125/1 (22)
AUS vs SL ICC World Cup 2023 Live Score: ಶ್ರೀಲಂಕಾ ತಂಡದ ಭರ್ಜರಿ ಬ್ಯಾಟಿಂಗ್
20 ಓವರ್ಗಳ ಮುಕ್ತಾಯದ ವೇಳೆಗೆ 114 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ (56) ಹಾಗೂ ಕುಸಾಲ್ ಪೆರೇರಾ (54) ಬ್ಯಾಟಿಂಗ್.
SL 114/0 (20)
ಮೊದಲ 20 ಓವರ್ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ವಿಫಲರಾದ ಆಸ್ಟ್ರೇಲಿಯಾ ಬೌಲರ್ಗಳು.
AUS vs SL ICC World Cup 2023 Live Score: ಆಕರ್ಷಕ ಬೌಂಡರಿ
ಆ್ಯಡಂ ಝಂಪಾ ಎಸೆದ 16ನೇ ಓವರ್ನ 2ನೇ ಎಸೆತದಲ್ಲಿ ಪುಲ್ ಶಾಟ್ ಮೂಲಕ ಫೋರ್ ಬಾರಿಸಿದ ಎಡಗೈ ದಾಂಡಿಗ ಕುಸಾಲ್ ಪೆರೇರಾ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 91/0 (16)
AUS vs SL ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ 84 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಐವರು ಬೌಲರ್ಗಳನ್ನು ಬಳಸಿದರೂ ಒಂದೇ ಒಂದು ವಿಕೆಟ್ ಪಡೆಯಲು ವಿಫಲರಾದ ಆಸ್ಟ್ರೇಲಿಯಾ.
SL 84/0 (15)
AUS vs SL ICC World Cup 2023 Live Score: ಪೆರೇರಾ ಪವರ್
ಮಿಚೆಲ್ ಸ್ಟಾರ್ಕ್ ಎಸೆದ 12ನೇ ಓವರ್ನ ಮೂರನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕುಸಾಲ್ ಪೆರೇರಾ.
ಶ್ರೀಲಂಕಾ ತಂಡದ ಆರಂಭಿಕರಿಂದ ಅತ್ಯುತ್ತಮ ಬ್ಯಾಟಿಂಗ್.
ವಿಕೆಟ್ ಪಡೆಯಲು ಪರದಾಡುತ್ತಿರುವ ಆಸೀಸ್ ಬೌಲರ್ಗಳು.
SL 70/0 (13)
AUS vs SL ICC World Cup 2023 Live Score: ಆಕರ್ಷಕ ಬೌಂಡರಿ
ಪ್ಯಾಟ್ ಕಮಿನ್ಸ್ ಎಸೆದ 11ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಪಾತುಮ್ ನಿಸ್ಸಂಕಾ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 57/0 (11)
AUS vs SL ICC World Cup 2023 Live Score: 10 ಓವರ್ಗಳು ಮುಕ್ತಾಯ
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಪಾತುಮ್ ನಿಸ್ಸಂಕಾ.
10 ಓವರ್ಗಳ ಮುಕ್ತಾಯದ ವೇಳೆಗೆ 51 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 51/0 (10)
AUS vs SL ICC World Cup 2023 Live Score: ಶ್ರೀಲಂಕಾ ಉತ್ತಮ ಬ್ಯಾಟಿಂಗ್
8 ಓವರ್ಗಳ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 42 ರನ್ ಕಲೆಹಾಕಿದ ಶ್ರೀಲಂಕಾ.
ವಿಕೆಟ್ ಪಡೆಯಲು ಆಸ್ಟ್ರೇಲಿಯಾ ಬೌಲರ್ಗಳ ಹರಸಾಹಸ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 42/0 (8)
AUS vs SL ICC World Cup 2023 Live Score: ಆಕರ್ಷಕ ಬೌಂಡರಿ
ಪ್ಯಾಟ್ ಕಮಿನ್ಸ್ ಎಸೆದ 7ನೇ ಓವರ್ನ ಮೊದಲ ಎಸೆತದಲ್ಲಿ ಫೈನ್ ಲೆಗ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕುಸಾಲ್ ಪೆರೇರಾ.
7 ಓವರ್ಗಳ ಮುಕ್ತಾಯಕ್ಕೆ ಶ್ರೀಲಂಕಾ ತಂಡದ ಸ್ಕೋರ್ 39.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 39/0 (7)
AUS vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಪಾತುಮ್ ನಿಸ್ಸಂಕಾ.
5 ಓವರ್ಗಳ ಮುಕ್ತಾಯದ ವೇಳೆಗೆ 26 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 26/0 (5)
AUS vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಜೋಶ್ ಹ್ಯಾಝಲ್‌ವುಡ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಕುಸಾಲ್ ಪೆರೇರಾ.
3ನೇ ಎಸೆತದಲ್ಲಿ ಪೆರೇರಾ ಬ್ಯಾಟ್ನಿಂದ ಸ್ಟ್ರೈಟ್ ಡ್ರೈವ್ ಫೋರ್.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 21/0 (4)
AUS vs SL ICC World Cup 2023 Live Score: ಶ್ರೀಲಂಕಾ ಎಚ್ಚರಿಕೆಯ ಬ್ಯಾಟಿಂಗ್
ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಶ್ರೀಲಂಕಾ ಬ್ಯಾಟರ್ಗಳು.
3 ಓವರ್ಗಳಲ್ಲಿ 13 ರನ್ ಕಲೆಹಾಕಿದ ಲಂಕಾ ಆರಂಭಿಕರು.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
SL 13/0 (3)
AUS vs SL ICC World Cup 2023 Live Score: ಹ್ಯಾಝಲ್‌ವುಡ್ ಉತ್ತಮ ಬೌಲಿಂಗ್
2ನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
SL 10/0 (2)
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ.
AUS vs SL ICC World Cup 2023 Live Score: ಮೊದಲ ಓವರ್ನಲ್ಲೇ ಮೊದಲ ಬೌಂಡರಿ
ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಪಾತುಮ್ ನಿಸ್ಸಂಕಾ.
ಕೊನೆಯ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ನತ್ತ ಮತ್ತೊಂದು ಫೋರ್ ಬಾರಿಸಿದ ನಿಸ್ಸಂಕಾ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
SL 9/0 (1)
Karnataka Breaking News Live: ನಿಗಮ ಮಂಡಳಿ ನೇಮಕಕ್ಕೆ ಎಐಸಿಸಿ ಅಧ್ಯಕ್ಷ ಖರ್ಗೆ ಗ್ರೀನ್ ಸಿಗ್ನಲ್
ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಇಂದು ಬೆಳಗ್ಗೆ ನಡೆದ ಸಭೆಯಲ್ಲಿನಿಗಮ ಮಂಡಳಿ ನೇಮಕಕ್ಕೆ ಮಲ್ಲಿಕಾರ್ಜುನ್ ಖರ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಯಾರನ್ನ ನಿಗಮ ಮಂಡಳಿ ನೇಮಕ ಮಾಡಬೇಕು ಎಂಬ ಗೊಂದಲ ಇತ್ತು. ಸಿಎಂ ಹಾಗೂ ಡಿಸಿಎಂ ನಡುವೆ ಗೊಂದಲ ಏರ್ಪಟ್ಟಿತ್ತು. ಕಾಂಗ್ರೆಸ್ ಹೈಕಮಾಂಡ್ ಗೊಂದಲಗಳಿಗೆ ತೆರೆ ಎಳೆದಿದೆ. ಶಾಸಕರು, ಪರಿಷತ್ ಸದಸ್ಯರು, ಹಾಗೂ ಕಾರ್ಯಕರ್ತರನ್ನ ಒಳಗೊಂಡ ಪಟ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಶಾಸಕರು ಹಾಗೂ ಕಾರ್ಯಕರ್ತರನ್ನೊಳಗೊಂಡ ಪಟ್ಟಿ ಸಿದ್ಧವಾಗಲಿದೆ. ಒಟ್ಟು 45 ರಿದ 50 ಮಂದಿಗೆ ನಿಗಮ ಮಂಡಳಿ ನೇಮಕ ನಡೆಯಲಿದೆ. ಪಕ್ಷ ನಿಷ್ಠರಿಗೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಆದ್ಯತೆ ನೀಡಲು ಖರ್ಗೆ ಸೂಚಿಸಿದ್ದಾರೆ.
AUS vs SL ICC World Cup 2023 Live Score: ಶ್ರೀಲಂಕಾ ಇನಿಂಗ್ಸ್ ಆರಂಭ
ಶ್ರೀಲಂಕಾ ತಂಡದ ಆರಂಭಿಕರು: ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪೆರೇರಾ.
ಆಸ್ಟ್ರೇಲಿಯಾ ಪರ ಮೊದಲ ಓವರ್: ಎಡಗೈ ವೇಗಿ ಮಿಚೆಲ್ ಸ್ಟಾರ್ಕ್.
ಶ್ರೀಲಂಕಾ ಬ್ಯಾಟಿಂಗ್ ಲೈನಪ್: ಕುಸಾಲ್ ಮೆಂಡಿಸ್ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೆರಾ (ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ದುಶನ್ ಹೇಮಂತ.
Karnataka Breaking News Live: ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಶಾಸಕ ಬಿ.ವೈ.ವಿಜಯೇಂದ್ರ ಕಿಡಿ
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಹಣ ಸಂಗ್ರಹಿಸಿ ಪಂಚರಾಜ್ಯಗಳಿಗೆ ಕಳಿಸ್ತಿರುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ಸಿಗರು ಐಟಿ ದಾಳಿ ರಾಜಕೀಯ ಪ್ರೇರಿತ ಅಂತಾ ಹೇಳ್ತಿದ್ದಾರೆ. ಆದರೆ ಆ ಹಣ ಕಾಂಗ್ರೆಸ್ನದ್ದಲ್ಲ ಅಂತಾ ಕಾಂಗ್ರೆಸ್ನವರು ಹೇಳಿಲ್ಲ. ಈ ಹಣ ಕಾಂಗ್ರೆಸ್ಗೆ ಸೇರಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಇದು ಲೂಟಿ ಸರ್ಕಾರ, ಎಟಿಎಂ ಸರ್ಕಾರ ಎಂದು ವಿಜಯೇಂದ್ರ ಕಿಡಿಕಾರಿದರು.
AUS vs SL ICC World Cup 2023 Live Score: ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್.
AUS vs SL ICC World Cup 2023 Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಚಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ.
AUS vs SL ICC World Cup 2023 Live Score: ಟಾಸ್ ಗೆದ್ದ ಶ್ರೀಲಂಕಾ
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - Oct 16,2023 1:33 PM